Rishab Shetty: ರಿಷಬ್ ಶೆಟ್ಟಿ ಹೊಸ ಲುಕ್ ಹೇಗಿದೆ ನೋಡಿ; ಫೋಟೋ ವೈರಲ್
ರಿಷಬ್ ಶೆಟ್ಟಿ ಅವರ ಹೊಸ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರು 'ಕಾಂತಾರ: ಚಾಪ್ಟರ್ 2' ಚಿತ್ರದಲ್ಲಿ ನಟಿಸುತ್ತಿದ್ದು, 2025ರ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ. ಇದಲ್ಲದೆ, ಅವರು ತಮ್ಮ ಮೊದಲ ಬಾಲಿವುಡ್ ಚಿತ್ರ 'ಛತ್ರಪತಿ ಶಿವಾಜಿ ಮಹರಾಜ್' ಮತ್ತು ತೆಲುಗು ಚಿತ್ರ 'ಜೈ ಹನುಮಾನ್' ನಲ್ಲೂ ನಟಿಸುತ್ತಿದ್ದಾರೆ. ಈ ಮೂರು ಚಿತ್ರಗಳಿಗೆ ಅಪಾರ ನಿರೀಕ್ಷೆ ಇದೆ.
Updated on: Jan 14, 2025 | 12:39 PM

ನಟ ರಿಷಬ್ ಶೆಟ್ಟಿ ಅವರು ಹೊಸ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ವಿವಿಧ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಈಗ ರಿಷಬ್ ಶೆಟ್ಟಿ ಅವರ ಹೊಸ ಲುಕ್ ವೈರಲ್ ಆಗಿದೆ. ಉದ್ದನೆಯ ಕೂದಲು-ಗಡ್ಡ ಬಿಟ್ಟು ಕಾಣಿಸಿಕೊಂಡಿದ್ದಾರೆ. ಈ ಮೊದಲು ಕೂಡ ರಿಷಬ್ ಅವರು ಉದ್ದನೆಯ ಕೂದಲು ಬಿಟ್ಟಿದ್ದರು. ಆದರೆ, ಇದನ್ನು ಕಟ್ಟಿಕೊಳ್ಳುತ್ತಿದ್ದರು.

ರಿಷಬ್ ಶೆಟ್ಟಿ ಕೈಯಲ್ಲಿ ಪ್ರಮುಖ ಮೂರು ಚಿತ್ರಗಳಿವೆ. ಆ ಪೈಕಿ ‘ಕಾಂತಾರ: ಚಾಪ್ಟರ್ 1’ ಗಮನ ಸೆಳೆದಿದೆ. ಈ ಸಿನಿಮಾ 2025ರ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.

ಇದಲ್ಲದೆ, ಹಿಂದಿಯ ‘ಛತ್ರಪತಿ ಶಿವಾಜಿ ಮಹರಾಜ್’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ರಿಷಬ್ ಅವರು ಒಪ್ಪಿಕೊಂಡ ಮೊದಲ ಬಾಲಿವುಡ್ ಸಿನಿಮಾ ಇದು. 2027ರಲ್ಲಿ ಈ ಚಿತ್ರ ರಿಲೀಸ್ ಆಗುವ ನಿರೀಕ್ಷೆ ಇದೆ.

ತೆಲುಗಿನ ‘ಜೈ ಹನುಮಾನ್’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾ ‘ಹನುಮಾನ್’ ಚಿತ್ರದ ಮುಂದುವರಿದ ಭಾಗ ಆಗಿದೆ. ಇದರಲ್ಲಿ ಹನುಮಂತನ ಪಾತ್ರದಲ್ಲಿ ರಿಷಬ್ ಶೆಟ್ಟಿ ಅವರು ಕಾಣಿಸಿಕೊಳ್ಳುತ್ತಾ ಇದ್ದಾರೆ.



















