ವಿರಾಟ್ ಕೊಹ್ಲಿ-ಪ್ರೀತಿ ಜಿಂಟಾ ಖುಷಿಗೆ ಕಾರಣ ಆಗಿದ್ದು ಆ ಒಂದು ಫೋಟೋ; ರಿವೀಲ್ ಮಾಡಿದ ನಟಿ

ಐಪಿಎಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ತಮ್ಮ ನಡುವೆ ನಡೆದ ಒಂದು ಖುಷಿಯ ಕ್ಷಣದ ಬಗ್ಗೆ ಪ್ರೀತಿ ಜಿಂಟಾ ಮಾಹಿತಿ ನೀಡಿದ್ದಾರೆ. ಇಬ್ಬರೂ ತಮ್ಮ ಮಕ್ಕಳ ಚಿತ್ರಗಳನ್ನು ಪರಸ್ಪರ ತೋರಿಸಿಕೊಂಡು ಮಾತನಾಡುತ್ತಿದ್ದೆವು ಎಂದು ಅವರು ತಿಳಿಸಿದ್ದಾರೆ. ಈ ಘಟನೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿರಾಟ್ ಕೊಹ್ಲಿ-ಪ್ರೀತಿ ಜಿಂಟಾ ಖುಷಿಗೆ ಕಾರಣ ಆಗಿದ್ದು ಆ ಒಂದು ಫೋಟೋ; ರಿವೀಲ್ ಮಾಡಿದ ನಟಿ
ವಿರಾಟ್-ಪ್ರೀತಿ

Updated on: Apr 29, 2025 | 11:56 AM

ನಟಿ ಪ್ರೀತಿ ಜಿಂಟಾ (Preity Zinta) ಅವರು ಹಲವು ವರ್ಷಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅವರ ತಂಡ ಈ ಬಾರಿ ಉತ್ತಮವಾಗಿ ಆಡುತ್ತಿದೆ. ಇತ್ತೀಚೆಗೆ ನ್ಯೂ ಚಂಡೀಗಢದಲ್ಲಿ ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಐಪಿಎಲ್ ಪಂದ್ಯ ನಡೆಯಿತು. ಆಗ ನಡೆದ ಒಂದು ಖುಷಿಯ ಕ್ಷಣದ ಫೋಟೋ ಬಗ್ಗೆ ಪ್ರೀತಿ ಮಾತನಾಡಿದ್ದಾರೆ. ವಿರಾಟ್ ಹಾಗೂ ಪ್ರೀತಿ ಜಿಂಟಾ ಪರಸ್ಪರ ನಿಂತು ಮಾತನಾಡುತ್ತಿದ್ದರು. ಈ ವೇಳೆ ಪ್ರೀತಿ ಹಾಗೂ ವಿರಾಟ್ ಖುಷಿಯಲ್ಲಿ ಇತ್ತು. ಇದಕ್ಕೆ ಕಾರಣ ಏನು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ.

ಪ್ರೀತಿ ಜಿಂಟಾ ಅವರು ಸಿನಿಮಾ ಕ್ಷೇತ್ರದವರು. ವಿರಾಟ್ ಕ್ರಿಕೆಟ್ ಜಗತ್ತಿನವರು. ಆದಾಗ್ಯೂ ಇಬ್ಬರ ಮಧ್ಯೆ ಬಾಂಡಿಂಗ್ ಬೆಳೆದಿದೆ. ಇದಕ್ಕೆ ಕಾರಣ ಐಪಿಎಲ್. ಪ್ರೀತಿ ಜಿಂಟಾ ಹಾಗೂ ವಿರಾಟ್ ಅನೇಕ ಬಾರಿ ಮುಖಾಮುಖಿ ಆಗಿದ್ದಾರೆ. ಆಗ ಇವರ ಮಧ್ಯೆ ಗೆಳೆತನ ಬೆಳೆದಿದೆ. ಇತ್ತೀಚೆಗೆ ನಡೆದ ಪಂದ್ಯದಲ್ಲೂ ವಿರಾಟ್ ಹಾಗೂ ಪ್ರೀತಿ ಪರಸ್ಪರ ಮಾತನಾಡಿಕೊಂಡಿದ್ದಾರೆ.

ಇದನ್ನೂ ಓದಿ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ಅವನು ಗೆಳೆಯನಲ್ಲ, ಸಹೋದ್ಯೋಗಿ; ಅಕ್ಷಯ್-ಪರೇಶ್ ಮಧ್ಯೆ ಯಾವುದೂ ಸರಿ ಇಲ್ಲ?
ಬಸ್ ಡ್ರೈವರ್ ಆಗಿದ್ದ ಯಶ್ ತಂದೆ ಈಗ ನಿರ್ಮಾಪಕ; ಹೊಸ ಬ್ಯಾನರ್ ಶುರು?
ನಾನಿಗೆ ಕನ್ನಡ ಪಾಠ ಮಾಡಿದ ಶ್ರೀನಿಧಿ ಶೆಟ್ಟಿ; ಎಷ್ಟು ಕ್ಯೂಟ್ ನೋಡಿ

ಪ್ರೀತಿ ಜಿಂಟಾ ಅವರು ಇತ್ತೀಚೆಗೆ ಟ್ವಿಟರ್​ನಲ್ಲಿ ಪ್ರಶ್ನೋತ್ತರ ಸೆಷನ್ ನಡೆಸಿದ್ದರು. ಈ ವೇಳೆ ವಿರಾಟ್ ಹಾಗೂ ಪ್ರೀತಿ ಪರಸ್ಪರ ನಗುತ್ತಿರುವ ಫೋಟೋ ಇದೆ. ಈ ಬಗ್ಗೆ ಪ್ರೀತಿ ಜಿಂಟಾಗೆ ಪ್ರಶ್ನೆ ಮಾಡಲಾಗಿದೆ. ‘ವಿರಾಟ್ ಅವರ ಬಳಿ ಏನು ಮಾತನಾಡುತ್ತಿದ್ದಿರಿ’ ಎಂದು ಅಭಿಮಾನಿ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಪ್ರೀತಿ ಉತ್ತರಿಸಿದ್ದಾರೆ.

‘ನಾವು ನಮ್ಮ ಮಕ್ಕಳ ಚಿತ್ರಗಳನ್ನು ಪರಸ್ಪರ ತೋರಿಸಿಕೊಳ್ಳುತ್ತಿದ್ದೆವು. ಮತ್ತು ಅವರ ಬಗ್ಗೆ ಮಾತನಾಡುತ್ತಿದ್ದೆವು.  ಸಮಯ ಕಳೆಯುತ್ತಲೇ ಇರುತ್ತದೆ. 18 ವರ್ಷಗಳ ಹಿಂದೆ ನಾನು ವಿರಾಟ್ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ಅವರು ಉತ್ಸಾಹ ಭರಿತರಾಗಿದ್ದರು. ಈಗಲೂ ಅವರಲ್ಲಿ ಉತ್ಸಾಹ ಇದೆ. ಅವರು ಯವಾಗಲೂ ಸ್ವೀಟ್​ ಮತ್ತ ಪ್ರೀತಿಯ ತಂದೆ’ ಎಂದು ಪ್ರೀತಿ ಜಿಂಟಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನೀ ಔಟಾಗಿದ್ದು ಒಳ್ಳೆದಾಯ್ತು… ವಿರಾಟ್ ಕೊಹ್ಲಿಗೆ ಕೆಎಲ್ ರಾಹುಲ್ ಪ್ರತ್ಯುತ್ತರ 

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪರಸ್ಪರ ಪ್ರೀತಿಸಿ ಮದುವೆ ಆದರು. ಈ ದಂಪತಿಗೆ ಇಬ್ಬರು ಮಕ್ಕಳು. ಆದರೆ, ಅವರು ತಮ್ಮ ಮಕ್ಕಳ ಫೋಟೋನ ರಿವೀಲ್ ಮಾಡಿಲ್ಲ. ಖಾಸಗಿತನ ಕಾಪಾಡಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ಇನ್ನು, ಪ್ರೀತಿ ಜಿಂಟಾ ಅವರು ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಐಪಿಎಲ್ ಸಂದರ್ಭದಲ್ಲಿ ಭಾರತಕ್ಕೆ ಬರುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 11:51 am, Tue, 29 April 25