AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶದಲ್ಲಿ ನಡೆಯಲಿದೆ ಪ್ರಭಾಸ್ ಹೊಸ ಸಿನಿಮಾದ ಆಡಿಯೋ ಬಿಡುಗಡೆ

Prabhas: ಪ್ರಭಾಸ್ ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅದರಲ್ಲೂ ಜಪಾನ್​ನಲ್ಲಿ ಪ್ರಭಾಸ್​ಗೆ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇತ್ತೀಚೆಗಷ್ಟೆ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಜಪಾನ್​ನಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದೆ. ಇದೀಗ ಪ್ರಭಾಸ್ ನಟನೆಯ ಹೊಸ ಸಿನಿಮಾದ ಆಡಿಯೋ ಕಾರ್ಯಕ್ರಮವನ್ನು ಜಪಾನ್​ನಲ್ಲೇ ಆಯೋಜಿಸಲಾಗುತ್ತಿದೆ.

ವಿದೇಶದಲ್ಲಿ ನಡೆಯಲಿದೆ ಪ್ರಭಾಸ್ ಹೊಸ ಸಿನಿಮಾದ ಆಡಿಯೋ ಬಿಡುಗಡೆ
Raja Saab
ಮಂಜುನಾಥ ಸಿ.
|

Updated on: Jan 09, 2025 | 1:01 PM

Share

ಮೊದಲೆಲ್ಲ ಭಾರತದ ಸಿನಿಮಾಗಳು ವಿದೇಶಗಳಲ್ಲಿ ಬಿಡುಗಡೆ ಆಗುವುದೇ ಕಷ್ಟವಾಗಿತ್ತು. ಹೆಚ್ಚೆಂದರೆ ಮಲೇಷ್ಯಾ, ಸಿಂಗಪುರ, ದುಬೈ, ಅಮೆರಿಕದ ಕೆಲವು ನಗರಗಳಲ್ಲಿ ಮಾತ್ರವೇ ಬಿಡುಗಡೆ ಆಗುತ್ತಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಭಾರತದ ಸಿನಿಮಾಗಳು ವಿಶ್ವದೆಲ್ಲೆಡೆ ಬಿಡುಗಡೆ ಆಗುತ್ತಿವೆ. ಮಾತ್ರವಲ್ಲದೆ ವಿದೇಶಗಳಲ್ಲಿಯೂ ಭಾರತೀಯ ಸಿನಿಮಾಗಳು ದಾಖಲೆ ಮೊತ್ತದ ಕಲೆಕ್ಷನ್ ಮಾಡುತ್ತಿವೆ. ಇತ್ತೀಚೆಗೆ ಭಾರತೀಯ ಸಿನಿಮಾಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಭಾರತೀಯ ಸಿನಿಮಾಗಳ ಪ್ರೀ ರಿಲೀಸ್ ಇವೆಂಟ್​ಗಳು, ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದೀಗ ಪ್ರಭಾಸ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ಪ್ರಭಾಸ್​ಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಈ ಹಿಂದೆ ಅವರ ‘ಕಲ್ಕಿ’ ಸಿನಿಮಾದ ಪ್ರಚಾರವನ್ನು ನ್ಯೂಯಾರ್ಕ್​ ನಗರದಲ್ಲಿ ಅದ್ಧೂರಿಯಾಗಿ ಮಾಡಲಾಗಿತ್ತು. ಇದೀಗ ಪ್ರಭಾಸ್​ ತಮ್ಮ ಮುಂದಿನ ಸಿನಿಮಾದ ಆಡಿಯೋ ಲಾಂಚ್ ಇವೆಂಟ್​ ಅನ್ನು ಜಪಾನ್​ನಲ್ಲಿ ಇರಿಸಿಕೊಂಡಿದ್ದಾರೆ. ಭಾರತದ ಇನ್ಯಾವುದೇ ಸಿನಿಮಾ ತಮ್ಮ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅಥವಾ ಆಡಿಯೋ ಲಾಂಚ್ ಅನ್ನು ಜಪಾನ್​ನಲ್ಲಿ ಮಾಡಿಲ್ಲ. ಆದರೆ ಇದೀಗ ಪ್ರಭಾಸ್ ಇಂಥಹದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.

ಪ್ರಭಾಸ್ ನಟನೆಯ ‘ರಾಜಾ ಸಾಬ್’ ಸಿನಿಮಾದ ಚಿತ್ರೀಕರಣ ಮುಕ್ತಾಯ ಹಂತದಲ್ಲಿದ್ದು, ‘ರಾಜಾ ಸಾಬ್’ ಸಿನಿಮಾದ ಆಡಿಯೋ ಲಾಂಚ್ ಜಪಾನ್​ನಲ್ಲಿ ನಡೆಯಲಿದೆಯಂತೆ. ಸಿನಿಮಾಕ್ಕೆ ಎಸ್ ತಮನ್ ಸಂಗೀತ ನೀಡಿದ್ದು, ಸಿನಿಮಾದ ಹಾಡುಗಳು ಅದ್ಭುತವಾಗಿ ಬಂದಿವೆ. ಮಾಸ್ ಹಾಡಂತೂ ಸಖತ್ ಆಗಿದೆ ಎಂದಿದ್ದಾರೆ. ಅಲ್ಲದೆ, ಸಿನಿಮಾದ ನಿರ್ಮಾಪಕರು, ‘ರಾಜಾ ಸಾಬ್’ ಸಿನಿಮಾದ ಹಾಡುಗಳ ಜಪಾನೀಸ್ ವರ್ಷನ್ ಅನ್ನು ತಯಾರು ಮಾಡಲು ಸೂಚಿಸಿದ್ದು, ತಮನ್ ಈಗಾಗಲೇ ಆ ಕಾರ್ಯವನ್ನು ಮಾಡಿದ್ದಾರಂತೆ. ಸಿನಿಮಾದ ಆಡಿಯೋ ಲಾಂಚ್ ಜಪಾನ್​ನಲ್ಲಿ ನಡೆಯುವ ಸಾಧ್ಯತೆ ಇದೆಯೆಂಬ ಸುಳಿವನ್ನು ತಮನ್ ಅವರೇ ನೀಡಿದ್ದಾರೆ.

ಇದನ್ನೂ ಓದಿ:ಡ್ರಗ್ಸ್ ವಿರುದ್ಧ ಸಮರ ಸಾರಿದ ಟಾಲಿವುಡ್ ನಟ ಪ್ರಭಾಸ್

ಇತ್ತೀಚೆಗಷ್ಟೆ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಜಪಾನ್​ನಲ್ಲಿ ಬಿಡುಗಡೆ ಆಗಿದೆ. ಬಿಡುಗಡೆಗೆ ಮುನ್ನ ಪ್ರಭಾಸ್, ಜಪಾನ್​ಗೆ ಹೋಗಬೇಕಿತ್ತು. ಆದರೆ ಅನಾರೋಗ್ಯದ ಕಾರಣದಿಂದಾಗಿ ಪ್ರಭಾಸ್, ಜಪಾನ್​ಗೆ ಹೋಗಲಿಲ್ಲ. ಈ ವೇಳೆ ಪ್ರಭಾಸ್, ತಮ್ಮ ಜಪಾನ್​ನ ಅಭಿಮಾನಿಗಳಿಗಾಗಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ವಿಡಿಯೋನಲ್ಲಿ ಜಪಾನಿ ಭಾಷೆಯಲ್ಲಿಯೇ ಪ್ರಭಾಸ್ ಮಾತನಾಡಿದ್ದರು. ಇದೀಗ ಜಪಾನಿ ಅಭಿಮಾನಿಗಳಿಗಾಗಿ ತಮ್ಮ ಸಿನಿಮಾದ ಆಡಿಯೋ ಕಾರ್ಯಕ್ರಮವನ್ನು ಜಪಾನ್​ನಲ್ಲೇ ಆಯೋಜಿಸುತ್ತಿದ್ದಾರೆ.

ಜಪಾನ್​ನಲ್ಲಿ ಭಾರತೀಯ ಸಿನಿಮಾಕ್ಕೆ ದಶಕಗಳಿಂದಲೂ ಬೇಡಿಕೆ ಇದೆ. ಹಿಂದಿಯ ‘ಆವಾರ’ ಸೇರಿದಂತೆ ಹಲವು ಸಿನಿಮಾಗಳು ಜಪಾನ್​ನಲ್ಲಿ ಭಾರಿ ಹಿಟ್ ಆಗಿದ್ದವು. ರಜನೀಕಾಂತ್ ನಟನೆಯ ‘ಮುತ್ತು’ ಸಿನಿಮಾ ಸಹ ಜಪಾನ್​ನಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು. ರಜನೀಕಾಂತ್​ಗೂ ಸಹ ದೊಡ್ಡ ಅಭಿಮಾನಿ ವರ್ಗ ಜಪಾನ್​ನಲ್ಲಿ ಇದೆ. ಸುದೀಪ್ ನಟನೆಯ ‘ಈಗ’ ಸಿನಿಮಾ ಸಹ ಜಪಾನ್​ನಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ