ಲಿಂಗ ಬದಲಾವಣೆ ಮಾಡಿಕೊಂಡ ಸೈಶಾಗೆ ಸಹ ಸ್ಪರ್ಧಿ ಮೇಲೆ ಪ್ರೀತಿ; ‘ಇದು ಬಲು ಕಷ್ಟ’ ಎಂದ ಫ್ಯಾಷನ್ ಡಿಸೈನರ್
ಸೈಶಾ ಶಿಂಧೆ ಅವರಿಗೆ ಪ್ರತಿಸ್ಪರ್ಧಿ ಮುನಾವರ್ ಫರೂಕಿ ಮೇಲೆ ಫೀಲಿಂಗ್ಸ್ ಮೂಡಿದೆ. ಟಾಸ್ಕ್ ಆಡುವ ವೇಳೆ ಮುನಾವರ್ ಮೇಲೆ ಅವರಿಗೆ ಕನಿಕರ ಉಂಟಾಗಿತ್ತು. ನಂತರ ಅದು ಪ್ರೀತಿಯಾಗಿ ಬದಲಾಗಿದೆ.
‘ಲಾಕಪ್’ (Lock Upp) ಶೋ ನಿಧಾನವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋಅನ್ನು ಕಂಗನಾ ರಣಾವತ್ (Kangana Ranaut) ನಡೆಸಿಕೊಡುತ್ತಿದ್ದಾರೆ. ಈ ಶೋನಲ್ಲಿ ಫ್ಯಾಷನ್ ಡಿಸೈನರ್ ಸೈಶಾ ಶಿಂಧೆ (Saisha Shinde) ಕೂಡ ಇದ್ದಾರೆ. ಅವರು ಈ ಮೊದಲು ಲಿಂಗ ಬದಲಾವಣೆ ಮಾಡಿಕೊಂಡಿದ್ದರು. ಆರಂಭದಲ್ಲಿ ಹುಡುಗನಾಗಿದ್ದ ಸೈಶಾ, ಈಗ ಹುಡುಗಿಯಾಗಿ ಬದಲಾಗಿದ್ದಾರೆ. ಅವರು ‘ಲಾಕಪ್’ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರಿಗೆ ಮತ್ತೋರ್ವ ಸ್ಪರ್ಧಿ ಮೇಲೆ ಪ್ರೀತಿ ಮೂಡಿದೆ. ಆದರೆ, ಅದು ಯಶಸ್ಸು ಕಾಣೋಕೆ ಸಾಧ್ಯವೇ ಇಲ್ಲ ಎನ್ನುವ ನೋವನ್ನು ಅವರು ಹೊರಹಾಕಿದ್ದಾರೆ.
ಸೈಶಾ ಶಿಂಧೆ ಅವರಿಗೆ ಪ್ರತಿಸ್ಪರ್ಧಿ ಮುನಾವರ್ ಫರೂಕಿ ಮೇಲೆ ಫೀಲಿಂಗ್ಸ್ ಮೂಡಿದೆ. ಟಾಸ್ಕ್ ಆಡುವ ವೇಳೆ ಮುನಾವರ್ ಮೇಲೆ ಅವರಿಗೆ ಕನಿಕರ ಉಂಟಾಗಿತ್ತು. ನಂತರ ಅದು ಪ್ರೀತಿಯಾಗಿ ಬದಲಾಗಿದೆ. ಈಗ ಮೂಡಿರುವ ಭಾವನೆ ತಮ್ಮಲ್ಲೇ ಸಾಯಲಿದೆ ಎಂಬ ವಿಚಾರ ಕೂಡ ಸೈಶಾಗೆ ಸ್ಪಷ್ಟವಾಗಿದೆ. ‘ಫರೂಕಿ ಮೇಲೆ ನನಗೆ ಕ್ರಶ್ ಆಗಿದೆ’ ಎಂದು ಸೈಷಾ ಹೇಳಿಕೊಂಡಿದ್ದರು. ಇದನ್ನು ಕೇಳಿದ ಕರಣ್ ಕುಂದ್ರಾ ಅಚ್ಚರಿ ಹೊರಹಾಕಿದ್ದಾರೆ. ಅಲ್ಲದೆ ಭಾವನೆಗಳನ್ನು ವ್ಯಕ್ತಪಡಿಸುವಂತೆ ಕೋರಿದ್ದಾರೆ.
‘ಭಾವನೆಗಳನ್ನು ವ್ಯಕ್ತಪಡಿಸುವುದು, ಪ್ರೀತಿಯನ್ನು ಹೇಳಿಕೊಳ್ಳುವುದು ನಮಗೆ ಅಷ್ಟು ಸುಲಭದ ವಿಚಾರ ಅಲ್ಲ. ನಾವು ಆ ಬಗ್ಗೆ ತುಂಬಾನೇ ಯೋಚಿಸಬೇಕಾಗುತ್ತದೆ’ ಎಂದು ಬೇಸರ ಹೊರಹಾಕಿದರು ಸೈಶಾ.
ಸೈಶಾ ಅವರ ಮೂಲ ಹೆಸರು ಸ್ವಪ್ನಿಲ್ ಶಿಂಧೆ. ಲಿಂಗ ಬದಲಾವಣೆಯ ನಂತರದಲ್ಲಿ ಅವರು ಹೆಸರನ್ನು ಸೈಶಾ ಎಂದು ಬದಲಾಯಿಸಿಕೊಂಡರು. ಈ ಪಯಣದಲ್ಲಿ ಕುಟುಂಬಸ್ಥರು ಸೈಶಾಗೆ ಬೆಂಬಲವಾಗಿ ನಿಂತರು ಅನ್ನೋದು ಮೆಚ್ಚಿಕೊಳ್ಳುವಂತಹ ವಿಷಯ. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಸೈಶಾ ಸಂತಸ ಹೊರ ಹಾಕಿದ್ದರು. ‘ಸಾಮಾನ್ಯವಾಗಿ ಮಕ್ಕಳು ಈ ರೀತಿಯ ನಿರ್ಧಾರ ತೆಗೆದುಕೊಂಡರೆ ಪೋಷಕರು ಅದಕ್ಕೆ ಬೆಂಬಲ ನೀಡುವುದಿಲ್ಲ. ಆದರೆ, ನನ್ನ ಕುಟುಂಬದವರು ನನ್ನನ್ನು ಬೆಂಬಲಿಸಿದರು’ ಎಂದಿದ್ದಾರೆ ಸೈಶಾ.
ಲಿಂಗ ಬದಲಾವಣೆ ಆಪರೇಷನ್ ಆದ ನಂತರ ಕುಟುಂಬ ಸದಸ್ಯರು ಮೊದಲ ಬಾರಿಗೆ ಸೈಶಾ ಅವರನ್ನು ನೋಡಿದಾಗ ಶಾಕ್ಗೆ ಒಳಗಾಗಿದ್ದರು. ಈ ಆಪರೇಷನ್ ನಂತರದಲ್ಲಿ ಸೈಶಾ ಅವರು ನೇರವಾಗಿ ತಮ್ಮ ಸೋದರಸಂಬಂಧಿಯ ಮದುವೆಗೆ ತೆರಳಿದ್ದರು. ಅಲ್ಲಿದ್ದ ಎಲ್ಲರೂ ಅವರನ್ನು ಕಣ್ಣರಳಿಸಿ ನೋಡುತ್ತಿದ್ದರು.
‘ಲಾಕಪ್’ ಶೋ ಆಲ್ಟ್ಬಾಲಾಜಿ ಹಾಗೂ ಎಂಎಕ್ಸ್ ಪ್ಲೇಯರ್ನಲ್ಲಿ ಪ್ರಸಾರವಾಗುತ್ತಿದೆ. ಇದನ್ನು ಉಚಿತವಾಗಿ ನೋಡಬಹುದು. ವಿವಾದಿತ 16 ಸ್ಪರ್ಧಿಗಳು ಈ ರಿಯಾಲಿಟಿ ಶೋ ಸೇರಿದ್ದಾರೆ. ಕಂಗನಾ ರಣಾವತ್ ಇದನ್ನು ನಡೆಸಿಕೊಡುತ್ತಿದ್ದಾರೆ.
ಇದನ್ನೂ ಓದಿ: Samantha: ಮತ್ತೊಮ್ಮೆ ಹಾಟ್ ಆಗಿ ಹೆಜ್ಜೆ ಹಾಕಿ ಪಡ್ಡೆಹುಡುಗರ ನಿದ್ದೆಗೆಡಿಸಿದ ಸಮಂತಾ