ಬಿಗ್ ಬಾಸ್ ಮನೆ ನಿತ್ಯ ಒಂದಿಲ್ಲೊಂದು ಹೊಸ ಬೆಳವಣಿಗೆಗೆ ಸಾಕ್ಷಿ ಆಗುತ್ತಲೇ ಇರುತ್ತದೆ. ಈಗ ಶುಭಾ ಪೂಂಜಾ ಬಳಿ ಇರುವ ಅತ್ಯಮೂಲ್ಯ ವಸ್ತುವನ್ನು ಕದಿಯಲು ಪ್ರಶಾಂತ್ ಸಂಬರಗಿ ಪ್ಲ್ಯಾನ್ ರೂಪಿಸಿದ್ದಾರೆ. ಮಂಜು ಪಾವಗಡಗೆ ಇದರ ಮುನ್ಸೂಚನೆ ಸಿಕ್ಕಿದೆ. ಅಲ್ಲದೆ, ಈ ವಿಚಾರದಲ್ಲಿ ಶುಭಾಗೆ ಎಚ್ಚರಿಕೆ ನೀಡಿದ್ದಾರೆ.
ಬಸ್ ಟಾಸ್ಕ್ನಲ್ಲಿ ಗೆದ್ದವರಿಗೆ ಗೋಲ್ಡನ್ ಪಾಸ್ ಸಿಗುತ್ತಿತ್ತು. ಈ ಗೋಲ್ಡನ್ ಪಾಸ್ ತುಂಬಾನೇ ಮಹತ್ವ ಪಡೆದುಕೊಂಡಿದೆ. ಯಾವಾಗಲಾದರೂ ಎಲಿಮಿನೇಷನ್ಗೆ ನಾಮಿನೇಟ್ ಆದರೆ ಈ ಪಾಸ್ ಬಳಕೆ ಮಾಡಿಕೊಳ್ಳಬಹುದು. ಈ ಮೂಲಕ ಎಲಿಮಿನೇಷನ್ ತೂಗುಗತ್ತಿಯಿಂದ ಬಚಾವ್ ಆಗಬಹುದು. ಟಾಸ್ಕ್ನಲ್ಲಿ ಗೆದ್ದು ರಾಜೀವ್ ಗೋಲ್ಡನ್ ಪಾಸ್ ತೆಗೆದುಕೊಂಡಿದ್ದರು. ಆದರೆ, ಅದನ್ನು ಅವರು ಬಳಕೆ ಮಾಡಿಕೊಂಡಿರಲಿಲ್ಲ. ಹೀಗಾಗಿ, ಎಲಿಮಿನೇಟ್ ಆದರು. ಎಂಟನೇ ವಾರ ಅವರು ಎಲಿಮಿನೇಷನ್ ಆಗಿ ಹೊರ ಹೋಗುವಾಗ ಈ ಪಾಸ್ಅನ್ನು ಶುಭಾಗೆ ನೀಡಿ ತೆರಳಿದ್ದರು.
ಶುಭಾ ಈ ಗೋಲ್ಡನ್ ಪಾಸ್ಅನ್ನು ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಶಮಂತ್ ಬಳಿ ಕುಳಿತಿದ್ದಾಗ ಮಾತನಾಡಿದ್ದ ಪ್ರಶಾಂತ್, ಗೋಲ್ಡನ್ ಪಾಸ್ ಶುಭಾ ಬಳಿ ಇದೆ. ಅದನ್ನು ಹೇಗಾದರೂ ಮಾಡಿ ಎತ್ತಬೇಕು ಎಂದು ಹೇಳಿಕೊಂಡಿದ್ದರು.
ಇದರ ಸೂಚನೆ ಮಂಜು ಪಾವಗಡಗೆ ಸಿಕ್ಕಂತೆ ಕಾಣುತ್ತಿದೆ. ಹೀಗಾಗಿ ಶುಭಾ ಅವರನ್ನು ಕರೆದು ಕಿವಿಮಾತು ಹೇಳಿದ್ದಾರೆ. ಗೋಲ್ಡನ್ ಪಾಸ್ ಸರಿಯಾಗಿ ಇಟ್ಟುಕೋ. ಮನೆಯಲ್ಲಿ ಯಾರನ್ನೂ ನಂಬೋಕೆ ಆಗೋದಿಲ್ಲ. ನಿಯಮದಲ್ಲಿ ಅದನ್ನು ಕದಿಯಬಹುದು ಎಂದಿದೆ. ಹೀಗಾಗಿ, ಅದನ್ನು ಜೋಪಾನ ಮಾಡಿಟ್ಟುಕೊಂಡಷ್ಟು ಒಳ್ಳೆಯದು ಎಂದಿದ್ದಾರೆ. ಶುಭಾಗೆ ಇದು ಹೌದೆನ್ನಿಸಿ ತಲೆಯಾಡಿಸಿದ್ದಾರೆ.
ಇದನ್ನೂ ಓದಿ: Kichcha Sudeep Health update: ಆರೋಗ್ಯ ಮತ್ತು ಬಿಗ್ ಬಾಸ್ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್
ಆಪ್ತ ಚಂದ್ರಚೂಡ್ ವಿರುದ್ಧವೇ ತಿರುಗಿಬಿದ್ದ ಪ್ರಶಾಂತ್ ಸಂಬರಗಿ; ಬಿಗ್ ಬಾಸ್ ಮನೆಯಲ್ಲಿ 36 ಗಂಟೆಗಳ ಉಪವಾಸ