AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್ ನಟನೆಯ ‘ರಾಜಾ ಸಾಬ್’ ಪೋಸ್ಟರ್ ಬಿಡುಗಡೆ: ಅಭಿಮಾನಿಗಳಿಗೆ ನಿರಾಸೆ

The Raja Saab Movie Poster: ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ, ಸಂಕ್ರಾಂತಿಗೆ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಕೊಡುವುದಾಗಿ ಹೇಳಿತ್ತು. ಅಂತೆಯೇ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ ನೋಡಿದ ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ. ಕಾರಣ ಇಲ್ಲಿ ತಿಳಿಯಿರಿ.

ಪ್ರಭಾಸ್ ನಟನೆಯ ‘ರಾಜಾ ಸಾಬ್’ ಪೋಸ್ಟರ್ ಬಿಡುಗಡೆ: ಅಭಿಮಾನಿಗಳಿಗೆ ನಿರಾಸೆ
Raja Saab
ಮಂಜುನಾಥ ಸಿ.
|

Updated on:Jan 14, 2025 | 12:02 PM

Share

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ಬಿಡುಗಡೆ ಮುಂದೂಡಲಾಗಿರುವ ಸುದ್ದಿ ಕೆಲವು ದಿನಗಳ ಹಿಂದಷ್ಟೆ ಹೊರಬಿತ್ತು. ಇದು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತ್ತು. ಆದರೆ ತಾವು ಸಂಕ್ರಾಂತಿಗೆ ಒಳ್ಳೆಯ ಅಪ್​ಡೇಟ್ ನೀಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಪ್ರಭಾಸ್ ಅಭಿಮಾನಿಗಳು ಸಹ ಇದಕ್ಕಾಗಿ ಕಾಯುತ್ತಿದ್ದರು. ಕೊಟ್ಟ ಮಾತಿನಂತೆ ಸಂಕ್ರಾಂತಿಗೆ ಸಿನಿಮಾದ ಪೋಸ್ಟರ್​ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆಯಾದರೂ ಇದು ಅಭಿಮಾನಿಗಳಿಗೆ ನಿರಾಸೆಯನ್ನೇ ಮೂಡಿಸಿದೆ.

‘ದಿ ರಾಜಾ ಸಾಬ್’ ಪೋಸ್ಟರ್ ಹೆಸರಲ್ಲಿ ಪ್ರಭಾಸ್​ರ ಒಂದು ಫೋಟೊ ಅನ್ನಷ್ಟೆ ನೀಡಲಾಗಿದೆ. ಪೋಸ್ಟರ್​ ನಲ್ಲಿ ಯಾವುದೇ ವಿಶೇಷತೆ ಇಲ್ಲ. ಪ್ರಭಾಸ್​ ನಗುತ್ತಿರುವ ಒಂದು ಪೋಟ್ರೆಟ್ ಮಾದರಿಯ ಫೋಟೊ ಇದಾಗಿದೆ. ಪ್ರಭಾಸ್ ಅಭಿಮಾನಿಗಳು ಇನ್ನೂ ವಿಶೇಷವಾದುದು ಏನನ್ನೋ ನಿರೀಕ್ಷಿಸುತ್ತಿದ್ದರು. ಆದರೆ ಈಗ ಬಿಡುಗಡೆ ಮಾಡಲಾಗಿರುವ ಪೋಸ್ಟರ್​ ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಇದನ್ನೂ ಓದಿ:ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ, ‘ರಾಜಾ ಸಾಬ್’ ಬಿಡುಗಡೆ ಮುಂದೂಡಿಕೆ

ಪೋಸ್ಟರ್ ನೋಡಿದ ಕೆಲವರು ‘ಕೂಲ್ ಲುಕ್’ ಎಂದು ಕಮೆಂಟ್ ಮಾಡಿದ್ದರೆ, ಅಪ್​ಡೇಟ್ ಕೊಡಿ, ಪೋಸ್ಟರ್ ರಿಲೀಸ್ ಮಾಡಿ ಎಂದರೆ ಬರೀ ಪಾಸ್​ಪೋರ್ಟ್ ಸೈಜ್ ಫೋಟೊ ರಿಲೀಸ್ ಮಾಡಿದ್ದೀರಿ ಎಂದು ಕೆಲವರು ಟೀಕಿಸಿದ್ದಾರೆ. ಇನ್ನು ಕೆಲವರು, ಈ ಪೋಸ್ಟರ್​ನಲ್ಲಿ ಪ್ರಭಾಸ್, ಅಕ್ಕಿನೇನಿ ನಾಗಾರ್ಜುನ ರೀತಿ ಕಾಣುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಪೋಸ್ಟರ್ ಮೂಲಕ ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳನ್ನು ಚಿತ್ರತಂಡ ಕೋರಿದೆ.

‘ದಿ ರಾಜಾ ಸಾಬ್’ ಪ್ರಭಾಸ್ ನಟಿಸುತ್ತಿರುವ ಮೊದಲ ಹಾರರ್ ಕಾಮಿಡಿ ಸಿನಿಮಾ ಆಗಿದೆ. ಸಿನಿಮಾದಲ್ಲಿ ಪ್ರಭಾಸ್ ದೆವ್ವವಾಗಿ ನಟಿಸುತ್ತಿದ್ದಾರಂತೆ. ಸಿನಿಮಾದಲ್ಲಿ ಹಾರರ್ ಜೊತೆಗೆ ರೊಮ್ಯಾಂಟಿಕ್ ಲವ್ ಸ್ಟೋರಿ ಹಾಗೂ ಭರಪೂರ ಹಾಸ್ಯ ದೃಶ್ಯಗಳು ಸಹ ಇರಲಿವೆಯಂತೆ. ಸಿನಿಮಾವನ್ನು ಮಾರುತಿ ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯಾಗಿ ಮಾಳವಿಕಾ ಮೋಹನನ್ ನಟಿಸುತ್ತಿದ್ದಾರೆ. ಸಿನಿಮಾ ಏಪ್ರಿಲ್​ನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಬಿಡುಗಡೆ ಮತ್ತೆ ಮುಂದೂಡಲ್ಪಟ್ಟಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:32 am, Tue, 14 January 25

ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!