ಸಂಬರಗಿ ನಡೆಸಿದ ದೊಡ್ಡ ಕುತಂತ್ರ ವಿಫಲ​; ಮನೆಯವರ ಎದುರು ಹೀರೋ ಆದ ರಘು!

ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ಒಟ್ಟಾಗಿ ಇರುವುದನ್ನು ನೋಡಿದ ಅನೇಕರು ಮನೆಯಲ್ಲಿ ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲಿ ಮೊದಲಿರೋದು ಪ್ರಶಾಂತ್ ಸಂಬರಗಿ.

ಸಂಬರಗಿ ನಡೆಸಿದ ದೊಡ್ಡ ಕುತಂತ್ರ ವಿಫಲ​; ಮನೆಯವರ ಎದುರು ಹೀರೋ ಆದ ರಘು!
ರಘು ಗೌಡ-ಪ್ರಶಾಂತ್ ಸಂಬರಗಿ
Edited By:

Updated on: Apr 10, 2021 | 4:23 PM

ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್​ ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಕುತಂತ್ರಗಳನ್ನು ಹೆಣೆಯುತ್ತಿದ್ದಾರೆ. ಸ್ಟ್ರಾಂಗ್​ ಸ್ಪರ್ಧಿಗಳನ್ನು ಸೋಲಿಸೋಕೆ ಒಂದಾದಮೇಲೆ ಒಂದರಂತೆ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಆದರೆ, ಈ ರೀತಿ ಕುತಂತ್ರಗಳ ಬಗ್ಗೆ ಮನೆಯವರಿಗೆ ವಾಸನೆ ಸಿಕ್ಕಿದೆ. ಹೀಗಾಗಿ, ಎಲ್ಲಾ ಸ್ಪರ್ಧಿಗಳೂ ಎಚ್ಚೆತ್ತುಕೊಂಡಿದ್ದಾರೆ. ರಘು ಕೂಡ ಈ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆ. ಇದರಿಂದಲೇ, ಪ್ರಶಾಂತ್​ ಸಂಬರಗಿ ಮಾಡಿದ ದೊಡ್ಡ ಕುತಂತ್ರವೊಂದು ವಿಫಲವಾಗಿದೆ.

ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ಒಟ್ಟಾಗಿ ಇರುವುದನ್ನು ನೋಡಿದ ಅನೇಕರು ಮನೆಯಲ್ಲಿ ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲಿ ಮೊದಲಿರೋದು ಪ್ರಶಾಂತ್ ಸಂಬರಗಿ. ಹೀಗಾಗಿ, ದಿವ್ಯಾ ಅವರನ್ನು ಮನೆಯಿಂದ ಹೊರಕ್ಕೆ ಕಳುಹಿಸಿ, ಮಂಜು ಅವರನ್ನು ವೀಕ್​ ಮಾಡಬೇಕು ಎನ್ನುವುದು ಸಂಬರಗಿ ಆಲೋಚನೆ. ಹೀಗಾಗಿ, ಈ ವಾರದ ಕಳಪೆ ಪ್ರದರ್ಶನವನ್ನು ದಿವ್ಯಾಗೆ ನೀಡಬೇಕು ಎಂದು ತಂತ್ರ ರೂಪಿಸಿದ್ದರು. ಸದಾ ಅವರ ಹಿಂದೆ ತಿರುಗುತ್ತಿರುವ ಶಮಂತ್​ ಅವರನ್ನು ಇದಕ್ಕಾಗಿ ಮುಂದೆ ಬಿಟ್ಟಿದ್ದರು.

ಶಮಂತ್ ಮೊದಲು ವಿಶ್ವ ಬಳಿ ಹೋಗಿ ದಿವ್ಯಾ ಅವರನ್ನು ಕಳಪೆ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದರು. ಇದಾದ ನಂತರ ಶಮಂತ್​ ತೆರಳಿದ್ದು ರಘು ಗೌಡ ಬಳಿ. ದಿವ್ಯಾ ನನಗೆ ಅವಮಾನ ಮಾಡಿದ್ದಾಳೆ. ಅವಳ ವಿರುದ್ಧ ದ್ವೇಷ ತೀರಿಸಿಕೊಳ್ಳಲೇಬೇಕು. ಹೀಗಾಗಿ, ನಾನು ಈ ವಾರ ಅವಳಿಗೆ ಕಳಪೆ ಪಟ್ಟ ಕಟ್ಟುತ್ತಿದ್ದೇನೆ. ನೀನು ಕೂಡ ಅವಳಿಗೆ ಕಳಪೆ ಪಟ್ಟ ಕಟ್ಟು ಎಂದು ಮನವಿ ಮಾಡಿದ್ದಾರೆ. ಇದಕ್ಕೆ ರಘು ನಗುತ್ತಲೇ ಓಕೆ ಎಂದಿದ್ದಾರೆ.

ರಘು ಅವರ ಮನವೊಲಿಸಿದ್ದೇನೆ ಎಂದು ಶಮಂತ್​ ಖುಷಿಯಾಗಿದ್ದರು. ಆದರೆ, ಅಚ್ಚರಿ ಎಂಬಂತೆ ರಘು ಹೆಸರು ತೆಗೆದುಕೊಂಡಿದ್ದು ಚಕ್ರವರ್ತಿ ಚಂದ್ರಚೂಡ್​ ಅವರದ್ದು. ದಿವ್ಯಾಗೆ ಒಂದೆರಡು ವೋಟ್​ ಹೆಚ್ಚು ಬಿದ್ದಿದ್ದರೂ ಅವರು ಕಳಪೆ ಪಟ್ಟ ಕಟ್ಟಿಕೊಂಡು ಜೈಲಿಗೆ ಹೋಗುತ್ತಿದ್ದರು. ಇದನ್ನು ರಘು ಗೌಡ ತಡೆದಿದ್ದಾರೆ. ಈ ಮೂಲಕ ಪ್ರಶಾಂತ್​ ತಂತ್ರವನ್ನು ರಘು ವಿಫಲ ಮಾಡಿದ್ದಾರೆ.

ಇದನ್ನೂ ಓದಿ: ಸಂಬರಗಿ ಎದುರು ಹಾಕ್ಕೊಂಡ ಮಂಜುಗೆ ಬಿಗ್​ಬಾಸ್​ ಮನೆಯಲ್ಲಿ ಇನ್ಮೇಲೆ ಕಷ್ಟಕಾಲ!

ಬಿಗ್​ ಬಾಸ್​ ಮನೆಯ ದೊಡ್ಡ ಹಗರಣವನ್ನು ಭೇದಿಸಿದ ಪ್ರಶಾಂತ್​ ಸಂಬರಗಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us