ಮದುವೆ ಬಗ್ಗೆ ಮಾತನಾಡಿದ ನಟ ಪ್ರಭಾಸ್
Prabhas: ಭಾರತೀಯ ಚಿತ್ರರಂಗದ ಎಲಿಜೆಬೆಲ್ ಬ್ಯಾಚುಲರ್ ಪ್ರಭಾಸ್, ವಯಸ್ಸು 45 ದಾಟಿದರೂ ಇನ್ನೂ ಮದುವೆ ಆಗಿಲ್ಲ. ಆದರೆ ಇದೀಗ ಕಾರ್ಯಕ್ರಮವೊಂದರಲ್ಲಿ ಪ್ರಭಾಸ್ ಸ್ವತಃ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ.
ನಟ ಪ್ರಭಾಸ್, ಭಾರತೀಯ ಚಿತ್ರರಂಗದ ಎಲಿಜಿಬೆಲ್ ಬ್ಯಾಚುಲರ್, ವಯಸ್ಸು 45 ದಾಟಿದರೂ ಇನ್ನೂ ಮದುವೆ ಆಗದೆ ಉಳಿದಿದ್ದಾರೆ. ಪ್ರಭಾಸ್ ಮದುವೆ ಬಗ್ಗೆ ಹರಿದಾಡಿದಷ್ಟು ಗಾಸಿಪ್, ತೆಲುಗಿನ ಇನ್ಯಾವುದೇ ನಟ ಅಥವಾ ನಟಿಯ ಮದುವೆ ಬಗ್ಗೆ ಹರಿದಾಡಿಲ್ಲ, ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಭಾಸ್ ಮದುವೆ ಬಗ್ಗೆ ಸುದ್ದಿ ಹರಿದಾಡುತ್ತದೆ, ಕೊನೆಗೆ ಅದು ಸುಳ್ಳೆಂದು ಮತ್ತೊಂದು ಸುದ್ದಿ ಹರಿದಾಡುತ್ತದೆ. ಆದರೆ ಕೊನೆಗೀಗ ಪ್ರಭಾಸ್ ಸ್ವತಃ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ.
ಯಾವುದೇ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳದ ನಟ ಪ್ರಭಾಸ್, ಇತ್ತೀಚೆಗೆ ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡರು, ಅದೂ ತಮ್ಮ ನೆಚ್ಚಿನ ಗೀತ ರಚನೆಕಾರರಿಗಾಗಿ. ತೆಲುಗಿನಲ್ಲಿ ಸೀತಾರಾಮ ಶಾಸ್ತ್ರಿ ಮೇರು ಗೀತರಚನೆಕಾರರಾಗಿ ಜನಪ್ರಿಯರು. ಸಾವಿರಾರು ಸೂಪರ್ ಹಿಟ್, ಕ್ಲಾಸಿಕ್ ಹಾಡುಗಳನ್ನು ಸೀತಾರಾಂ ಸೀತಾರಾಮ ಶಾಸ್ತ್ರಿ ಅವರು ಬರೆದಿದ್ದಾರೆ. ಪ್ರಭಾಸ್ಗೆ ಹಾಡುಗಳೆಂದು ಬಲು ಪ್ರೀತಿ, ಇತ್ತೀಚೆಗೆ ಸೀತಾರಾಮ ಶಾಸ್ತ್ರಿ ಅವರ ಹಾಡುಗಳ ಬಗ್ಗೆ ‘ನಾ ಉಚ್ವಾಸಂ ಕವನಂ’ ಹೆಸರಿನ ವಿಶೇಷ ವಿಡಿಯೋ ಸರಣಿ ಒಂದನ್ನು ಮಾಡಲಾಗಿದ್ದು, ಅದರ ಒಂದು ಎಪಿಸೋಡ್ನಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಪ್ರಭಾಸ್ ಜೊತೆ ಮೂರು ವರ್ಷಕ್ಕೆ ಮೂರು ಸಿನಿಮಾ, ಹೊಂಬಾಳೆ ಘೋಷಣೆ
ಎಪಿಸೋಡ್ನಲ್ಲಿ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ಅವರು ರಚಿಸಿರುವ ತಮಗೆ ಬಹಳ ಇಷ್ಟವಾದ ಹಾಡುಗಳ ಬಗ್ಗೆ ಪ್ರಭಾಸ್ ಮಾತನಾಡಿದ್ದಾರೆ. ಬೇರೆ ಸಿನಿಮಾ ಪ್ರೋಮೋಷನ್ಗಳಲ್ಲಿ ಹೆಚ್ಚು ಮಾತನಾಡದ ಪ್ರಭಾಸ್, ಈ ಕಾರ್ಯಕ್ರಮದಲ್ಲಿ ಚಳಿ ಬಿಟ್ಟು ಮಾತಾಡಿದ್ದಾರೆ. ತಮಗೆ ಇಷ್ಟವಾದ ಹಾಡುಗಳು, ಸಾಹಿತ್ಯ, ಅದನ್ನು ಸೀತಾರಾಮ ಶಾಸ್ತ್ರಿಗಳು ಹೇಗೆ ರಚಿಸಿರಬಹುದು ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅಸಲಿಗೆ ಪ್ರಭಾಸ್ ನಟಿಸಿದ ಮೊದಲ ಸಿನಿಮಾದ ಮೊದಲ ಹಾಡನ್ನು ಸೀತಾರಾಮ ಶಾಸ್ತ್ರಿಗಳೇ ಬರೆದಿದ್ದರು, ‘ಅವರ ಕನಸಿಗೆ ಅವರೇ ರಾಜ’ ಎಂಬ ಆ ಹಾಡಿನಲ್ಲಿತ್ತು, ಅದರಂತೆಯೇ ಪ್ರಭಾಸ್ ಅಂದು ಕಂಡ ಕನಸನ್ನು ನನಸು ಮಾಡಿಕೊಂಡು ಇಂದು ಭಾರತ ಚಿತ್ರರಂಗದ ಮಹಾರಾಜ ಆಗಿದ್ದಾರೆ. ‘ನನಗೆ ಸೀತಾರಾಮ ಶಾಸ್ತ್ರಿಯವರು ನೀಡಿದ ಅಕ್ಷರ ಆಶೀರ್ವಾದ ಆ ಹಾಡು’ ಎಂದು ಭಾವುಕವಾಗಿ ಮಾತನಾಡಿದ್ದಾರೆ ಪ್ರಭಾಸ್.
ಅದೇ ಎಪಿಸೋಡ್ನಲ್ಲಿ ಸೀತಾರಾಮ ಶಾಸ್ತ್ರಿಯವರು, ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಮನಿ’ ಸಿನಿಮಾನಲ್ಲಿ ‘ಭದ್ರಂ ಬಿ ಕೇರ್ಫುಲ್ ಬ್ರದರ್, ಶಾದಿ ಮಾಟ ವದ್ದು ಗುರು’ ಎಂದು ಮದುವೆ ಬೇಡ ಎಂಬರ್ಥ ನೀಡುವ ಹಾಡೊಂದನ್ನು ಬರೆದಿದ್ದಾರೆ. ಈ ಹಾಡಿನ ಬಗ್ಗೆ ಮಾತನಾಡಿದ ಪ್ರಭಾಸ್, ಎಷ್ಟೋ ಆಳವಾದ ಅರ್ಥವುಳ್ಳ ಹಾಡುಗಳನ್ನು ಬರೆದಿರುವ ಸೀತಾರಾಮಶಾಸ್ತ್ರಿಗಳು ಇಂಥಹಾ ಒಂದು ತಮಾಷೆಯ ಹಾಡನ್ನು ಸಹ ಬರೆದಿದ್ದಾರೆ ಎಂದು ಮಾತನಾಡುತ್ತಾ, ನೋಡಿ ಅವರ ಮಾತನ್ನೇ ಪಾಲಿಸುತ್ತಿದ್ದೀನಿ, ಅವರು ಮದುವೆಯ ಸಮಸ್ಯೆಗಳ ಬಗ್ಗೆ ಎಚ್ಚರ ನೀಡಿದ್ದಾರೆ, ಈಗ ನಾನು ಮದುವೆ ಆಗಬೇಕ? ಬೇಡವಾ? ಎಂದು ಪ್ರಶ್ನೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ