‘ಪುಷ್ಪ 2’ ಬಿಡುಗಡೆಗೂ ಮುನ್ನ ಮತ್ತೊಮ್ಮೆ ರಿಲೀಸ್ ಆಗಲಿದೆ ‘ಪುಷ್ಪ’ ಸಿನಿಮಾ

ಬಾಕ್ಸ್ ಆಫೀಸ್​ನಲ್ಲಿ ಹೊಸ ದಾಖಲೆ ಬರೆಯಲು ‘ಪುಷ್ಪ 2’ ಸಿನಿಮಾ ಬರುತ್ತಿದೆ. ಅದಕ್ಕೂ ಮೊದಲು ‘ಪುಷ್ಪ’ ಸಿನಿಮಾವನ್ನು ಮತ್ತೊಮ್ಮೆ ಚಿತ್ರಮಂದಿರದಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. ಶೀಘ್ರದಲ್ಲೇ ‘ಪುಷ್ಪ’ ಸಿನಿಮಾ ಮರು ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ಮತ್ತೊಮ್ಮೆ ನೋಡಲು ಅಲ್ಲು ಅರ್ಜುನ್ ಅಭಿಮಾನಿಗಳು ಕಾದಿದ್ದಾರೆ.

‘ಪುಷ್ಪ 2’ ಬಿಡುಗಡೆಗೂ ಮುನ್ನ ಮತ್ತೊಮ್ಮೆ ರಿಲೀಸ್ ಆಗಲಿದೆ ‘ಪುಷ್ಪ’ ಸಿನಿಮಾ
ಅಲ್ಲು ಅರ್ಜುನ್
Follow us
ಮದನ್​ ಕುಮಾರ್​
|

Updated on: Nov 20, 2024 | 5:10 PM

ಭಾರಿ ಬಜೆಟ್​ನಲ್ಲಿ ಸಿದ್ಧವಾಗಿದ್ದ ‘ಪುಷ್ಪ’ ಸಿನಿಮಾ 2021ರಲ್ಲಿ ಬಿಡುಗಡೆ ಆಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಆ ಸಿನಿಮಾ ಧೂಳೆಬ್ಬಿಸಿತ್ತು. ತೆಲುಗಿನ ಆ ಚಿತ್ರ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ತೆರೆಕಂಡಿತ್ತು. ವಿಶೇಷವಾಗಿ, ಹಿಂದಿ ಪ್ರೇಕ್ಷಕರು ‘ಪುಷ್ಪ’ ಸಿನಿಮಾವನ್ನು ಸಖತ್ ಮೆಚ್ಚಿಕೊಂಡಿದ್ದರು. ಬಳಿಕ ಒಟಿಟಿ ಮತ್ತು ಟಿವಿಯಲ್ಲಿ ಪ್ರಸಾರ ಆದಾಗಲೂ ಜನರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಆ ಸಿನಿಮಾ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಗಲಿದೆ. ‘ಪುಷ್ಪ 2’ ಬಿಡುಗಡೆ ಹೊಸ್ತಿಲಿನಲ್ಲಿ ‘ಪುಷ್ಪ’ ಚಿತ್ರವನ್ನು ರೀ-ರಿಲೀಸ್ ಮಾಡಲು ನಿರ್ಧರಿಸಲಾಗಿದೆ.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿದ್ದ ‘ಪುಷ್ಪ’ ಸಿನಿಮಾದ ಸೀಕ್ವೆಲ್ ಆಗಿ ‘ಪುಷ್ಪ 2’ ಸಿನಿಮಾ ಸಿದ್ಧವಾಗಿದೆ. ಡಿಸೆಂಬರ್​ 5ರಂದು ‘ಪುಷ್ಪ 2’ ಬಿಡುಗಡೆ ಆಗಲಿದೆ. ಪ್ರೇಕ್ಷಕರಿಗೆ ಈ ಕಥೆ ಮತ್ತೊಮ್ಮೆ ನೆನಪಿಸಬೇಕು ಎಂಬ ಕಾರಣಕ್ಕೆ ‘ಪುಷ್ಪ’ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಲಾಗುತ್ತಿದೆ. ಮರು ಬಿಡುಗಡೆಯಿಂದ ಚಿತ್ರಕ್ಕೆ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಸೀಕ್ವೆಲ್​ಗಳು ಬಿಡುಗಡೆ ಆಗುವಾಗ ಪ್ರೀಕ್ವೆಲ್​ ಮರು ಬಿಡುಗಡೆ ಮಾಡುವ ಟ್ರೆಂಡ್ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ‘ಪುಷ್ಪ 2’ ಸಿನಿಮಾ ತಂಡ ಕೂಡ ಆ ಟ್ರೆಂಡ್ ಫಾಲೋ ಮಾಡುತ್ತಿದೆ. ಈ ಸಿನಿಮಾಗೆ ಸುಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಡಾಲಿ ಧನಂಜಯ್, ಫಹಾದ್ ಫಾಸಿಲ್ ಮುಂತಾದ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ಪ್ರೈವೇಟ್ ಜೆಟ್​ನಲ್ಲಿ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್​ ಪ್ರಯಾಣ

ಕೆಲವೇ ದಿನಗಳ ಹಿಂದೆ ‘ಪುಷ್ಪ 2’ ಸಿನಿಮಾದ ಟ್ರೇಲರ್​ ಬಿಡುಗಡೆ ಆಯಿತು. ಅದರಲ್ಲಿ ಚಿತ್ರದ ಶ್ರೀಮಂತಿಕೆ ಕಾಣಿಸಿದೆ. ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆಯು ನೂರಾರು ಕೋಟಿ ರೂಪಾಯಿ ಸುರಿದು ಈ ಸಿನಿಮಾವನ್ನು ನಿರ್ಮಿಸಿದೆ. ಈಗಾಗಲೇ ನಿರ್ಮಾಪಕರಿಗೆ ಭರ್ಜರಿ ಲಾಭ ಆಗಿದೆ. ಚಿತ್ರಮಂದಿರಗಳಿಂದಲೂ ದಾಖಲೆಯ ಕಲೆಕ್ಷನ್ ಆಗುವ ನಿರೀಕ್ಷೆ ಇದೆ. ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಅವರ ವೃತ್ತಿ ಜೀವನಕ್ಕೆ ಈ ಸಿನಿಮಾದಿಂದ ಭಾರಿ ಹೈಪ್ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.