ಮಹೇಶ್ ಬಾಬು ಸಿನಿಮಾದಲ್ಲಿ ಆರ್. ಮಾಧವನ್? ಹಿರಿದಾಗುತ್ತಿದೆ ಪಾತ್ರವರ್ಗ

ಬಹುನಿರೀಕ್ಷಿತ ‘ಎಸ್​ಎಸ್​ಎಂಬಿ 29’ ಸಿನಿಮಾದ ಪಾತ್ರವರ್ಗದ ಬಗ್ಗೆ ಇಂಟರೆಸ್ಟಿಂಗ್ ವಿಷಯಗಳು ಬಹಿರಂಗ ಆಗುತ್ತಿವೆ. ರಾಜಮೌಳಿ, ಮಹೇಶ್ ಬಾಬು ಕಾಂಬಿನೇಷನ್​ನ ಈ ಸಿನಿಮಾಗೆ ಸ್ಟಾರ್ ಕಲಾವಿದರು ಒಬ್ಬೊಬ್ಬರಾಗಿಯೇ ಸೇರ್ಪಡೆ ಆಗುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಬಳಿಕ ಆರ್. ಮಾಧವನ್ ಕೂಡ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ.

ಮಹೇಶ್ ಬಾಬು ಸಿನಿಮಾದಲ್ಲಿ ಆರ್. ಮಾಧವನ್? ಹಿರಿದಾಗುತ್ತಿದೆ ಪಾತ್ರವರ್ಗ
R Madhavan, Mahesh Babu

Updated on: Jun 09, 2025 | 9:03 PM

ನಟ ಮಹೇಶ್ ಬಾಬು ಅವರು ರಾಜಮೌಳಿ (SS Rajamouli) ಜೊತೆಗಿನ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾಗೆ ಶೂಟಿಂಗ್ ನಡೆಯುತ್ತಿದೆ. ಅದರ ಜೊತೆಗೆ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ಕೂಡ ಜಾಲ್ತಿಯಲ್ಲಿದೆ. ಪ್ರಮುಖ ಪಾತ್ರಗಳಿಗೆ ಸ್ಟಾರ್ ಕಲಾವಿದರನ್ನು ಆಯ್ಕೆ ಮಾಡಲಾಗುತ್ತಿದೆ. ಮಹೇಶ್ ಬಾಬು (Mahesh Babu) ಜೊತೆ ಪ್ರಿಯಾಂಕಾ ಚೋಪ್ರಾ ಅಭಿನಯಿಸುತ್ತಿದ್ದಾರೆ. ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಅವರು ಕೂಡ ನಟಿಸುತ್ತಿದ್ದಾರೆ. ಈಗ ಈ ಚಿತ್ರಕ್ಕೆ ಪ್ಯಾನ್ ಇಂಡಿಯಾ ನಟ ಆರ್. ಮಾಧವನ್ (R Madhavan) ಸಹ ಎಂಟ್ರಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ತಾತ್ಕಾಲಿಕವಾಗಿ ‘ಎಸ್​ಎಸ್​ಎಂಬಿ 29’ ಎಂದು ಕರೆಯಲಾಗುತ್ತಿದೆ. ಅಂದಾಜು 1 ಸಾವಿರ ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಕಲಾವಿದರಿಗೆ ಭಾರಿ ಸಂಭಾವನೆಯನ್ನು ನೀಡಲಾಗುತ್ತಿದೆ. ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿರುವ ಈ ಚಿತ್ರದ ಪಾತ್ರವರ್ಗದ ಬಗ್ಗೆ ಇಂಟರೆಸ್ಟಿಂಗ್ ವಿಷಯಗಳು ಕೇಳಿಬರುತ್ತಿವೆ.

ಆರ್. ಮಾಧವನ್ ಅವರು ‘ಎಸ್​ಎಸ್​ಎಂಬಿ 29’ ಸಿನಿಮಾದ ಪಾತ್ರವರ್ಗಕ್ಕೆ ಸೇರ್ಪಡೆ ಆಗಿರುವ ಬಗ್ಗೆ ಚಿತ್ರತಂಡದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ ಗಾಸಿಪ್ ಬಲವಾಗಿದೆ. ರಾಜಮೌಳಿ ಜೊತೆ ಆರ್. ಮಾಧವನ್ ಅವರು ಮೊದಲ ಬಾರಿಗೆ ಕೈ ಜೋಡಿಸಿರುವುದರಿಂದ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಾಗಿದೆ. ದೇಶ-ವಿದೇಶಗಳ ಹಲವು ಲೊಕೇಷನ್​ಗಳಲ್ಲಿ ಇದರ ಶೂಟಿಂಗ್ ನಡೆಯುತ್ತಿದೆ.

ಇದನ್ನೂ ಓದಿ
ಆರೋಪಗಳ ಬಳಿಕ ವಿಡಿಯೋ ಹಂಚಿಕೊಂಡ ಎಸ್​ಎಸ್ ರಾಜಮೌಳಿ, ಹೇಳಿದ್ದೇನು?
ರಾಜಮೌಳಿ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡ ಹಳೆ ಗೆಳೆಯ, ಕಾರಣ?
ರೆಡಿಯೋ ಜಾಕಿ ಹಿಂದೆ ಬಿದ್ದ ರಾಜಮೌಳಿ, ಪ್ರಪೋಸ್ ಮಾಡೇಬಿಟ್ಟ ಚೆಲುವೆ
ಮಹೇಶ್ ಬಾಬು-ರಾಜಮೌಳಿ ಸಿನಿಮಾಕ್ಕೆ ಹೆಸರು ಫಿಕ್ಸ್

ಹೈದರಾಬಾದ್​ನಲ್ಲಿ ಈ ಸಿನಿಮಾಗಾಗಿ ಬೃಹತ್ ಸೆಟ್ ನಿರ್ಮಾಣ ಆಗುತ್ತಿದೆ. ವಿಜಯೇಂದ್ರ ಪ್ರಸಾದ್ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈಗಾಗಲೇ ‘ಬಾಹುಬಲಿ’, ‘ಆರ್​ಆರ್​ಆರ್​’ ರೀತಿಯ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ರಾಜಮೌಳಿ ಅವರು ‘ಎಸ್​ಎಸ್​ಎಂಬಿ 29’ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಕಟ್ಟಿಕೊಡಲಿದ್ದಾರೆ ಎಂಬುದು ಫ್ಯಾನ್ಸ್ ನಂಬಿಕೆ.

ಇದನ್ನೂ ಓದಿ: 20 ಕೋಟಿ ರೂ. ಕೊಟ್ಟರೂ ಆ ಪಾತ್ರ ಮಾಡಲ್ಲ: ರಾಜಮೌಳಿಗೆ ನೋ ಎಂದ ನಾನಾ ಪಾಟೇಕರ್

ಈ ಮೊದಲು ಬಾಲಿವುಡ್ ನಟ ನಾನಾ ಪಾಟೇಕರ್ ಅವರಿಗೂ ‘ಎಸ್​ಎಸ್​ಎಂಬಿ 29’ ಸಿನಿಮಾದಲ್ಲಿ ಒಂದು ಪಾತ್ರ ನೀಡಲು ಆಲೋಚಿಸಲಾಗಿತ್ತು. ಅವರಿಗೆ 20 ಕೋಟಿ ರೂಪಾಯಿ ಸಂಭಾವನೆ ನೀಡಲು ಕೂಡ ನಿರ್ಮಾಪಕರು ತಯಾರಿದ್ದರು. ಆದರೆ ಆ ಪಾತ್ರ ತಮಗೆ ಇಷ್ಟ ಆಗಿಲ್ಲ ಎಂಬ ಕಾರಣಕ್ಕೆ ನಾನಾ ಪಾಟೇಕರ್ ಅವರು ರಿಜೆಕ್ಟ್ ಮಾಡಿದರು ಎಂಬ ಗಾಸಿಪ್ ಕೂಡ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.