ಹೃದಯಾಘಾತದಿಂದ ತಮಿಳಿನ ಹಿರಿಯ ನಟ ಚೆಲ್ಲಾದುರೈ ನಿಧನ

ಮಾರಿ ಸಿನಿಮಾದಲ್ಲಿ ಧನುಶ್​, ರೋಬೋ ಶಂಕರ್​, ಹಾಗೂ ಚೆಲ್ಲಾದುರೈ ನಡುವೆ ದೃಶ್ಯವೊಂದು ಬರುತ್ತದೆ. ಇದು ಮೀಮ್​ಗಳಲ್ಲಿ ಹೆಚ್ಚು ಬಳಕೆ ಆಗಿತ್ತು.

ಹೃದಯಾಘಾತದಿಂದ ತಮಿಳಿನ ಹಿರಿಯ ನಟ ಚೆಲ್ಲಾದುರೈ ನಿಧನ
ಚೆಲ್ಲಾದುರೈ
Follow us
ರಾಜೇಶ್ ದುಗ್ಗುಮನೆ
|

Updated on:Apr 30, 2021 | 2:57 PM

ತಮಿಳಿನ ಹಿರಿಯ ನಟ ಆರ್​ಎಸ್​ಜಿ ಚೆಲ್ಲಾದುರೈ ಅವರು ಗುರುವಾರ (ಏಪ್ರಿಲ್ 29​) ಕೊನೆಯುಸಿರೆಳೆದಿದ್ದಾರೆ. ಚೆನ್ನೈನ ಪೆರಿಯಾರ್​ ನಗರದಲ್ಲಿರುವ ತಮ್ಮ ನಿವಾಸದಲ್ಲೇ ಅವರು ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ. ವಿಜಯ್​ ನಟನೆಯ ಕತ್ತಿ, ತೇರಿ, ಧನುಶ್​ ನಟನೆಯ ಮಾರಿ ಹಾಗೂ ಮೊದಲಾದ ಸಿನಿಮಾಗಳಲ್ಲಿ ಚೆಲ್ಲಾದುರೈ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರ ಎಲ್ಲರಿಗೂ ಇಷ್ಟವಾಗಿತ್ತು.

ತಮಿಳು ಚಿತ್ರರಂಗದಲ್ಲಿ ಪ್ರಮುಖ ಪೋಷಕ ಪಾತ್ರಧಾರಿಯಾಗಿದ್ದರು. ಗುರುವಾರ ಅವರು ಬಾತ್​​ರೂಂನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು ಎನ್ನಲಾಗಿದೆ. ಅವರ ಮಗ ಹೇಳುವ ಪ್ರಕಾರ ಚೆಲ್ಲಾದುರೈ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಶಿವಾಜಿ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಅವರ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು. ಚೆಲ್ಲಾದುರೈ ಸಾವಿಗೆ ಕಾಲಿವುಡ್​ ಮಂದಿ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ತಮಿಳು ಸಿನಿಮಾ ಪ್ರೇಕ್ಷಕರು ಕೂಡ ಬೇಸರ ಹೊರ ಹಾಕಿದ್ದಾರೆ.

ಮಾರಿ ಸಿನಿಮಾದಲ್ಲಿ ಧನುಶ್​, ರೋಬೋ ಶಂಕರ್​, ಹಾಗೂ ಚೆಲ್ಲಾದುರೈ ನಡುವೆ ದೃಶ್ಯವೊಂದು ಬರುತ್ತದೆ. ಇದು ಮೀಮ್​ಗಳಲ್ಲಿ ಹೆಚ್ಚು ಬಳಕೆ ಆಗಿತ್ತು. ವಿಜಯ್​ ನಟನೆಯ ತೇರಿ ಸಿನಿಮಾದಲ್ಲಿ ತಂದೆ ಪಾತ್ರದಲ್ಲಿ ಚೆಲ್ಲಾದುರೈ ಕಾಣಿಸಿಕೊಂಡಿದ್ದರು. ಕಾಣೆಯಾದ ಮಗಳನ್ನು ಹುಡುಕುವ ತಂದೆಯಾಗಿ ಎಲ್ಲರ ಕಣ್ಣಲ್ಲೂ ನೀರು ತರಿಸಿದ್ದರು ಚೆಲ್ಲಾದುರೈ.

ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ ಕೆ.ವಿ. ಆನಂದ್​ ಅವರು ಹೃದಯಾಘಾತದಿಂದ ಶುಕ್ರವಾರ (ಏ.30) ನಸುಕಿನ 3 ಗಂಟೆ ಸುಮಾರಿಗೆ ನಿಧನರಾಗಿದ್ದರು.  ಅವರ ನಿಧನದ ಸುದ್ದಿ ಕೇಳಿ ಇಡೀ ತಮಿಳು ಚಿತ್ರರಂಗಕ್ಕೆ ಆಘಾತ ಆಗಿದೆ. ಕೆಲವೇ ದಿನಗಳ ಹಿಂದೆ ಖ್ಯಾತ ನಟ ವಿವೇಕ್​ ಅವರನ್ನು ಕಾಲಿವುಡ್​ ಕಳೆದುಕೊಂಡಿತ್ತು. ವಿವೇಕ್​ ಕೂಡ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು.

ಇದನ್ನೂ ಓದಿ: KV Anand Death: ಖ್ಯಾತ ನಿರ್ದೇಶಕ ಕೆ.ವಿ. ಆನಂದ್​ ನಿಧನ; ಕಾಲಿವುಡ್​ಗೆ ಮತ್ತೊಂದು ಆಘಾತ

Published On - 2:56 pm, Fri, 30 April 21

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್