ಸದ್ಯ, ಎಲ್ಲಾ ಸ್ಟಾರ್ ನಟರ ಗಮನ ಪ್ಯಾನ್ ಇಂಡಿಯಾ ಸಿನಿಮಾಗಳತ್ತ ಇದೆ. ತಮ್ಮ ಭಾಷೆಯಲ್ಲಿ ಸಿನಿಮಾ ಮಾಡುವುದರ ಜತೆಗೆ ಅದನ್ನು ಬೇರೆ ಭಾಷೆಗೂ ಡಬ್ ಮಾಡಿ ರಿಲೀಸ್ ಮಾಡುವ ಮೂಲಕ ಬಾಕ್ಸ್ ಆಫೀಸ್ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 1’ ಚಿತ್ರ 2018ರಲ್ಲಿ ದೇಶಾದ್ಯಂತ ಬಿಡುಗಡೆಯಾಗಿ ಧೂಳೆಬ್ಬಿಸಿತ್ತು. ಕನ್ನಡ, ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳಿನಲ್ಲಿ ಆ ಚಿತ್ರ ತೆರೆಕಂಡಿತ್ತು. ಈ ಸಿನಿಮಾಗೆ ಹಿಂದಿಯಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದೆ. ಗಲ್ಲಾ ಪೆಟ್ಟಿಗೆಯಲ್ಲಿ ಈ ಸಿನಿಮಾ ಕೂಡ ಒಳ್ಳೆಯ ಕಮಾಯಿ ಮಾಡುತ್ತಿದೆ. ಯಾವ ಸಿನಿಮಾ ಹೆಚ್ಚು ಗಳಿಕೆ ಮಾಡಲಿದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.
2018ರ ಡಿ.21ರಂದು ‘ಕೆಜಿಎಫ್: ಚಾಪ್ಟರ್ 1’ ಚಿತ್ರ ಬಿಡುಗಡೆ ಆಗಿತ್ತು. ಮೊದಲ ದಿನ ಹಿಂದಿ ಅವತರಣಿಕೆಯಿಂದ ಈ ಚಿತ್ರಕ್ಕೆ 2.10 ಕೋಟಿ ರೂ. ಗಳಿಕೆ ಆಗಿತ್ತು. ಎರಡು ತಿಂಗಳಿಗೆ ಈ ಚಿತ್ರ ಒಟ್ಟಾರೆ ಗಳಿಸಿದ್ದು 44 ಕೋಟಿ ರೂಪಾಯಿ. ಈಗ ಪುಷ್ಪ ಕೂಡ ಇದೇ ಹಾದಿಯಲ್ಲಿ ಸಾಗಿ ಬರುತ್ತಿದೆ. ಪುಷ್ಪ ಸಿನಿಮಾ ಡಿಸೆಂಬರ್ 17ರಂದು ತೆರೆಗೆ ಬಂದಿದೆ. ಈವರೆಗೆ ಸಿನಿಮಾ 39.95 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಈ ಮೂಲಕ ‘ಕೆಜಿಎಫ್’ ಸಿನಿಮಾ ಗಳಿಕೆಯನ್ನು ಸಮೀಪಿಸಿದೆ.
#Pushpa shows no signs of fatigue in mass pockets… #PushpaHindi emerges first choice of moviegoers in *those circuits* — much, much ahead of #83TheFilm and even #SpiderMan… [Week 2] Fri 2.31 cr, Sat 3.75 cr, Sun 4.25 cr, Mon 2.75 cr. Total: ₹ 39.95 cr. #India biz… HIT. pic.twitter.com/Sjhiz9dxAV
— taran adarsh (@taran_adarsh) December 28, 2021
‘ಪುಷ್ಪ’ ಸಿನಿಮಾದ ಬಿಸ್ನೆಸ್ ಇನ್ನೂ ಪೂರ್ಣಗೊಂಡಿಲ್ಲ. ಇನ್ನೂ ಕೆಲ ವಾರ ಈ ಸಿನಿಮಾ ಪ್ರದರ್ಶನ ಕಾಣಲಿದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಹೀಗಾಗಿ, ಚಿತ್ರ ಇನ್ನೊಂದಷ್ಟು ಗಳಿಕೆ ಮಾಡಬಹುದು. ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲಿರುವ ‘ಕೆಜಿಎಫ್ 2’ ಚಿತ್ರ ‘ಪುಷ್ಪ’ ದಾಖಲೆಯನ್ನು ಅನಾಯಾಸವಾಗಿ ಮುರಿದು ಹಾಕಲಿದೆ ಎನ್ನುವ ಅಭಿಪ್ರಾಯವನ್ನು ಬಾಕ್ಸ್ ಆಫೀಸ್ ಪಂಡಿತರು ಹೊರ ಹಾಕಿದ್ದಾರೆ. ಇದಕ್ಕಾಗಿ ಇನ್ನೂ ಕೆಲವು ತಿಂಗಳು ಕಾಯಲೇಬೇಕಿದೆ.
ಇದನ್ನೂ ಓದಿ: ‘ಪುಷ್ಪ’ ಹಾಡಿನಿಂದ ಸಮಂತಾ ಪ್ರಪಂಚದಲ್ಲೇ ನಂ.1; ಏನಿದು ಹೊಸ ದಾಖಲೆ?
‘ಪುಷ್ಪ’ ಚಿತ್ರಕ್ಕಾಗಿ ಶ್ರಮಿಸಿದವರಿಗೆ ನಿರ್ದೇಶಕ ಸುಕುಮಾರ್ ಕಡೆಯಿಂದ ಬಂಪರ್ ಗಿಫ್ಟ್
Published On - 1:40 pm, Wed, 29 December 21