AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬೈನಲ್ಲಿ ಜಗಳ ಆದ ಬಳಿಕ ನಟಿ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ? ಅಸಲಿ ವಿಷಯ ಏನು?

ಕ್ಲಬ್​ ಉದ್ಘಾಟನೆಗೆ ತೆರಳಿದ್ದ ವೇಳೆ ಪೂಜಾ ಹೆಗ್ಡೆ ಜಗಳ ಮಾಡಿಕೊಂಡರು ಎಂಬ ಸುದ್ದಿ ಹರಡಿತು. ಜಗಳದ ಬಳಿಕ ಅವರಿಗೆ ಕೊಲೆ ಬೆದರಿಕೆ ಹಾಕಲಾಯಿತು ಎಂಬ ವಿಷಯ ಕೇಳಿ ಅಭಿಮಾನಿಗಳು ಆಂತಕ ವ್ಯಕ್ತಪಡಿಸಿದರು. ‘ದಯವಿಟ್ಟು ನೀವು ಬೇಗ ಭಾರತಕ್ಕೆ ವಾಪಸ್​ ಬನ್ನಿ’ ಎಂದು ಅನೇಕರು ಕಮೆಂಟ್​ ಮಾಡಿದರು.

ದುಬೈನಲ್ಲಿ ಜಗಳ ಆದ ಬಳಿಕ ನಟಿ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ? ಅಸಲಿ ವಿಷಯ ಏನು?
ಪೂಜಾ ಹೆಗ್ಡೆ
Follow us
ಮದನ್​ ಕುಮಾರ್​
|

Updated on: Dec 13, 2023 | 4:31 PM

ನಟಿ ಪೂಜಾ ಹೆಗ್ಡೆ (Pooja Hegde) ಅವರಿಗೆ ದುಬೈನಲ್ಲಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಸುದ್ದಿ ಹರಡಿದೆ. ಖಾಸಗಿ ಕಾರ್ಯಕ್ರಮದ ಸಲುವಾಗಿ ದುಬೈಗೆ (Dubai) ತೆರಳಿದ್ದ ಅವರು ಅಲ್ಲಿ ಜಗಳ ಮಾಡಿಕೊಂಡಿದ್ದಾರೆ. ಆ ಘಟನೆ ಬಳಿಕ ಅವರಿಗೆ ಕೊಲೆ ಬೆದರಿಕೆ (Death Threat) ಹಾಕಲಾಗಿದೆ ಎಂದು ಪಾಪರಾಜಿ ಸೋಶಿಯಲ್​ ಮೀಡಿಯಾ ಖಾತೆಯೊಂದರಲ್ಲಿ ಪೋಸ್ಟ್​ ಮಾಡಲಾಗಿದೆ. ಇದನ್ನು ನೋಡಿ ಪೂಜಾ ಹೆಗ್ಡೆ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಈ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ಮಾಧ್ಯಮಗಳಿಗೆ ನಟಿಯ ಆಪ್ತರು ಹೇಳಿಕೆ ನೀಡಿದ್ದಾರೆ. ಆ ಬಳಿಕ ಪೂಜಾ ಹೆಗ್ಡೆ ಫ್ಯಾನ್ಸ್​ ನಿಟ್ಟುಸಿರು ಬಿಟ್ಟಿದ್ದಾರೆ.

ಪೂಜಾ ಹೆಗ್ಡೆ ಅವರಿಗೆ ಭಾರತದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಲ್ಲಿ ಕೂಡ ಅಭಿಮಾನಿಗಳು ಇದ್ದಾರೆ. ಭಾರತದ ಸಿನಿಮಾಗಳು ದುಬೈನಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತವೆ. ಹಾಗಾಗಿ, ಇಂಡಿಯಾದ ಅನೇಕ ಸೆಲೆಬ್ರಿಟಿಗಳನ್ನು ಅಲ್ಲಿಗೆ ಅತಿಥಿಯಾಗಿ ಆಹ್ವಾನಿಸಲಾಗುತ್ತದೆ. ಕ್ಲಬ್​ವೊಂದರ ಉದ್ಘಾಟನೆ ಸಲುವಾಗಿ ಪೂಜಾ ಹೆಗ್ಡೆ ಅವರು ದುಬೈಗೆ ತೆರಳಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಹಸಿರು ಸೀರೆ ಧರಿಸಿ ಕಂಗೊಳಿಸಿದ ಕರಾವಳಿ ಚೆಲುವೆ ಪೂಜಾ ಹೆಗ್ಡೆ

ಕ್ಲಬ್​ ಉದ್ಘಾಟನೆಗೆ ತೆರಳಿದ್ದ ವೇಳೆ ಪೂಜಾ ಹೆಗ್ಡೆ ಜಗಳ ಮಾಡಿಕೊಂಡರು ಎಂಬ ಗಾಳಿ ಸುದ್ದಿ ಹರಡಿತು. ಜಗಳದ ಬಳಿಕ ಅವರಿಗೆ ಜೀವ ಬೆದರಿಕೆ ಹಾಕಲಾಯಿತು ಎಂಬ ವಿಷಯ ಕೇಳಿ ಅಭಿಮಾನಿಗಳು ಆಂತಕ ವ್ಯಕ್ತಪಡಿಸಿದರು. ‘ದಯವಿಟ್ಟು ನೀವು ಬೇಗ ಭಾರತಕ್ಕೆ ವಾಪಸ್​ ಬನ್ನಿ’ ಎಂದು ಅನೇಕರು ಕಮೆಂಟ್​ ಮಾಡಿದರು. ಆದರೆ ಕೊಲೆ ಬೆದರಿಕೆಯ ಸುದ್ದಿ ನಿಜವಲ್ಲ ಎಂಬುದು ನಂತರ ಬಹಿರಂಗ ಆಯಿತು.

ಇದನ್ನೂ ಓದಿ: Goldy Brar: ‘ಸಲ್ಮಾನ್​ ಖಾನ್​ನನ್ನು ಖಂಡಿತಾ ಕೊಲ್ಲುತ್ತೇನೆ’: ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಬಹಿರಂಗವಾಗಿ ಕೊಲೆ ಬೆದರಿಕೆ

ಸಿನಿಮಾ ವಿಚಾರಕ್ಕೆ ಬರುವುದಾದರೆ, ಇತ್ತೀಚೆಗೆ ಪೂಜಾ ಹೆಗ್ಡೆ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಿಕ್ಕಿಲ್ಲ. ಅವರು ನಟಿಸಿದ ಸಿನಿಮಾಗಳು ಸಾಲು ಸಾಲು ಸೋಲು ಕಂಡಿವೆ. ಹಾಗಿದ್ದರೂ ಕೂಡ ಅವರಿಗೆ ಬರುವ ಅವಕಾಶಗಳು ಕಡಿಮೆ ಆಗಿಲ್ಲ. ಬಾಲಿವುಡ್​ ನಟ ಶಾಹಿದ್​ ಕಪೂರ್​ ಜೊತೆ ಪೂಜಾ ಹೆಗ್ಡೆ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. 2024ರ ಅಕ್ಟೋಬರ್​ ತಿಂಗಳಲ್ಲಿ ಆ ಸಿನಿಮಾ ರಿಲೀಸ್​ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ