ಶ್ರೀಲೀಲಾ ಪಾಲಿನ ಮಹತ್ವದ ದಿನ ಬಂತು; ನ.24ಕ್ಕೆ ಅಲ್ಲು ಅರ್ಜುನ್ ಜತೆ ಧಮಾಕ

ನಟಿ ಶ್ರೀಲೀಲಾ ಅವರು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲಿಯೂ ಮಿಂಚುತ್ತಿದ್ದಾರೆ. ಅವರ ವೃತ್ತಿ ಜೀವನಕ್ಕೆ ದೊಡ್ಡ ಹೈಪ್ ಸಿಗುವ ಟೈಮ್ ಬಂದಿದೆ. ಹೌದು, ‘ಪುಷ್ಪ 2’ ಸಿನಿಮಾದ ಸಾಂಗ್​ನಲ್ಲಿ ಶ್ರೀಲೀಲಾ ಡ್ಯಾನ್ಸ್ ಮಾಡಿದ್ದು, ಆ ಹಾಡಿನ ಬಿಡುಗಡೆಗೆ ಈಗ ಸಮಯ ಬಂದಿದೆ. ಈ ಹಾಡಿನ ರಿಲೀಸ್​ ಬಗ್ಗೆ ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ.

ಶ್ರೀಲೀಲಾ ಪಾಲಿನ ಮಹತ್ವದ ದಿನ ಬಂತು; ನ.24ಕ್ಕೆ ಅಲ್ಲು ಅರ್ಜುನ್ ಜತೆ ಧಮಾಕ
ಶ್ರೀಲೀಲಾ, ಅಲ್ಲು ಅರ್ಜುನ್
Follow us
ಮದನ್​ ಕುಮಾರ್​
|

Updated on: Nov 21, 2024 | 8:06 PM

ಕನ್ನಡದ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವ ಶ್ರೀಲೀಲಾ ಅವರು ತೆಲುಗಿನಲ್ಲಿಯೂ ಅಷ್ಟೇ ಜನಪ್ರಿಯತೆ ಪಡೆದಿದ್ದಾರೆ. ಕೆಲವೇ ದಿನಗಳ ಹಿಂದೆ ಅವರಿಗೊಂದು ಬಂಪರ್ ಚಾನ್ಸ್ ಸಿಕ್ಕಿತು. ಏನದು? ‘ಪುಷ್ಪ 2’ ಸಿನಿಮಾದಲ್ಲಿ ಐಟಂ ಡ್ಯಾನ್ಸ್ ಮಾಡುವ ಅವಕಾಶ. ಇಂಥ ಚಾನ್ಸ್ ಯಾರೂ ತಪ್ಪಿಸಿಕೊಳ್ಳುವುದಿಲ್ಲ. ಶ್ರೀಲೀಲಾ ಆಯ್ಕೆ ಆಗುವುದಕ್ಕೂ ಮುನ್ನ ಅನೇಕ ನಟಿಯರ ಹೆಸರು ಕೇಳಿಬಂದಿತ್ತು. ಅಂತಿಮವಾಗಿ ಆ ಅವಕಾಶ ಸಿಕ್ಕಿದ್ದು ಶ್ರೀಲೀಲಾ ಪಾಲಿಗೆ. ಈಗ ಆ ಹಾಡಿನ ಬಿಡುಗಡೆಗೆ ಸಮಯ ನಿಗದಿ ಆಗಿದೆ. ಅಲ್ಲು ಅರ್ಜುನ್ ಹಾಗೂ ಶ್ರೀಲೀಲಾ ಹೆಜ್ಜೆ ಹಾಕಿರುವ ‘ಕಿಸಿಕ್..’ ಹಾಡು ನವೆಂಬರ್​ 24ರಂದು ರಿಲೀಸ್ ಆಗಲಿದೆ.

‘ಪುಷ್ಪ 2’ ಸಿನಿಮಾ ಡಿಸೆಂಬರ್​ 5ರಂದು ಬಿಡುಗಡೆ ಆಗಲಿದ್ದು, ಈಗಾಗಲೇ ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಟ್ರೇಲರ್​ ಧೂಳೆಬ್ಬಿಸಿದ ಬಳಿಕ ಹಾಡಿನ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ. ‘ಕಿಸಿಕ್..’ ಹಾಡಿನ ಪೋಸ್ಟರ್​ ನೋಡಿಯೇ ಅಭಿಮಾನಿಗಳಿಗೆ ಥ್ರಿಲ್ ಆಗಿದೆ. ನ.24ರಂದು ಸಂಜೆ 7 ಗಂಟೆ 2 ನಿಮಿಷಕ್ಕೆ ಈ ಹಾಡು ಬಿಡುಗಡೆ ಆಗಲಿದೆ.

ಸಮಂತಾ ರುತ್ ಪ್ರಭು ಅವರು ‘ಪುಷ್ಪ’ ಸಿನಿಮಾದಲ್ಲಿ ಐಟಂ ಡ್ಯಾನ್ಸ್ ಮಾಡಿದ್ದರು. ಅವರು ಹೆಜ್ಜೆ ಹಾಕಿದ ಪರಿ ಕಂಡು ಪಡ್ಡೆಗಳು ಬೆರರಾಗಿದ್ದರು. ಈಗ ‘ಪುಷ್ಪ 2’ ಸಿನಿಮಾದಲ್ಲಿ ಶ್ರೀಲೀಲಾ ಅವರು ಅದೇ ರೀತಿ ಮೋಡಿ ಮಾಡುತ್ತಾರಾ ಎಂಬುದನ್ನು ತಿಳಿಯುವ ಸಮಯ ಬಂದಿದೆ. ಶ್ರೀಲೀಲಾ ಉತ್ತಮ ಡ್ಯಾನ್ಸರ್ ಎಂಬುದರಲ್ಲಿ ಅನುಮಾನ ಇಲ್ಲ. ಅಲ್ಲು ಅರ್ಜುನ್ ಜೊತೆ ಅವರ ಕಾಂಬಿನೇಷನ್​ ಇರುವುದರಿಂದ ನಿರೀಕ್ಷೆ ಡಬಲ್ ಆಗಿದೆ.

ಇದನ್ನೂ ಓದಿ: ‘ಪುಷ್ಪ 2’ ಬಿಡುಗಡೆಗೂ ಮುನ್ನ ಮತ್ತೊಮ್ಮೆ ರಿಲೀಸ್ ಆಗಲಿದೆ ‘ಪುಷ್ಪ’ ಸಿನಿಮಾ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಪುಷ್ಪ 2’ ರಿಲೀಸ್ ಆಗಲಿದೆ. ತೆಲುಗಿನ ಜೊತೆ ಕನ್ನಡ, ಹಿಂದಿ, ತಮಿಳು, ಮಲಯಾಳಂ ಮುಂತಾದ ಭಾಷೆಗಳಿಗೆ ಡಬ್ ಆಗಿದೆ. ಈ ಸಿನಿಮಾ ಬಿಡುಗಡೆ ಆದ ನಂತರ ಅನೇಕರ ಬದುಕು ಬದಲಾಗಲಿದೆ. ಶ್ರೀಲೀಲಾ ಅವರಿಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಹೆಚ್ಚಾಗುವುದು ಖಚಿತ. ದೇವಿಶ್ರೀ ಪ್ರಸಾದ್ ಅವರು ‘ಪುಷ್ಪ 2’ ಸಿನಿಮಾಗೆ ಸಂಗೀತ ನೀಡಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್​’ ನಿರ್ಮಾಣದ ಈ ಚಿತ್ರವನ್ನು ಸುಕುಮಾರ್​ ನಿರ್ದೇಶಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?