
ಪ್ರಭುದೇವ (Prabhudeva) ಅವರು ಡ್ಯಾನ್ಸ್ ಲೋಕದಲ್ಲಿ ಮಾಸ್ಟರ್. ಅವರು ಹಾಕುವ ಸ್ಟೆಪ್ಗಳನ್ನು ಅನುಕರಿಸಿ ಮತ್ತೊಬ್ಬರು ಮಾಡಬೇಕು ಎಂದರೆ ಅದು ಚಾಲೆಂಜ್. ಪ್ರಭುದೇವ ಅವರಿಗೆ ಇಂದು (ಏಪ್ರಿಲ್ 3) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ. ಕಾಲಿನಲ್ಲಿ ಮೂಳೆಗಳೇ ಇಲ್ಲ ಎಂಬಂತೆ ಡ್ಯಾನ್ಸ್ ಮಾಡೋ ಪ್ರಭುದೇವ ಅವರಿಗೆ ಒಮ್ಮರ ಪಾರ್ಶ್ವವಾಯು ಆಗಿತ್ತು ಎಂಬ ವಿಚಾರ ನಿಮಗೆ ತಿಳಿದಿದೆಯೇ? ಈ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ ಕೇಳಿ.
ಅದು 2016ರ ಸಮಯ. ಪ್ರಭುದೇವ ಅವರು ‘ದೇವಿ’ ಹೆಸರಿನ ಸಿನಿಮಾ ಮಾಡುತ್ತಿದ್ದರು. ಇದಕ್ಕೆ ತಮನ್ನಾ ಭಾಟಿಯಾ ಹೀರೋಯಿನ್. ಇದರ ಸಾಂಗ್ ಶೂಟ್ ವೇಳೆ ತಾತ್ಕಾಲಿಕ ಪ್ಯಾರಾಲಿಸಿಸ್ ಆಗಿತ್ತು. ನಂತರ ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಈ ವೇಳೆ ಸೋನು ಸೂದ್ ಕೂಡ ಸ್ಥಳದಲ್ಲೇ ಇದ್ದರು.
ಆ ಬಳಿಕ ವೈದ್ಯರು ಪರೀಕ್ಷೆ ನಡೆಸಿ ಇದೊಂದು ತಾತ್ಕಾಲಿಕ ಪಾರ್ಶ್ವವಾಯು ಎಂದು ಹೇಳಿದರು. ಅವರ ಅಭಿಮಾನಿಗಳು ಕೂಡ ನಿಟ್ಟುಸಿರು ಬಿಟ್ಟರು. ಪ್ರಭುದೇವ ಅವರು ಡ್ಯಾನ್ಸ್ನೇ ನಂಬಿಕೊಂಡು ಇದ್ದಾರೆ. ಅದುವೇ ಇಲ್ಲದಂತೆ ಆದರೆ ಮುಂದೇನು ಎಂಬುದು ಅವರ ಪ್ರಶ್ನೆ ಆಗಿತ್ತು. ಆದರೆ, ಚೇತರಿಕೆ ಕಾಣುತ್ತಾರೆ ಎಂದು ಅವರಿಗೆ ತಿಳಿದು ಅವರಿಗೆ ಭರ್ಜರಿ ಖುಷಿ ಆಯಿತು.
ಆ ಬಳಿಕ ಪ್ರಭುದೇವ ಅಭಿಮಾನಿಗಳಿಗೆ ಹಾಗೂ ಇತರರಿಗೆ ಸಂದೇಶ ಒಂದನ್ನು ನೀಡಿದರು. ಡ್ಯಾನ್ಸ್, ಫೈಟ್ ಈ ರೀತಿಯ ದೃಶ್ಯಗಳನ್ನು ಅತಿಯಾಗಿ ಮಾಡದಂತೆ ಇತರರ ಬಳಿ ಕೋರಿಕೊಂಡರು. ‘ಫೈಟ್, ಡ್ಯಾನ್ಸ್ ಅಥವಾ ಭಾವಾನಾತ್ಮಕ ದೃಶ್ಯವಿರಲಿ. ಹೆಚ್ಚು ಮಾಡಬೇಡಿ. ಅದು ಆರೋಗ್ಯಕ್ಕಿಂತ ದೊಡ್ಡದಲ್ಲ’ ಎಂದು ಪ್ರಭುದೇವ ಹೇಳಿದರು.
ಇದನ್ನೂ ಓದಿ: ವಿವಾಹದ ಬಳಿಕ ನಯನಾತಾರ ಜೊತೆ ಅಫೇರ್; ಪ್ರಭುದೇವ ಜೀವನವನ್ನೇ ಹಾಳು ಮಾಡಿತು ಆ ನಿರ್ಧಾರ
‘ನಾನು ನೆಲದ ಮೇಲೆ ಬಿದ್ದಾಗ, ನನ್ನ ಜೀವನ ನನ್ನ ಕಣ್ಣೆದುರು ಮಿಂಚಿ ಹೋಯಿತು. ನನ್ನ ಇಬ್ಬರು ಗಂಡು ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದೆ. ಆಗ ನಾನು ಭವಿಷ್ಯದಲ್ಲಿ ಜಾಗರೂಕರಾಗಿರಲು ನಿರ್ಧರಿಸಿದೆ’ ಎಂದು ಅವರು ಹೇಳಿದರು. ಇದಾದ ಬಳಿಕ ಪ್ರಭುದೇವ ಅವರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಾ ಇದ್ದಾರೆ. ಅವರು ನಿತ್ಯವೂ ವ್ಯಾಯಾಮ ಮಾಡುವುದನ್ನು ತಪ್ಪಿಸುವುದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.