AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪಠಾಣ್’ ನಿರ್ದೇಶಕನ ಜತೆ ನಟ ಪ್ರಭಾಸ್ ಸಿನಿಮಾ; ಮಾಸ್ ಆ್ಯಕ್ಷನ್​​​ನಲ್ಲಿ ಡಾರ್ಲಿಂಗ್

ಸಿದ್ದಾರ್ಥ್ ಆನಂದ್ ಅವರ ಸಿನಿಮಾಗಳು ಸಾಕಷ್ಟು ಮಾಸ್ ಆಗಿರುತ್ತವೆ. ಈಗ ಅವರು ಟಾಲಿವುಡ್ ನಟ ಪ್ರಭಾಸ್ ಜತೆ ಕೈ ಜೋಡಿಸಿದ್ದಾರೆ.

‘ಪಠಾಣ್’ ನಿರ್ದೇಶಕನ ಜತೆ ನಟ ಪ್ರಭಾಸ್ ಸಿನಿಮಾ; ಮಾಸ್ ಆ್ಯಕ್ಷನ್​​​ನಲ್ಲಿ ಡಾರ್ಲಿಂಗ್
ಪ್ರಭಾಸ್​-ಸಿದ್ದಾರ್ಥ್ ಆನಂದ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jan 16, 2023 | 10:50 AM

Share

‘ಬಾಹುಬಲಿ 2’ ಸಿನಿಮಾ ತೆರೆಗೆ ಬಂದು ಹಲವು ವರ್ಷಗಳೇ ಕಳೆದಿವೆ. ಈ ಚಿತ್ರದ ಬಳಿಕ ಪ್ರಭಾಸ್​​ಗೆ (Actor Prabhas) ದೊಡ್ಡ ಮಟ್ಟದ ಯಶಸ್ಸು ಸಿಕ್ಕಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ಬೇಸರವಂತೂ ಇದೆ. ಆದರೆ, ಅವರು ಸಾಲು ಸಾಲು ಸಿನಿಮಾ ಒಪ್ಪಿಕೊಂಡಿರುವುದರಿಂದ ಯಾವುದಾದರೂ ಒಂದು ಚಿತ್ರವಾದರೂ ಹಿಟ್ ಆಗಬಹುದು ಎನ್ನುವ ನಿರೀಕ್ಷೆ ಅಭಿಮಾನಿಗಳದ್ದು. ಹೀಗಿರುವಾಗಲೇ ಪ್ರಭಾಸ್ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ. ಅದೂ ‘ಪಠಾಣ್​’ ಚಿತ್ರದ ನಿರ್ದೇಶಕ ಸಿದ್ದಾರ್ಥ್​ ಆನಂದ್ ಜತೆ ಎಂಬುದು ವಿಶೇಷ.

ಸಿದ್ದಾರ್ಥ್ ಆನಂದ್ ಅವರ ಸಿನಿಮಾಗಳು ಸಾಕಷ್ಟು ಮಾಸ್ ಆಗಿರುತ್ತವೆ. ಅವರ ನಿರ್ದೇಶನದ ಸಿನಿಮಾಗಳಲ್ಲಿ ಹೊಡಿಬಡಿ ದೃಶ್ಯಗಳಂತೂ ಮಿತಿಮೀರಿ ಇರುತ್ತವೆ. ಈಗ ಸಿದ್ದಾರ್ಥ್​ ಆನಂದ್ ನಿರ್ದೇಶನ ಮಾಡುತ್ತಿರುವ ‘ಪಠಾಣ್​’ ಚಿತ್ರದಲ್ಲೂ ಮಾಸ್ ಅಂಶ ಇದೆ. ಇದು ಟ್ರೇಲರ್ ಮೂಲಕ ಸಾಬೀತಾಗಿದೆ. ಈ ಮೊದಲು ತೆರೆಗೆ ಬಂದ ‘ವಾರ್​’ ಚಿತ್ರದಲ್ಲೂ ಆ್ಯಕ್ಷನ್ ಇತ್ತು. ಈಗ ಅವರು ಟಾಲಿವುಡ್ ನಟ ಪ್ರಭಾಸ್ ಜತೆ ಕೈ ಜೋಡಿಸಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್​ನ ನವೀನ್ ಯೆರ್ನೇನಿ ಅವರು ಇತ್ತೀಚೆಗೆ ‘ಎನ್​ಬಿಕೆ ಸೀಸನ್ 2’ರಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರಿಗೆ ಪ್ರಭಾಸ್ ಜತೆಗಿನ ಹೊಸ ಸಿನಿಮಾ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದನ್ನು ನವೀನ್ ಒಪ್ಪಿದ್ದಾರೆ. ಜತೆಗೆ ಈ ಸಿನಿಮಾಗೆ ಬಾಲಿವುಡ್ ನಿರ್ದೇಶಕ ಸಿದ್ದಾರ್ಥ್​ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ ಎನ್ನುವ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ
Image
Adipurush: ಪ್ರಭಾಸ್​ ಫ್ಯಾನ್ಸ್​ ಮನ ಗೆದ್ದ ‘ಆದಿಪುರುಷ್​’ ಟೀಸರ್​; ಇಲ್ಲಿದೆ ರಾಮ-ರಾವಣರ ಮುಖಾಮುಖಿ
Image
Adipurush Teaser: ‘ಆದಿಪುರುಷ್​’ ಟೀಸರ್​ ಬಿಡುಗಡೆ; ಅಯೋಧ್ಯೆಯಲ್ಲಿ ರಾಮನಾಗಿ ದರ್ಶನ ನೀಡಿದ ಪ್ರಭಾಸ್​
Image
Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್​; ‘ಸಲಾರ್​’ ಶೂಟಿಂಗ್​ ಮತ್ತೆ ಶುರು
Image
Prabhas: ದೊಡ್ಡಪ್ಪನ ಅಂತ್ಯ ಸಂಸ್ಕಾರಕ್ಕೆ ಬಂದ ಫ್ಯಾನ್ಸ್​ಗೆ ಊಟದ ವ್ಯವಸ್ಥೆ ಮಾಡಿಸಿ ಕಾಳಜಿ ತೋರಿದ ಪ್ರಭಾಸ್​

ಸಿದ್ದಾರ್ಥ್ ಆನಂದ್ ಜತೆಗಿನ ಚಿತ್ರದಲ್ಲಿ ಪ್ರಭಾಸ್ ಮಾಸ್ ಅವತಾರ ತಾಳಲಿದ್ದಾರೆ ಎಂಬುದು ಖಚಿತವಾಗಿದೆ. ಇದನ್ನು ಕೇಳಿ ಪ್ರಭಾಸ್ ಫ್ಯಾನ್ಸ್ ಖುಷಿಯಾಗಿದ್ದಾರೆ. ‘ರಾಧೆ ಶ್ಯಾಮ್​’ ಚಿತ್ರದಲ್ಲಿ ಪ್ರಭಾಸ್ ಯಾವುದೇ ಪೈಟ್ ಮಾಡಿರಲಿಲ್ಲ. ಹೀಗಾಗಿ, ಪ್ರಭಾಸ್ ಮಾಸ್ ಅವತಾರ ತಾಳಲಿ ಎಂದು ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: Prabhas: ‘ಸಲ್ಮಾನ್​ ಖಾನ್​ ಮದುವೆ ಆದ ನಂತರವೇ ನನ್ನ ವಿವಾಹ’: ಎಲ್ಲರೆದುರು ಘೋಷಿಸಿದ ಪ್ರಭಾಸ್​

ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ‘ಆದಿಪುರುಷ್​’, ‘ಪ್ರಾಜೆಕ್ಟ್ ಕೆ’, ‘ಸಲಾರ್​’ ಮೊದಲಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್​’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ