
ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಅಚ್ಚರಿಯ ರೀತಿಯಲ್ಲಿ ಅಬ್ಬರಿಸುತ್ತಿದೆ. ರಂಗಾಯಣ ರಘು ಹಾಗೂ ಗೋವಿಂದೇ ಗೌಡ ನಟನೆಯ ಈ ಚಿತ್ರವು ದಿನದಿಂದ ದಿನಕ್ಕೆ ತನ್ನ ಪ್ರದರ್ಶನವನ್ನು ಹೆಚ್ಚಿಸಿಕೊಳ್ಳುತ್ತಾ, ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಹಣ ಬಾಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಸಿನಿಮಾ ಬಿಡುಗಡೆಯಾದ ಆರಂಭದಲ್ಲಿ ನಿಧಾನವಾಗಿ ಗಳಿಕೆ ಆರಂಭಿಸಿದರೂ, ವೀಕ್ಷಕರ ಮೆಚ್ಚುಗೆ ಹಾಗೂ ಮೌತ್ ಪಬ್ಲಿಸಿಟಿಯಿಂದಾಗಿ ಚಿತ್ರದ ಕಲೆಕ್ಷನ್‌ನಲ್ಲಿ ಭಾರೀ ಏರಿಕೆಯಾಗಿದೆ. ಮೊದಲ ವಾರದಲ್ಲಿಯೂ ಉತ್ತಮ ಗಳಿಕೆ ಕಂಡ ಈ ಸಿನಿಮಾ, ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ ತನ್ನ ವೇಗವನ್ನು ದುಪ್ಪಟ್ಟುಗೊಳಿಸಿದೆ. ಪ್ರಸ್ತುತ ಈ ಚಿತ್ರವು ಒಟ್ಟು 39.05 ಕೋಟಿ ರೂಪಾಯಿಗಳಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಭರ್ಜರಿ ಕಲೆಕ್ಷ್: ಸಿನಿಮಾವು ಬಿಡುಗಡೆಯಾದ ಕೇವಲ 14 ದಿನಗಳಲ್ಲಿ ಅಂದರೆ ಎರಡು ವಾರಗಳ ಒಳಗೆ ಬರೋಬ್ಬರಿ 39.05 ಕೋಟಿ ರೂ ಗಳಿಕೆ ಹಾಗೂ 33.47 ಕೋಟಿ ರೂ. ನಿವ್ವಳ ಗಳಿಕೆ ದಾಖಲಿಸಿದೆ.
ಶೋಗಳ ಸಂಖ್ಯೆಯಲ್ಲಿ ಭರ್ಜರಿ ಏರಿಕೆ: ಕೇವಲ 60 ಶೋಗಳೊಂದಿಗೆ ಶುರುವಾದ ಈ ಸಿನಿಮಾದ ಯಶಸ್ಸು ಎಷ್ಟರ ಮಟ್ಟಿಗಿದೆ ಎಂದರೆ, ಎರಡನೇ ಗುರುವಾರದ ವೇಳೆಗೆ ಪ್ರದರ್ಶನಗಳ ಸಂಖ್ಯೆ ಬರೋಬ್ಬರಿ 968ಕ್ಕೆ ಏರಿಕೆಯಾಗಿದೆ. ವೀಕೆಂಡ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನ: ಎರಡನೇ ಶನಿವಾರ ಮತ್ತು ಭಾನುವಾರ ಚಿತ್ರದ ಆಕ್ಯುಪೆನ್ಸಿ ಶೇ. 75 ಮತ್ತು ಶೇ. 84ರಷ್ಟು ದಾಖಲಾಗುವ ಮೂಲಕ ಥೇಟರ್‌ಗಳಲ್ಲಿ ಹೌಸ್‌ಫುಲ್ ಬೋರ್ಡ್ ಬೀಳುವಂತೆ ಮಾಡಿದೆ.
ಇದನ್ನೂ ಓದಿ: ಪ್ರೇಮದ ಊರಲಿ ಸಿನಿಮಾ ಎರಡು ವಾರದ ಕಲೆಕ್ಷನ್
ದೈನಂದಿನ ಗಳಿಕೆಯ ಗ್ರಾಫ್: ಮೊದಲ ದಿನ ಕೇವಲ 0.10 ಕೋಟಿ ರೂ. ಗಳಿಸಿದ್ದ ಸಿನಿಮಾ, ಎರಡನೇ ವಾರದ ಅಂತ್ಯಕ್ಕೆ ಏಕಾಏಕಿ ದಿನವೊಂದರ ಕಲೆಕ್ಷನ್ ಅನ್ನು 4 ಕೋಟಿ ರೂ ಗಡಿ ದಾಟಿಸುವ ಮೂಲಕ ದೊಡ್ಡ ದಾಖಲೆ ಬರೆದಿದೆ. 15ನೇ ದಿನ ಸಿನಿಮಾ 4.50 ಕೋಟಿ ರೂಪಾಯಿ ಬಾಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:55 am, Sat, 10 October 26