‘ಕಲ್ಕಿ 2898 ಎಡಿ’ ಸಿನಿಮಾ ನೋಡಲು ಜಪಾನ್ನಿಂದ ಭಾರತಕ್ಕೆ ಬಂದ ಪ್ರಭಾಸ್ ಫ್ಯಾನ್ಸ್
‘ಕಲ್ಕಿ 2898 ಎಡಿ’ ಚಿತ್ರ ಗುರುವಾರ (ಜುಲೈ 4) 22 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಸಿನಿಮಾದ ಗಳಿಕೆ 414 ಕೋಟಿ ರೂಪಾಯಿ ಆಗಿದೆ. ವಿಶ್ವಾದ್ಯಂತ ಸಿನಿಮಾ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರವನ್ನು ನೋಡಲು ಜಪಾನ್ನಿಂದ ಫ್ಯಾನ್ಸ್ ಆಗಮಿಸಿದ್ದರು.
ಪ್ರಭಾಸ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಕೇವಲ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಅವರಿಗೆ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಘಟನೆಯೇ ಇದಕ್ಕೆ ಸಾಕ್ಷಿ. ಹೌದು, ‘ಕಲ್ಕಿ 2898 ಎಡಿ’ ಸಿನಿಮಾ ವೀಕ್ಷಿಸಲು ಜಪಾನ್ನ ಕೆಲವರು ಭಾರತಕ್ಕೆ ಆಗಮಿಸಿದ್ದಾರೆ. ಇದು ಪ್ರಭಾಸ್ ಅಭಿಮಾನಿ ಬಳಗ ಎಷ್ಟು ದೊಡ್ಡದಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿ ಆಗಿದೆ. ಸದ್ಯ ಈ ಫೋಟೋಗಳು ವೈರಲ್ ಆಗುತ್ತಿವೆ.
‘ಕಲ್ಕಿ 2898 ಎಡಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರವನ್ನು ನಾಗ್ ಅಶ್ವಿನ್ ಅವರು ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮೊದಲಾದವರು ನಟಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಮುಖ ಕಲಾವಿದರು ಅತಿಥಿ ಪಾತ್ರ ಮಾಡಿದ್ದಾರೆ. ಹೀಗಾಗಿ ‘ಕಲ್ಕಿ 2898 ಎಡಿ’ ಸಿನಿಮಾದ ಕ್ರೇಜ್ ದೊಡ್ಡದಾಗಿದೆ. ‘ಕಲ್ಕಿ 2898 ಎಡಿ’ ಚಿತ್ರವನ್ನು ಜಪಾನ್ನಿಂದ ಆಗಮಿಸಿ ವೀಕ್ಷಿಸಿದ್ದಾರೆ.
ಜಪಾನ್ನ ಮೂವರು ಹೈದರಾಬಾದ್ಗೆ ಬಂದಿದ್ದಾರೆ. ಈ ವೇಳೆ ಅವರು ಭೈರವ ಮಾನ್ಸ್ಟರ್ ಟ್ರಕ್ ಎದುರು ಪೋಸ್ಟರ್ ಹಿಡಿದು ನಿಂತಿದ್ದಾರೆ. ಆ ಬಳಿಕ ಅವರು ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಿದ ಬಳಿಕ ಅವರು ಭರ್ಜರಿ ಖುಷಿಪಟ್ಟಿದ್ದಾರೆ. ನಂತರ ಅವರು ಜಪಾನ್ಗೆ ಮರಳಿದ್ದಾರೆ. ಪ್ರಭಾಸ್ ಅವರಿಗೆ ಎಷ್ಟೊಂದು ದೊಡ್ಡ ಅಭಿಮಾನಿ ಬಳಗ ಇದೆ ಎಂದು ಎಲ್ಲರೂ ಅಚ್ಚರಿ ಹೊರಹಾಕಿದ್ದಾರೆ.
ಪ್ರಭಾಸ್ಗೆ ಜಪಾನ್ನಲ್ಲಿ ಅಭಿಮಾನಿ ಬಳಗ ಹುಟ್ಟಿಕೊಳ್ಳಲು ಒಂದು ಕಾರಣ ಇದೆ. ಈ ಮೊದಲು ‘ಬಾಹುಬಲಿ’, ‘ಬಾಹುಬಲಿ 2’ ಸಿನಿಮಾಗಳು ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಿದ್ದವು. ಈ ಸಿನಿಮಾಗಳನ್ನು ನೋಡಿದ ಅಲ್ಲಿನ ಮಂದಿ ಪ್ರಭಾಸ್ಗೆ ದೊಡ್ಡ ಫ್ಯಾನ್ಸ್ ಆಗಿದ್ದಾರೆ. ಈ ಕಾರಣದಿಂದಲೇ ಪ್ರಭಾಸ್ ಅವರ ಸಿನಿಮಾ ನೋಡಲು ಅಲ್ಲಿಂದ ಭಾರತಕ್ಕೆ ಬಂದಿದ್ದಾರೆ. ಈ ಮೊದಲು ಜೂನಿಯರ್ ಎನ್ಟಿಆರ್ ಹುಟ್ಟುಹಬ್ಬವನ್ನು ಜಪಾನ್ ಮಂದಿ ಆಚರಿಸಿದ್ದ ವಿಡಿಯೋ ವೈರಲ್ ಆಗಿತ್ತು. ‘ಆರ್ಆರ್ಆರ್’ ಸಿನಿಮಾ ನೋಡಿ ಅಲ್ಲಿಯವರು ಫ್ಯಾನ್ಸ್ ಆಗಿದ್ದರು.
ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಚಿತ್ರದಿಂದ ಪ್ರಭಾಸ್ ಮುಂದಿನ ಚಿತ್ರಗಳಿಗೆ ಶುರುವಾಗಿದೆ ಆತಂಕ
‘ಕಲ್ಕಿ 2898 ಎಡಿ’ ಸಿನಿಮಾ ಜೂನ್ 27ರಂದು ರಿಲೀಸ್ ಆಯಿತು. ಒಂದು ವಾರಕ್ಕೆ ಈ ಸಿನಿಮಾ 700+ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ 400 ಕೋಟಿ ರೂಪಾಯಿ ಬಾಚಿಕೊಂಡಿದೆ. ಅಮಿತಾಭ್ ಅವರ ಪಾತ್ರ ಜನಕ್ಕೆ ಹೆಚ್ಚು ಇಷ್ಟ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.