ಈ ವರ್ಷ ಬಹುನಿರೀಕ್ಷಿತ ಚಿತ್ರವಾಗಿ ತೆರೆಕಂಡ ‘ಪುಷ್ಪ 2’ ಸಿನಿಮಾ ಎಲ್ಲೆಲ್ಲೂ ಅಬ್ಬರಿಸುತ್ತಿದೆ. ಈ ಚಿತ್ರಕ್ಕೆ ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್ಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಸಿನಿಮಾದಲ್ಲಿನ ಆ್ಯಕ್ಷನ್ ದೃಶ್ಯಗಳನ್ನು ನೋಡಿ ಮಾಸ್ ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ. ಎಲ್ಲದರ ಫಲವಾಗಿ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಈ ಬಗ್ಗೆ ‘ಪುಷ್ಪ 2’ ತಂಡದಿಂದಲೇ ಅಧಿಕೃತ ಮಾಹಿತಿ ಹಂಚಿಕೊಳ್ಳಲಾಗಿದೆ.
ಡಿಸೆಂಬರ್ 5ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಯಿತು. ಸಾವಿರಾರು ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಸಿನಿಮಾ ಎಲ್ಲೆಡೆಯೂ ಹೌಸ್ಫುಲ್ ಆಗಿದೆ. ವೀಕೆಂಡ್ನಲ್ಲೂ ಅಬ್ಬರ ಜೋರಾಗಿಯೇ ಇದೆ. ಆದ್ದರಿಂದ ಹಲವು ಹೊಸ ದಾಖಲೆಗಳನ್ನು ‘ಪುಷ್ಪ 2’ ಚಿತ್ರ ಬರೆಯುತ್ತಿದೆ. ಈವರೆಗೂ ವಿಶ್ವಾದ್ಯಂತ ಬರೋಬ್ಬರಿ 621 ಕೋಟಿ ರೂಪಾಯಿ ಸಂಗ್ರಹ ಆಗಿದೆ ಎಂದು ಚಿತ್ರತಂಡವೇ ಮಾಹಿತಿ ನೀಡಿದೆ.
The box office is witnessing history with #Pushpa2TheRule ❤🔥
The WILDFIRE BLOCKBUSTER collects a gross of 621 CRORES WORLDWIDE in just 3 days, shattering many records 💥💥💥
Book your tickets now!
🎟️ https://t.co/tHogUVEOs1#Pushpa2#WildFirePushpaIcon Star @alluarjun… pic.twitter.com/CQ1SBTAnV4
— Mythri Movie Makers (@MythriOfficial) December 8, 2024
‘ಪುಷ್ಪ 2’ ಸಿನಿಮಾಗೆ ಬಂಡವಾಳ ಹೂಡಿರುವ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ಸೋಶಿಯಲ್ ಮೀಡಿಯಾ ಮೂಲಕ ಲೆಕ್ಕ ನೀಡಿದೆ. ವಿಶ್ವಾದ್ಯಂತ 3 ದಿನಕ್ಕೆ 621 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೊಸ ಪೋಸ್ಟರ್ ಮೂಲಕ ತಿಳಿಸಲಾಗಿದೆ. ಇದು ಶನಿವಾರದ (ಡಿ.7) ತನಕ ಆಗಿರುವ ಕಲೆಕ್ಷನ್ ಮಾತ್ರ. ಭಾನುವಾರದ (ಡಿ.8) ಗಳಿಕೆ ಕೂಡ ಸೇರಿದರೆ ಎಲ್ಲರಿಗೂ ಅಚ್ಚರಿ ಆಗುವ ನಂಬರ್ ಆಗಲಿದೆ.
ಇದನ್ನೂ ಓದಿ: ‘ಪುಷ್ಪ 2’ ನೋಡಲು ಬಂದಾಗ ಅವಘಡ; ಮೃತ ಕುಟುಂಬಕ್ಕೆ 25 ಲಕ್ಷ ರೂಪಾಯಿ ಕೊಟ್ಟ ಅಲ್ಲು ಅರ್ಜುನ್
ತುಂಬ ಅದ್ದೂರಿಯಾಗಿ ‘ಪುಷ್ಪ 2’ ಸಿನಿಮಾವನ್ನು ಮಾಡಲಾಗಿದೆ. ಈ ಚಿತ್ರಕ್ಕೆ ಸುಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಈ ಸಿನಿಮಾದಿಂದ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಹಾಡುಗಳು ಸೂಪರ್ ಹಿಟ್ ಆಗಿವೆ. ಈ ಮೊದಲು ಅಬ್ಬರಿಸಿದ್ದ ಸಿನಿಮಾಗಳ ಅನೇಕ ದಾಖಲೆಯನ್ನು ‘ಪುಷ್ಪ 2’ ಚಿತ್ರ ಅಳಿಸಿ ಹಾಕುತ್ತಿದೆ. ಎಲ್ಲ ರಾಜ್ಯಗಳಲ್ಲೂ ಜನರು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಅಂತಿಮವಾಗಿ ಈ ಸಿನಿಮಾಗೆ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಸಿನಿಪ್ರಿಯರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.