ತುಳುನಾಡ ಸುಂದರಿ ಪೂಜಾ ಹೆಗ್ಡೆಗೆ ತೆಲುಗು ಹುಡುಗಿ ಅಂತ ಕರೆಸಿಕೊಂಡರೆ ಆಗುವ ಖುಷಿ, ಹೆಮ್ಮೆ ಅಷ್ಟಿಷ್ಟಲ್ಲ

ಪೂಜಾ ಹೆಗ್ಡೆ ಕೈಯಲ್ಲಿ ಅನೇಕ ಸಿನಿಮಾ ಆಫರ್​ಗಳಿವೆ. ಟಾಲಿವುಡ್​ನಲ್ಲಿ ಸಿಕ್ಕಿರುವ ಬ್ಯಾಕ್​ ಟು ಬ್ಯಾಕ್​ ಯಶಸ್ಸಿನ ಕಾರಣದಿಂದ ಅವರು ವೃತ್ತಿಜೀವನದಲ್ಲಿ ಅವರು ಉತ್ತುಂಗಕ್ಕೇರಿದ್ದಾರೆ. ಬೇರೆ ಭಾಷೆಗಳಲ್ಲೂ ಅವರಿಗೆ ಭಾರಿ ಬೇಡಿಕೆ ಇದೆ.

ತುಳುನಾಡ ಸುಂದರಿ ಪೂಜಾ ಹೆಗ್ಡೆಗೆ ತೆಲುಗು ಹುಡುಗಿ ಅಂತ ಕರೆಸಿಕೊಂಡರೆ ಆಗುವ ಖುಷಿ, ಹೆಮ್ಮೆ ಅಷ್ಟಿಷ್ಟಲ್ಲ
ಪೂಜಾ ಹೆಗ್ಡೆ

ಜನಪ್ರಿಯ ನಟಿ ಪೂಜಾ ಹೆಗ್ಡೆ ಅವರ ಪೋಷಕರು ಕನ್ನಡಿಗರು. ಕರಾವಳಿ ಮೂಲದ ಅವರ ಕುಟುಂಬದ ಮಾತೃಭಾಷೆ ತುಳು. ಅವರ ತಂದೆ ಮಂಜುನಾಥ್​ ಹೆಗ್ಡೆ ಮತ್ತು ತಾಯಿ ಲತಾ ಹೆಗ್ಡೆ. ಪೂಜೆ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಆದರೆ ಅವರನ್ನು ಯಾರಾದರೂ ‘ತೆಲುಗು ಹುಡುಗಿ’ ಅಂತ ಕರೆದರೆ ಅವರಿಗೆ ಆಗುವ ಖುಷಿ ಅಷ್ಟಿಷ್ಟಲ್ಲ. ತೆಲುಗು ಹುಡುಗಿ ಅಂತ ಕರೆಸಿಕೊಳ್ಳಲು ಪೂಜಾ ಹೆಗ್ಡೆ ಸಖತ್​ ಹೆಮ್ಮೆ ಪಡುತ್ತಾರೆ. ಈ ವಿಚಾರವನ್ನು ಅವರು ಇತ್ತೀಚೆಗೆ ಹೇಳಿಕೊಂಡಿದ್ದಾರೆ.

ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಪೂಜಾ ಹೆಗ್ಡೆ ಅವರಿಗೆ ಬಹಳ ಬೇಡಿಕೆ ಇದೆ. ಇತ್ತೀಚೆಗೆ ಅವರು ಅಖಿಲ್​ ಅಕ್ಕಿನೇನಿ ಜೊತೆ ನಟಿಸಿದ ‘ಮೋಸ್ಟ್​ ಎಲಿಜಬಲ್​ ಬ್ಯಾಚುಲರ್​’ ಚಿತ್ರ ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಆ ಖುಷಿಯಲ್ಲಿ ಕೆಲವು ಮಾತುಗಳನ್ನು ಪೂಜಾ ಹೆಗ್ಡೆ ಹಂಚಿಕೊಂಡಿದ್ದಾರೆ. ಟಾಲಿವುಡ್​ ಮೇಲೆ ತಮಗಿರುವ ಪ್ರೀತಿ, ಅಭಿಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ.

‘ಮುಂಬೈನಲ್ಲಿ ಎಲ್ಲರೂ ನನ್ನನ್ನು ತೆಲುಗು ಹುಡುಗಿ ಅಂತ ಗುರುತಿಸುತ್ತಾರೆ. ಆ ರೀತಿ ಕರೆದಾಗ ನನಗೆ ತುಂಬ ಖುಷಿ ಮತ್ತು ಹೆಮ್ಮೆ ಎನಿಸುತ್ತದೆ. ನಾನು ಇಂದು ಏನೇ ಗಳಿಸಿದ್ದರೂ ಅದಕ್ಕೆ ತೆಲುಗು ಚಿತ್ರರಂಗ ಕಾರಣ. ಭಾವನಾತ್ಮಕವಾಗಿ ನಾನು ಈ ಚಿತ್ರರಂಗದ ಜೊತೆ ಕನೆಕ್ಟ್​ ಆಗಿದ್ದೇನೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಸದ್ಯ ಪೂಜಾ ಹೆಗ್ಡೆ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಪ್ರಭಾಸ್​ ಜೊತೆ ನಟಿಸಿರುವ ರೊಮ್ಯಾಂಟಿಕ್​ ಚಿತ್ರ ‘ರಾಧೆ ಶ್ಯಾಮ್​’ 2022ರ ಜನವರಿ 14ರಂದು ತೆರೆಕಾಣಲಿದೆ. ಈ ಚಿತ್ರ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದೆ. ರೊಮ್ಯಾಂಟಿಕ್​ ಕಥೆ ಹೊಂದಿರುವ ಸಿನಿಮಾ ಇದಾಗಿದ್ದು, ಪ್ರಭಾಸ್​ ಲವರ್​ ಬಾಯ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಪೋಸ್ಟರ್​ ಹಾಗೂ ಟೀಸರ್​ಗಳು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿವೆ. ರಾಧಾ ಕೃಷ್ಣ ಕುಮಾರ್​ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಚಿರಂಜೀವಿ ನಟನೆಯ ‘ಆಚಾರ್ಯ’ ಚಿತ್ರದಲ್ಲೂ ಅವರು ಅಭಿನಯಿಸಿದ್ದಾರೆ. ‘ಬೀಸ್ಟ್​’ ಚಿತ್ರದಲ್ಲಿ ದಳಪತಿ ವಿಜಯ್​ ಜೊತೆ ನಟಿಸುವ ಅವಕಾಶ ಅವರಿಗೆ ಸಿಕ್ಕಿದೆ. ಬ್ಯಾಕ್​ ಟು ಬ್ಯಾಕ್​ ಯಶಸ್ಸಿನಿಂದ ಪೂಜಾ ವೃತ್ತಿಜೀವನದಲ್ಲಿ ಉತ್ತುಂಗಕ್ಕೆ ಏರಿದ್ದಾರೆ.

ಇದನ್ನೂ ಓದಿ:

ರಶ್ಮಿಕಾ ಮಂದಣ್ಣ ಹಿಂದಿಕ್ಕಿದ ಪೂಜಾ ಹೆಗ್ಡೆ; ಕೊಡಗಿನ ಬೆಡಗಿಗೆ ಕಡಿಮೆ ಆಯ್ತಾ ಬೇಡಿಕೆ?

Pooja Hegde Birthday: ಪೂಜಾ ಹೆಗ್ಡೆ ಮತ್ತು ಪ್ರಭಾಸ್​ ಕಿರಿಕ್​ ವದಂತಿಗೆ ಬಿತ್ತು ತೆರೆ; ನಟಿಗೆ ಸರ್​ಪ್ರೈಸ್​ ಉಡುಗೊರೆ ನೀಡಿದ ‘ರಾಧೆ ಶ್ಯಾಮ್’ ನಟ

Click on your DTH Provider to Add TV9 Kannada