ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕೆ ಎಂಟ್ರಿ ಕೊಟ್ಟ ಅಚ್ಚರಿಯ ಸ್ಟಾರ್ ನಟಿ

|

Updated on: Dec 14, 2024 | 8:57 PM

SS Rajamouli: ಎಸ್​ಎಸ್ ರಾಜಮೌಳಿ ನಿರ್ದೇಶಿಸಿ ಮಹೇಶ್ ಬಾಬು ನಟಿಸುತ್ತಿರುವ ಭಾರಿ ಬಜೆಟ್ ಸಿನಿಮಾದ ಬಗ್ಗೆ ವಿಶ್ವದ ಸಿನಿಮಾ ಪ್ರೇಮಿಗಳು ಕಾತರರಾಗಿ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಭಾರತದ ನಟರಷ್ಟೆ ಅಲ್ಲದೆ ಹಾಲಿವುಡ್​ನ ಹಲವು ನಟರು ನಟಿಸುತ್ತಿದ್ದಾರೆ. ಇದೀಗ ಅಚ್ಚರಿಯ ಸ್ಟಾರ್ ನಟಿ, ಚಿತ್ರತಂಡ ಸೇರಿಕೊಂಡಿದ್ದಾರೆ.

ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕೆ ಎಂಟ್ರಿ ಕೊಟ್ಟ ಅಚ್ಚರಿಯ ಸ್ಟಾರ್ ನಟಿ
ಮಹೇಶ್ ಬಾಬು
Follow us on

‘ಆರ್​ಆರ್​ಆರ್’ ಸಿನಿಮಾದ ಗ್ಲೋಬಲ್ ಹಿಟ್ ಬಳಿಕ ರಾಜಮೌಳಿಯ ರೇಂಜ್ ಬಹಳ ಎತ್ತರಕ್ಕೆ ಹೋಗಿದೆ. ಇದೀಗ ರಾಜಮೌಳಿಯ ಸಿನಿಮಾಕ್ಕಾಗಿ ಭಾರತದಲ್ಲಿ ಮಾತ್ರವಲ್ಲ, ವಿದೇಶಿ ಸಿನಿಮಾ ಪ್ರೇಮಿಗಳು ಸಹ ಕಾಯುತ್ತಿದ್ದಾರೆ. ‘ಆರ್​ಆರ್​ಆರ್’ ಸಿನಿಮಾ ಬಿಡುಗಡೆಗೆ ಮುನ್ನವೇ ಮಹೇಶ್ ಬಾಬು ಜೊತೆಗೆ ಸಿನಿಮಾ ಘೋಷಣೆ ಮಾಡಿದ್ದರು ರಾಜಮೌಳಿ. ಆದರೆ ‘ಆರ್​ಆರ್​ಆರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆದ ಕಾರಣ ರಾಜಮೌಳಿ, ಮಹೇಶ್ ಬಾಬು ಸಿನಿಮಾದ ಪ್ರೊಡಕ್ಷನ್ ಸ್ಕೇಲ್ ಅನ್ನೇ ಬದಲಾಯಿಸಿದ್ದು, ಈ ಸಿನಿಮಾ ಈಗ ಹಾಲಿವುಡ್ ಲೆವೆಲ್​ನಲ್ಲಿ ನಿರ್ಮಾಣ ಆಗಲಿದೆ. ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಈ ಸಿನಿಮಾದ ಪ್ರೀ ಪ್ರೊಡಕ್ಷನ್ ಚಾಲ್ತಿಯಲ್ಲಿದೆ. ಸಿನಿಮಾದ ಮುಹೂರ್ತ ಸಹ ಇನ್ನೂ ಆಗಿಲ್ಲ. ಇದರ ನಡುವೆ ಸಿನಿಮಾಕ್ಕೆ ಅಚ್ಚರಿಯ ಸ್ಟಾರ್ ನಟಿಯೊಬ್ಬರು ಎಂಟ್ರಿ ಕೊಟ್ಟಿರುವ ಸುದ್ದಿ ಹರಿದಾಡುತ್ತಿದೆ.

ರಾಜಮೌಳಿ ಮತ್ತು ಮಹೇಶ್ ಬಾಬು ಅವರ ಸಿನಿಮಾದಲ್ಲಿ ಹಾಲಿವುಡ್​ನ ದೊಡ್ಡ ತಾರೆಯರು ನಟಿಸಲಿದ್ದಾರೆ ಎನ್ನಲಾಗುತ್ತಿದೆ. ‘ಥೋರ್’ ಖ್ಯಾತಿಯ ಕ್ರಿಸ್ ಹ್ಯಾಮ್ಸ್​ವರ್ತ್ ಸೇರಿದಂತೆ ಹಾಲಿವುಡ್​ನ ಕೆಲ ನಟಿಯರ ಹೆಸರು ಸಹ ಕೇಳಿ ಬರುತ್ತಿದೆ. ಆದರೆ ಯಾವುದೂ ಸಹ ಖಾತ್ರಿ ಆಗಿಲ್ಲ. ಇದೆಲ್ಲದರ ನಡುವೆ ಮಹೇಶ್ ಬಾಬು-ರಾಜಮೌಳಿ ಸಿನಿಮಾಕ್ಕೆ ಹಾಲಿವುಡ್​ನಲ್ಲಿ ನೆಲೆಸಿರುವ ಭಾರತೀಯ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಎಂಟ್ರಿ ನೀಡಿದ್ದಾರೆ.

ಇದನ್ನೂ ಓದಿ:ಎರಡು ಭಾಗದಲ್ಲಿ ಬರಲಿದೆ ಮಹೇಶ್​ಬಾಬು-ರಾಜಮೌಳಿ ಸಿನಿಮಾ; ಅಭಿಮಾನಿಗಳಿಗೆ ಬೇಸರ

ಸಿನಿಮಾದ ನಾಯಕಿ ಪಾತ್ರಕ್ಕೆ ಸಾಕಷ್ಟು ಹುಡುಕಾಟವನ್ನು ರಾಜಮೌಳಿ ಮಾಡಿದ್ದರು. ಮಲೇಷಿಯಾದ ಸುಂದರ ನಟಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿತ್ತಂತೆ. ಆದರೆ ಆಕೆಯ ನಟನಾ ಪ್ರತಿಭೆಯ ಬಗ್ಗೆ ರಾಜಮೌಳಿಗೆ ಅಸಮಾಧಾನ ಇದ್ದ ಕಾರಣ ಇದೀಗ ಅನುಭವಿ ನಟಿ ಜೊತೆಗೆ ಸ್ಟಾರ್ ನಟಿಯೂ ಆಗಿರುವ ಜನಪ್ರಿಯತೆಯುಳ್ಳ, ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ಶಕ್ತಿಯುಳ್ಳ ಪ್ರಿಯಾಂಕಾ ಚೋಪ್ರಾ ಅವರನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

ರಾಜಮೌಳಿ ಮತ್ತು ಮಹೇಶ್ ಬಾಬು ನಟನೆಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ನಡೆಯುತ್ತಲೇ ಇದೆ. ಸಿನಿಮಾಕ್ಕೆ ವಿಜಯೇಂದ್ರ ಪ್ರಸಾದ್ ಕತೆ ಬರೆದಿದ್ದಾರೆ. ಸಿನಿಮಾ ಅಡ್ವೇಂಚರ್ ಆಕ್ಷನ್ ಮಾದರಿಯ ಕತೆ ಹೊಂದಿದೆ. ಸ್ಟಿವನ್ ಸ್ಪೀಲ್​ಬರ್ಗ್​ರ ಇಂಡಿಯಾನಾ ಜೋನ್ಸ್, ಮಿಷನ್ ಇಂಬಾಸಿಬಲ್ ಮಾದರಿಯ ಕತೆ ಇದರಲ್ಲಿದೆ. ಸಿನಿಮಾದ ಬಹುತೇಕ ಚಿತ್ರೀಕರಣ ಅಮೆಜಾನ್ ಕಾಡುಗಳಲ್ಲಿ ನಡೆಯಲಿದೆಯಂತೆ. ಸಿನಿಮಾದ ಬಜೆಟ್ ಸುಮಾರು 1000 ಕೋಟಿ ರೂಪಾಯಿಗಳು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ