‘ಇಷ್ಟು ಒಳ್ಳೇ ಹುಡುಗನಿಗೆ ಇನ್ನೂ ಯಾಕೆ ಮದುವೆ ಆಗಿಲ್ಲ’; ಪ್ರೇಮಿಗಳ ದಿನವೇ ಪೂಜಾ ಹೆಗ್ಡೆ ನೇರ ಪ್ರಶ್ನೆ

| Updated By: ಮದನ್​ ಕುಮಾರ್​

Updated on: Feb 14, 2022 | 5:01 PM

ಪ್ರಭಾಸ್​ ವೃತ್ತಿಜೀವನದಲ್ಲಿ ‘ರಾಧೆ ಶ್ಯಾಮ್​’ ತುಂಬ ಡಿಫರೆಂಟ್​ ಆದ ಸಿನಿಮಾ ಎನ್ನಲಾಗಿದೆ. ಆ ಕಾರಣದಿಂದ ಈ ಚಿತ್ರದ ಮೇಲೆ ಅಭಿಮಾನಿಗಳು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

‘ಇಷ್ಟು ಒಳ್ಳೇ ಹುಡುಗನಿಗೆ ಇನ್ನೂ ಯಾಕೆ ಮದುವೆ ಆಗಿಲ್ಲ’; ಪ್ರೇಮಿಗಳ ದಿನವೇ ಪೂಜಾ ಹೆಗ್ಡೆ ನೇರ ಪ್ರಶ್ನೆ
ಪೂಜಾ ಹೆಗ್ಡೆ, ಪ್ರಭಾಸ್
Follow us on

ನಟ ಪ್ರಭಾಸ್​ (Prabhas) ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ‘ಸಲಾರ್​’, ‘ಆದಿಪುರುಷ್​​’, ‘ರಾಧೆ ಶ್ಯಾಮ್​’ ಸೇರಿದಂತೆ ಅನೇಕ ಚಿತ್ರಗಳು ಅವರ ಕೈಯಲ್ಲಿವೆ. ಈಗ ಅವರಿಗೆ 42 ವರ್ಷ ವಯಸ್ಸು. ಹಾಗಿದ್ದರೂ ಪ್ರಭಾಸ್​ ಮದುವೆ ಆಗಿಲ್ಲ. ನಟಿ ಅನುಷ್ಕಾ ಶೆಟ್ಟಿ ಜೊತೆ ಅವರ ಹೆಸರು ತಳುಕು ಹಾಕಿಕೊಂಡಿತ್ತಾದರೂ ಮದುವೆ ಬಗ್ಗೆ ಏನೂ ಪ್ರಸ್ತಾಪ ಆಗಲೇ ಇಲ್ಲ. ಚಿತ್ರರಂಗದಲ್ಲಿ ಪ್ರಭಾಸ್​ಗೆ ಒಳ್ಳೆಯ ಇಮೇಜ್​ ಇದೆ. ‘ಇಷ್ಟು ಒಳ್ಳೆಯ ವ್ಯಕ್ತಿ ಯಾಕೆ ಇನ್ನೂ ಮದುವೆ ಆಗಿಲ್ಲ’ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಇರಬಹುದು. ಅದೇ ಪ್ರಶ್ನೆಯನ್ನು ನಟಿ ಪೂಜಾ ಹೆಗ್ಡೆ (Pooja Hegde) ಕೂಡ ಕೇಳಿದ್ದಾರೆ. ಆದರೆ ಅವರು ಈ ಪ್ರಶ್ನೆ ಎತ್ತಿರುವುದು ರಿಯಲ್​ ಲೈಫ್​ನಲ್ಲಿ ಅಲ್ಲ. ಪೂಜಾ ಹೆಗ್ಡೆ ಮತ್ತು ಪ್ರಭಾಸ್​ ಜೊತೆಯಾಗಿ ‘ರಾಧೆ ಶ್ಯಾಮ್​’ (Radhe Shyam Movie) ಚಿತ್ರದಲ್ಲಿ ನಟಿಸಿದ್ದಾರೆ. ಪ್ರೇಮಿಗಳ ದಿನದ ಪ್ರಯುಕ್ತ ಈ ಸಿನಿಮಾದಿಂದ ಒಂದು ಗ್ಲಿಂಪ್ಸ್​ ಬಿಡುಗಡೆ ಮಾಡಲಾಗಿದೆ. ಆ ವಿಡಿಯೋದಲ್ಲಿ ಹೀಗೊಂದು ಡೈಲಾಗ್​ ಹೈಲೈಟ್​ ಆಗಿದೆ. ಅದನ್ನು ಪ್ರಭಾಸ್​ ಅವರ ರಿಯಲ್​ ಲೈಫ್​ ವ್ಯಕ್ತಿತ್ವಕ್ಕೂ ಅನ್ವಯಿಸಬಹುದು.

ಇಂದು (ಫೆ.14) ಪ್ರೇಮಿಗಳ ದಿನ. ಆ ಪ್ರಯುಕ್ತ ಅನೇಕ ಚಿತ್ರತಂಡಗಳು ಸಾಂಗ್​, ಪೋಸ್ಟರ್​, ಟೀಸರ್​ ಬಿಡುಗಡೆ ಮಾಡಿವೆ. ಅದೇ ರೀತಿ ‘ರಾಧೆ ಶ್ಯಾಮ್​’ ತಂಡದಿಂದ ಗ್ಲಿಂಪ್ಸ್​ ಬಿಡುಗಡೆ ಮಾಡಲಾಗಿದೆ. ಸಿನಿಮಾದಲ್ಲಿನ ಅನೇಕ ಸುಂದರ ದೃಶ್ಯಗಳನ್ನು ಜೋಡಿಸಿ ಈ ಗ್ಲಿಂಪ್ಸ್​ ಕಟ್ಟಿಕೊಡಲಾಗಿದೆ. ಅದರಲ್ಲಿ ಪ್ರಭಾಸ್​ಗೆ ಪೂಜಾ ಈ ರೀತಿ ಕೇಳುತ್ತಾರೆ. ‘ಚೆನ್ನಾಗಿ ಮಾತನಾಡುತ್ತೀಯ.. ಇಷ್ಟು ಒಳ್ಳೆಯ ಹುಡುಗನಿಗೆ ಮದುವೆ ಯಾಕೆ ಆಗಿಲ್ಲ ಇನ್ನೂ?’ ಎಂದು ಪೂಜಾ ಹೇಳಿದ ಡೈಲಾಗ್​ ಈಗ ಹೈಲೈಟ್​ ಆಗಿದೆ.

ಪ್ರಭಾಸ್​ ವೃತ್ತಿಜೀವನದಲ್ಲಿ ‘ರಾಧೆ ಶ್ಯಾಮ್​’ ತುಂಬ ಡಿಫರೆಂಟ್​ ಆದ ಸಿನಿಮಾ ಎನ್ನಲಾಗಿದೆ. ಆ ಕಾರಣದಿಂದ ಈ ಚಿತ್ರದ ಮೇಲೆ ಅಭಿಮಾನಿಗಳು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಲವರ್​ ಬಾಯ್​ ಗೆಟಪ್​ನಲ್ಲಿ ಪ್ರಭಾಸ್​ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೇಲರ್​ ಮತ್ತು ಸಾಂಗ್ಸ್​ ನೋಡಿದ ಸಿನಿಪ್ರಿಯರು ಫಿದಾ ಆಗಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟು ಹೊತ್ತಿಗಾಗಲೇ ‘ರಾಧೆ ಶ್ಯಾಮ್​’ ಚಿತ್ರ ತೆರೆಕಂಡಿರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿತು. ಈಗ ಮಾರ್ಚ್​ 11ರಂದು ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಮಾಪಕರು ತೀರ್ಮಾನಿಸಿದ್ದಾರೆ. ರಾಧಾಕೃಷ್ಣ ಕುಮಾರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ತೆಲುಗಿನಲ್ಲಿ ತಯಾರಾಗಿರುವ ‘ರಾಧೆ ಶ್ಯಾಮ್​’ ಚಿತ್ರ ಕನ್ನಡ, ಮಲಯಾಳಂ, ಹಿಂದಿ, ತಮಿಳು ಭಾಷೆಗಳಿಗೆ ಡಬ್​ ಆಗಿ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ:

‘ಸಲಾರ್​’ಗೂ ‘ಕೆಜಿಎಫ್​’ ಫಾರ್ಮುಲಾ; ಎರಡು ಪಾರ್ಟ್​​ನಲ್ಲಿ ಬರಲಿದೆ ಪ್ರಭಾಸ್​-ಪ್ರಶಾಂತ್​ ನೀಲ್​ ಸಿನಿಮಾ

ಪ್ರಭಾಸ್​ ಅಭಿಮಾನಿಗಳಿಗೆ ಶುರುವಾಗಿದೆ ಹೊಸ ಚಿಂತೆ; ‘ರಾಧೆ ಶ್ಯಾಮ್​’ ಚಿತ್ರಕ್ಕೆ ಕೈ ಕೊಡಬಹುದಾ ಗ್ರಾಫಿಕ್ಸ್​?