ದೆಹಲಿ: ಕಳೆದ ವರ್ಷ ಗಣರಾಜ್ಯೋತ್ಸವದಂದು (Republic Day) ರೈತರ ಪ್ರತಿಭಟನೆಯ ವೇಳೆ ಕೆಂಪು ಕೋಟೆ ಹಿಂಸಾಚಾರದ ನಂತರ ಬೆಳಕಿಗೆ ಬಂದ ಪಂಜಾಬಿ ನಟ-ಕಾರ್ಯಕರ್ತ ದೀಪ್ ಸಿಧು (Deep Sidhu) ಮಂಗಳವಾರ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ಸಿಖ್ ಧ್ವಜ ಹಾರಿಸುವ ಸಂಚಿನಲ್ಲಿ ಭಾಗಿಯಾದ ಆರೋಪದ ಮೇಲೆ ಸಿಧು ಅವರನ್ನು ಎರಡು ಬಾರಿ ಬಂಧಿಸಲಾಗಿತ್ತು. ದೆಹಲಿಯನ್ನು ಬೈಪಾಸ್ ಮಾಡುವ ಕುಂಡ್ಲಿ-ಮನೇಸರ್-ಪಲ್ವಾಲ್ (KMP) ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ಸ್ಥಳದ ದೃಶ್ಯಗಳು ಟ್ರೈಲರ್ ಟ್ರಕ್‌ನ ಹಿಂಭಾಗದಲ್ಲಿ ಬಿಳಿ ಮಹೀಂದ್ರಾ ಸ್ಕಾರ್ಪಿಯೊ ಒಡೆದಿರುವುದನ್ನು ತೋರಿಸುತ್ತವೆ.ಎಸ್ ಯುವಿಯ ನ ಡ್ರೈವರ್ ಸೈಡ್ ಸಂಪೂರ್ಣ ಹಾನಿಗೊಳಗಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಸಿಧು ಅವರು ದೆಹಲಿಯಿಂದ ಪಂಜಾಬ್‌ನ ಭಟಿಂಡಾಗೆ ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಕಾರು ಮಂಗಳವಾರ ರಾತ್ರಿ 9:30 ಕ್ಕೆ ಟ್ರೈಲರ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆಸ್ಪತ್ರೆಗೆ ತರುವಾಗಲೇ ಅವರು ಮೃತಪಟ್ಟಿದ್ದರು ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.ಕಳೆದ ವರ್ಷ ಫೆಬ್ರುವರಿಯಲ್ಲಿ ದೀಪ್ ಸಿಧು ಬಂಧನದ ನಂತರ, “ಹಿಂಸಾಚಾರವನ್ನು ಸೃಷ್ಟಿಸುವುದು ಮತ್ತು ನಮ್ಮ ರಾಷ್ಟ್ರಧ್ವಜವನ್ನು ಕಡೆಗಣಿಸುವುದು” ಆತನ ಉದ್ದೇಶವಾಗಿತ್ತು ಎಂದು ಅವರು ಹೇಳಿದ್ದರು. ಸಿಧು ಅವರು ಕೆಂಪು ಕೋಟೆಯ ಘಟನೆಯ “ಮುಖ್ಯ ಗಲಭೆಕೋರ ಮತ್ತು ಪ್ರಚೋದಕ”, ಅವರು “ಜನರನ್ನು ಕೆರಳಿಸಿ ಹಿಂಸಾಚಾರವನ್ನು ಪ್ರಚೋದಿಸಿದರು”. ಅವರು ಕತ್ತಿ, ಕೋಲು ಮತ್ತು ಬಾವುಟ ಹಿಡಿದಿರುವ ವಿಡಿಯೊ ಇದೆ ಎಂದು ಪೊಲೀಸರು ದೆಹಲಿ ನ್ಯಾಯಾಲಯದಲ್ಲಿ ಹೇಳಿದ್ದರು.
ಆದಾಗ್ಯೂ, ನ್ಯಾಯಾಲಯವು ಈ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಿದ್ದು, ಅವರು ಜನಪ್ರಿಯರಾಗಿದ್ದರಿಂದ ಪ್ರಾಸಿಕ್ಯೂಷನ್ ಅವರನ್ನು ಉದಾಹರಣೆಯಾಗಿ ಮಾಡಲು ಪ್ರಯತ್ನಿಸಿದೆ. ಆದರೆ ಇದು “ನ್ಯಾಯದ ವೈಫಲ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ” ಮತ್ತು ಅವರ ನಿರಂತರ ಬಂಧನವು ಅವರ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿತ್ತು.
Another visual of Deep Sidhu’s scorpio after an unfortunate accident. pic.twitter.com/TmZpmY16p8
— Utkarsh Singh (@UtkarshSingh_) February 15, 2022
ಕೆಲವು ಗಂಟೆಗಳ ನಂತರ, ಸ್ಮಾರಕಕ್ಕೆ ಹಾನಿ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರ ಅಪರಾಧ ವಿಭಾಗವು ಸಿಧು ಅವರನ್ನು ಬಂಧಿಸಿತು. ಅವರ ಬಂಧನವನ್ನು ಅತೀ ಕೆಟ್ಟ ಕ್ರಮ ಎಂದು ಕರೆದ ದೆಹಲಿ ನ್ಯಾಯಾಲಯವು ಅವರಿಗೆ ಎರಡನೇ ಬಾರಿಗೆ ಜಾಮೀನು ನೀಡಿತು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಜಾತಿಗೆ ಸಂಬಂಧಿಸಿದ ಅವಹೇಳನಕಾರಿ ಪದಗಳನ್ನು ಬಳಸಿದ್ದಕ್ಕಾಗಿ ದೀಪ್ ಸಿಧು ಅವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ: ರಾಹುಲ್ ಗಾಂಧಿ ಟ್ವೀಟ್ ವಿರುದ್ಧ ಅಸ್ಸಾಂನಲ್ಲಿ ಸಾವಿರಾರು ದೂರುಗಳು ದಾಖಲು
Published On - 10:17 pm, Tue, 15 February 22