ಆಂಧ್ರ-ತೆಲಂಗಾಣ ಪ್ರವಾಹ, ಪರಿಹಾರ ಕಾರ್ಯಕ್ಕೆ ಭಾರಿ ಮೊತ್ತದ ದೇಣಿಗೆ ನೀಡಿದ

ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ತೆಲುಗು ನಟರು ಪ್ರವಾಹ ಪೀಡಿತರ ನೆರವಿಗೆ ಧಾವಿಸಿದ್ದಾರೆ. ಹಲವು ಸ್ಟಾರ್ ನಟರು ಕೋಟ್ಯಂತರ ರೂಪಾಯಿ ಹಣವನ್ನು ಎರಡೂ ರಾಜ್ಯಗಳ ಸಿಎಂ ಪರಿಹಾರ ನಿಧಿಗೆ ದೇಣಿಗೆ ಮಾಡಿದ್ದಾರೆ. ನಟ ಪ್ರಭಾಸ್ ಅಂತೂ ಭಾರಿ ಮೊತ್ತವನ್ನೇ ದೇಣಿಗೆಯಾಗಿ ನೀಡಿದ್ದಾರೆ.

ಆಂಧ್ರ-ತೆಲಂಗಾಣ ಪ್ರವಾಹ, ಪರಿಹಾರ ಕಾರ್ಯಕ್ಕೆ ಭಾರಿ ಮೊತ್ತದ ದೇಣಿಗೆ ನೀಡಿದ
Follow us
|

Updated on:Sep 04, 2024 | 3:25 PM

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರ ಪ್ರದೇಶ, ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ವರೆಗೆ 40 ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಮಾತ್ರವಲ್ಲದೆ ನೂರಾರು ಮಂದಿ ಗಾಯಾಳುಗಳಾಗಿದ್ದಾರೆ. ಸಾವಿರ ಕೋಟಿ ಮೌಲ್ಯದ ಆಸ್ತಿ ನಷ್ಟವಾಗಿದೆ. ಹಲವಾರು ಮಂದಿ ಮನೆ, ಜಾನುವಾರ ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಆಂಧ್ರ ಹಾಗೂ ತೆಲಂಗಾಣ ರಾಜ್ಯ ಸರ್ಕಾರಗಳು ಪ್ರವಾಹ ಪೀಡಿತರ ನೆರವಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ತೆಲುಗು ಚಿತ್ರರಂಗ ಸಹ ಎರಡೂ ರಾಜ್ಯಗಳ ಸರ್ಕಾರಗಳ ನೆರವಿಗೆ ನಿಂತಿದೆ. ಅದರಲ್ಲೂ ಕೆಲ ಸ್ಟಾರ್ ನಟರುಗಳು ದೊಡ್ಡ ಮೊತ್ತವನ್ನು ಪರಿಹಾರ ಕಾರ್ಯಗಳಿಗಾಗಿ ನೀಡಿದ್ದಾರೆ.

ನಟ ಜೂ ಎನ್​ಟಿಆರ್ ನಿನ್ನೆಯಷ್ಟೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ತಲಾ 50 ಲಕ್ಷ ರೂಪಾಯಿಗಳಂತೆ ಒಂದು ಕೋಟಿ ರೂಪಾಯಿ ನೆರವನ್ನು ಘೋಷಣೆ ಮಾಡಿದ್ದರು. ಅದರ ಬಳಿಕ ‘ಕಲ್ಕಿ 2898 ಎಡಿ’ ಚಿತ್ರತಂಡ ತಲಾ 25 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿತ್ತು. ಆ ಬಳಿಕ ನಟ ಮೆಗಾಸ್ಟಾರ್ ಚಿರಂಜೀವಿ ಎರಡು ರಾಜ್ಯಗಳಿಗೆ ತಲಾ 50 ಲಕ್ಷ ರೂಪಾಯಿಯಂತೆ ಒಂದು ಕೋಟಿ ರೂಪಾಯಿ ದೇಣಿಗೆ ಪ್ರಕಟಿಸಿದ್ದಾರೆ. ಇದೀಗ ತೆಲುಗು ಚಿತ್ರರಂಗದ ದೊಡ್ಡ ಸ್ಟಾರ್ ಎಂದೇ ಕರೆಸಿಕೊಳ್ಳುವ ಪ್ರಭಾಸ್ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಬರೋಬ್ಬರಿ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ಇದನ್ನೂ ಓದಿ: ಆಂಧ್ರ-ತೆಲಂಗಾಣ ಪ್ರವಾಹ: ಸಹಾಯ ಹಸ್ತ ಚಾಚಿದ ಜೂ ಎನ್​ಟಿಆರ್

ತೆಲಂಗಾಣ ಸಿಎಂ ಪರಿಹಾರ ನಿಧಿಗೆ 1 ಕೋಟಿ ಹಾಗೂ ಆಂಧ್ರ ಪ್ರದೇಶ ಸಿಎಂ ರಿಲೀಫ್ ಫಂಡ್​ಗೆ 1 ಕೋಟಿ ರೂಪಾಯಿಗಳಂತೆ ಬರೋಬ್ಬರಿ 5 ಕೋಟಿ ರೂಪಾಯಿಗಳನ್ನು ಪ್ರಭಾಸ್ ದೇಣಿಗೆಯಾಗಿ ನೀಡಿದ್ದಾರೆ. ಈ ಹಿಂದೆ ಕೇರಳದಲ್ಲಿ ಭಾರಿ ಪ್ರವಾಹ ಉಂಟಾದಾಗ ನಟ ಪ್ರಭಾಸ್ ಒಂದು ಕೋಟಿ ರೂಪಾಯಿ ಹಣವನ್ನು ದೇಣಿಗೆ ನೀಡಿದ್ದರು. ಈಗ ತಮ್ಮ ಸ್ವಂತ ರಾಜ್ಯದಲ್ಲೇ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಪರಿಹಾರ ಮೊತ್ತವನ್ನು ಹೆಚ್ಚು ಮಾಡಿ ಐದು ಕೋಟಿ ರೂಪಾಯಿ ಹಣ ನೀಡಿದ್ದಾರೆ.

ಇವರುಗಳು ಮಾತ್ರವೇ ಅಲ್ಲದೆ ಮಹೇಶ್ ಬಾಬು ತಲಾ 50 ಲಕ್ಷದಂತೆ 1 ಕೋಟಿ, ನಟ, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ 1 ಕೋಟಿ, ನಟ ಅಲ್ಲು ಅರ್ಜುನ್ 1 ಕೋಟಿ, ನಂದಮೂರಿ ಬಾಲಕೃಷ್ಣ 1 ಕೋಟಿ, ಯುವನಟ ವಿಶ್ವಕ್ ಸೇನ್ 10 ಲಕ್ಷ, ಸಿದ್ದು ಜೊನ್ನಗಡ್ಡ 30 ಲಕ್ಷ, ನಟಿ ಅನನ್ಯಾ ನಾಗಳ್ಳ ಐದು ಲಕ್ಷ ರೂಪಾಯಿ ಹಣ ಸಹಾಯ ಮಾಡಿದ್ದಾರೆ. ಇನ್ನು ಆಂಧ್ರ ಪ್ರದೇಶ ರಾಜ್ಯದ ಉಪಮುಖ್ಯಮಂತ್ರಿಯೂ ಆಗಿರುವ ಪವನ್ ಕಲ್ಯಾಣ್, ಎರಡು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಇರುವ ಕಾರಣ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳದೇ ಇರಲು ನಿರ್ಧರಿಸಿದ್ದು, ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:55 pm, Wed, 4 September 24

ಕೆಲವು ಅನುಮಾನವಿತ್ತು, ಕೇಳಿದ್ದೇನೆ: ದರ್ಶನ್ ಭೇಟಿ ಬಳಿಕ ಲಾಯರ್ ಮಾತು
ಕೆಲವು ಅನುಮಾನವಿತ್ತು, ಕೇಳಿದ್ದೇನೆ: ದರ್ಶನ್ ಭೇಟಿ ಬಳಿಕ ಲಾಯರ್ ಮಾತು
ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ಪ್ಯಾರಾ ಅಥ್ಲೀಟ್ಸ್
ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ಪ್ಯಾರಾ ಅಥ್ಲೀಟ್ಸ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?