ಮೊದಲ ದಿನ ‘ರಾಧೆ ಶ್ಯಾಮ್​’ ಕಲೆಕ್ಷನ್​ ಎಷ್ಟು? ನೆಗೆಟಿವ್​ ವಿಮರ್ಶೆ ಸಿಕ್ಕರೂ ಅಬ್ಬಬ್ಬಾ ಇಷ್ಟೊಂದು ಕಮಾಯಿ

| Updated By: ಮದನ್​ ಕುಮಾರ್​

Updated on: Mar 12, 2022 | 2:06 PM

Radhe Shyam 1st Day Collection: ಉತ್ತರ ಭಾರತದಲ್ಲೂ ಪ್ರಭಾಸ್ ಅವರಿಗೆ ಫ್ಯಾನ್ಸ್​ ಇದ್ದಾರೆ. ಹಾಗಾಗಿ ಹಿಂದಿಯಲ್ಲಿ ‘ರಾಧೆ ಶ್ಯಾಮ್​’ ಭರ್ಜರಿ ಕಲೆಕ್ಷನ್​ ಮಾಡಲಿದೆ ಅಂತ ಊಹಿಸಲಾಗಿತ್ತು. ಆದರೆ ಹಿಂದಿ ವರ್ಷನ್​ನಿಂದ ಮೊದಲ ದಿನ ಆಗಿರುವುದು 4.5 ಕೋಟಿ ರೂಪಾಯಿ ಮಾತ್ರ.

ಮೊದಲ ದಿನ ‘ರಾಧೆ ಶ್ಯಾಮ್​’ ಕಲೆಕ್ಷನ್​ ಎಷ್ಟು? ನೆಗೆಟಿವ್​ ವಿಮರ್ಶೆ ಸಿಕ್ಕರೂ ಅಬ್ಬಬ್ಬಾ ಇಷ್ಟೊಂದು ಕಮಾಯಿ
ರಾಧೆ ಶ್ಯಾಮ್
Follow us on

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದ ‘ರಾಧೆ ಶ್ಯಾಮ್​’ ಚಿತ್ರ (Radhe Shyam Movie) ಶುಕ್ರವಾರ (ಮಾ.11) ತೆರೆ ಕಂಡಿತು. ರಾಧಾಕೃಷ್ಣ ಕುಮಾರ್​ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಪ್ರಭಾಸ್​ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ಅಭಿನಯಿಸಿದ್ದಾರೆ. ಹಲವು ಕಾರಣಗಳಿಂದಾಗಿ ಪ್ರಭಾಸ್ (Prabhas)​ ಅವರ ವೃತ್ತಿಜೀವನದಲ್ಲಿ ಈ ಸಿನಿಮಾ ಡಿಫರೆಂಟ್​ ಎನಿಸಿಕೊಂಡಿದೆ. ನೂರಾರೂ ಕೋಟಿ ರೂಪಾಯಿ ಬಂಡವಾಳ ಹಾಕಿ ‘ರಾಧೆ ಶ್ಯಾಮ್​’ ಸಿನಿಮಾ ನಿರ್ಮಾಣ ಮಾಡಲಾಗಿದೆ. ಹಾಗಾಗಿ ನಿರ್ಮಾಪಕರಿಗೆ ಈ ಚಿತ್ರದಿಂದ ಲಾಭವಾಗಲು ದೊಡ್ಡ ಮೊತ್ತದ ಆದಾಯ ಬರಬೇಕು. ಮೊದಲ ದಿನವೇ ‘ರಾಧೆ ಶ್ಯಾಮ್​’ ಚಿತ್ರಕ್ಕೆ ಭರ್ಜರಿ ಕಮಾಯಿ (Radhe Shyam Box Office Collection) ಆಗಿದೆ. ತೆಲುಗು ಪ್ರೇಕ್ಷಕರು ಪ್ರಭಾಸ್​ ಸಿನಿಮಾಗೆ ಮಸ್ತ್​ ಓಪನಿಂಗ್​ ನೀಡಿದ್ದಾರೆ. ಬಹುತೇಕ ಕಡೆಗಳಲ್ಲಿ ಈ ಚಿತ್ರ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಅದರ ಪರಿಣಾಮವಾಗಿ ಗಲ್ಲಾಪೆಟ್ಟಿಗೆಯಲ್ಲಿ ‘ರಾಧೆ ಶ್ಯಾಮ್​’ ಕಮಾಲ್​ ಮಾಡಿದೆ. ವಿದೇಶ ಗಳಿಕೆಯೂ ಸೇರಿ ಮೊದಲ ದಿನವೇ ಬರೋಬ್ಬರಿ 48 ಕೋಟಿ ರೂಪಾಯಿ ಗಳಿಸಿದೆ ಎಂದು ವರದಿ ಆಗಿದೆ. ಇದು ಪ್ರಭಾಸ್​ ಅಭಿಮಾನಿಗಳ ಸಂತಸಕ್ಕೆ ಕಾರಣ ಆಗಿದೆ.

ತೆಲುಗಿನಲ್ಲಿ ಸಿದ್ಧವಾದ ‘ರಾಧೆ ಶ್ಯಾಮ್​’ ಸಿನಿಮಾ ಇನ್ನಿತರ ಭಾಷೆಗಳಿಗೂ ಡಬ್​ ಆಗಿದೆ. ಕನ್ನಡ, ಹಿಂದಿ, ಮಲಯಾಳಂ ಹಾಗೂ ತೆಲುಗಿನಲ್ಲೂ ಈ ಚಿತ್ರ ತೆರೆಕಂಡಿದೆ. ಗಳಿಕೆ ಆಗಿರುವ 48 ಕೋಟಿ ರೂಪಾಯಿಗಳಲ್ಲಿ ಅತಿ ಹೆಚ್ಚು ಆದಾಯ ಹರಿದು ಬಂದಿರುವುದು ತೆಲುಗು ವರ್ಷನ್​ನಿಂದಲೇ. ಪ್ರಭಾಸ್​ ಅವರಿಗೆ ಪ್ಯಾನ್​ ಇಂಡಿಯಾ ಸ್ಟಾರ್​ ಎಂಬ ಇಮೇಜ್​ ಇದೆ. ಆ ಕಾರಣದಿಂದ ಉತ್ತರ ಭಾರತದಲ್ಲಿ ಅವರ ಸಿನಿಮಾಗೆ ಡಿಮ್ಯಾಂಡ್​ ಇದೆ. ‘ಬಾಹುಬಲಿ’ ರೀತಿ ‘ರಾಧೆ ಶ್ಯಾಮ್​’ ಕೂಡ ಭರ್ಜರಿ ಕಲೆಕ್ಷನ್​ ಮಾಡಲಿದೆ ಅಂತ ಊಹಿಸಲಾಗಿತ್ತು. ಆದರೆ ಹಿಂದಿ ಪ್ರೇಕ್ಷಕರು ಮೊದಲ ದಿನ ಈ ಸಿನಿಮಾ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿಲ್ಲ. ಹಿಂದಿ ವರ್ಷನ್​ನಿಂದ ಕೇವಲ ನಾಲ್ಕೂವರೆ ಕೋಟಿ ರೂ. ಮಾತ್ರ ಗಳಿಸಿದೆ.

ಮುಂದಿನ ದಿನಗಳಲ್ಲಿ ‘ರಾಧೆ ಶ್ಯಾಮ್​’ ಸಿನಿಮಾ ಯಾವ ರೀತಿ ಕಲೆಕ್ಷನ್​ ಮಾಡಲಿದೆ ಎಂಬ ಕೌತುಕ ನಿರ್ಮಾಣ ಆಗಿದೆ. ಆದರೆ ನಿರೀಕ್ಷಿತ ರೀತಿಯಲ್ಲಿ ಈ ಸಿನಿಮಾ ಮೂಡಿಬಂದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬಹುತೇಕ ಜನರು ನೆಗೆಟಿವ್​ ವಿಮರ್ಶೆ ಪ್ರಕಟಿಸಿದ್ದಾರೆ. ಇದು ಸಿನಿಮಾದ ಕಲೆಕ್ಷನ್​ಗೆ ಹೊಡೆತ ಕೊಡಬಹುದು. ಮೊದಲ ದಿನ 48 ಕೋಟಿ ರೂಪಾಯಿ ಗಳಿಸಿದ್ದರೂ ಕೂಡ ಮುಂದಿನ ದಿನಗಳಲ್ಲಿ ಇಳಿಮುಖ ಆಗಬಹುದು. ಭಾನುವಾರ (ಮಾ.12) ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಬಹುದು. ಆದರೆ ಸೋಮವಾರ ಈ ಸಿನಿಮಾದ ಅಸಲಿ ಭವಿಷ್ಯ ನಿರ್ಧಾರ ಆಗಲಿದೆ.

ಈ ಸಿನಿಮಾಗೆ ನೆಗೆಟಿವ್​ ವಿಮರ್ಶೆ ಬರಲು ಅನೇಕ ಕಾರಣಗಳಿವೆ. ಸಾಮಾನ್ಯವಾಗಿ ಪ್ರಭಾಸ್​ ಸಿನಿಮಾದಲ್ಲಿ ಅಭಿಮಾನಿಗಳು ಫೈಟಿಂಗ್​ ದೃಶ್ಯಗಳನ್ನು ಬಯಸುತ್ತಾರೆ. ‘ರಾಧೆ ಶ್ಯಾಮ್​’ ಸಿನಿಮಾದಲ್ಲಿ ಅದಕ್ಕೆ ಅವಕಾಶ ಇಲ್ಲ. ಆ್ಯಕ್ಷನ್​ ಅವತಾರವನ್ನು ಬದಿಗಿಟ್ಟು, ಪ್ರಭಾಸ್​ ಅವರು ಸಂಪೂರ್ಣ ಲವರ್​ ಬಾಯ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಈ ಸಿನಿಮಾದ ನಿರೂಪಣೆ ನಿಧಾನಗತಿಯಲ್ಲಿ ಇದೆ. ಹಾಗಾಗಿ ಪ್ರೇಕ್ಷಕರಿಗೆ ಬೋರು ಹೊಡೆಸುತ್ತಿದೆ. ಕಥೆಯಲ್ಲಿ ಲಾಜಿಕ್​ ಮಿಸ್​ ಆಗಿದೆ ಎಂಬಿತ್ಯಾದಿ ನೆಗೆಟಿವ್​ ಕಮೆಂಟ್​ಗಳು ಬಂದಿವೆ.

ಪ್ರಭಾಸ್​ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಖತ್​ ಡಿಮ್ಯಾಂಡ್​ ಇದೆ. ‘ಬಾಹುಬಲಿ’ ಸಿನಿಮಾ ಗೆದ್ದ ಬಳಿಕ ಅವರ ಚಾರ್ಮ್​ ಹೆಚ್ಚಿತು. ಆದರೆ ನಂತರ ಬಿಡುಗಡೆಯಾದ ‘ಸಾಹೋ’ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಈಗ ‘ರಾಧೆ ಶ್ಯಾಮ್​’ ಕೂಡ ಅದೇ ಹಾದಿ ಹಿಡಿದರೆ ಪ್ರಭಾಸ್​ಗೆ ತುಸು ಕಷ್ಟ ಆಗಲಿದೆ.

ಇದನ್ನೂ ಓದಿ:

‘ರಾಧೆ ಶ್ಯಾಮ್’ ವಿಮರ್ಶೆ​: ಭವಿಷ್ಯ ಹೇಳುವ ವ್ಯಕ್ತಿಯ ಕೈಯಲ್ಲಿ ಇಲ್ಲ ಮನರಂಜನೆಯ ರೇಖೆ

ಸೂಪರ್ ಹಿಟ್ ಚಿತ್ರದ ಕಥೆ ಕದ್ದರಾ ‘ರಾಧೆ ಶ್ಯಾಮ್’ ಸಿನಿಮಾ ನಿರ್ದೇಶಕರು? ಶುರುವಾಯ್ತು ಚರ್ಚೆ