Radhe Shyam First Half Review: ಹೇಗಿದೆ ಪ್ರಭಾಸ್​ ನಟನೆಯ ‘ರಾಧೆ ಶ್ಯಾಮ್​’ ಸಿನಿಮಾದ ಮೊದಲಾರ್ಧ?; ಇಲ್ಲಿದೆ ರಿಪೋರ್ಟ್​

| Updated By: ಮದನ್​ ಕುಮಾರ್​

Updated on: Mar 11, 2022 | 8:07 AM

Radhe Shyam First Half Review: ‘ರಾಧೆ ಶ್ಯಾಮ್​’ ಸಿನಿಮಾ ಹೇಗಿದೆ? ನಿರೀಕ್ಷೆ ಮಟ್ಟ ತಲುಪೋಕೆ ‘ರಾಧೆ ಶ್ಯಾಮ್​’ ಬಳಿ ಸಾಧ್ಯವಾಯಿತೇ? ಈ ಪ್ರಶ್ನೆಗೆ ಉತ್ತರ ಸಿಗೋಕೆ ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು. ಆದರೆ, ಈ ಚಿತ್ರದ ಮೊದಲಾರ್ಧ ಹೇಗಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

Radhe Shyam First Half Review: ಹೇಗಿದೆ ಪ್ರಭಾಸ್​ ನಟನೆಯ ‘ರಾಧೆ ಶ್ಯಾಮ್​’ ಸಿನಿಮಾದ ಮೊದಲಾರ್ಧ?; ಇಲ್ಲಿದೆ ರಿಪೋರ್ಟ್​
ರಾಧೆ ಶ್ಯಾಮ್
Follow us on

ಪ್ರಭಾಸ್ (Prabhas)​ ಹಾಗು ಪೂಜಾ ಹೆಗ್ಡೆ (Pooja Hegde) ನಟನೆಯ ‘ರಾಧೆ ಶ್ಯಾಮ್​ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಪ್ರಭಾಸ್​ ಅವರು ಹಲವು ವರ್ಷಗಳ ಬಳಿಕ ಭಿನ್ನ ಗೆಟಪ್​ ತೊಟ್ಟು ಬಂದಿರೋದು ಇದಕ್ಕೆ ಪ್ರಮುಖ ಕಾರಣವಾಗಿತ್ತು. ರಾಧ ಕೃಷ್ಣ ನಿರ್ದೇಶನದ ಈ ಸಿನಿಮಾ ಇಂದು (ಮಾರ್ಚ್​ 11) ವಿಶ್ವಾದ್ಯಂತ ರಿಲೀಸ್​ ಆಗಿದೆ. ‘ಬಾಹುಬಲಿ’, ‘ಸಾಹೋ’ ಸಿನಿಮಾಗೆ ಸಿಕ್ಕಷ್ಟು ಹೈಪ್​ ಈ ಚಿತ್ರಕ್ಕೆ ಸಿಕ್ಕಿಲ್ಲ. ಟ್ರೇಲರ್​ನಲ್ಲಿ ಆ್ಯಕ್ಷನ್​ ದೃಶ್ಯಗಳು ಕಾಣದೆ ಇರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಒಂದು ವರ್ಗದ ಅಭಿಮಾನಿಗಳು ಈ ಸಿನಿಮಾ ನೋಡೋಕೆ ಮುಗಿ ಬಿದ್ದಿದ್ದಾರೆ. ಬೆಂಗಳೂರಲ್ಲಿ ಮುಂಜಾನೆ 6 ಗಂಟೆಯಿಂದಲೇ ಶೋ ಶುರುವಾಗಿದೆ. ಹಾಗಾದರೆ, ಈ ಸಿನಿಮಾ ಹೇಗಿದೆ? ನಿರೀಕ್ಷೆ ಮಟ್ಟ ತಲುಪೋಕೆ ‘ರಾಧೆ ಶ್ಯಾಮ್​’ (Radhe Shyam)ಬಳಿ ಸಾಧ್ಯವಾಯಿತೇ? ಈ ಪ್ರಶ್ನೆಗೆ ಉತ್ತರ ಸಿಗೋಕೆ ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು. ಆದರೆ, ಈ ಚಿತ್ರದ ಮೊದಲಾರ್ಧ ಹೇಗಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆ ಬಗ್ಗೆ ರಿಪೋರ್ಟ್​ ಇಲ್ಲಿದೆ.

  • ಪ್ರತಿ ಸಿನಿಮಾದಲ್ಲಿ ಪ್ರಭಾಸ್​ ಅವರ ಎಂಟ್ರಿ ಮಾಸ್​ ಆಗಿರುತ್ತದೆ. ಆದರೆ ರಾಧೆ ಶ್ಯಾಮ್​ ಸಿನಿಮಾದಲ್ಲಿ ಹಾಗಿಲ್ಲ. ಭಿನ್ನವಾದ ರೀತಿಯಲ್ಲಿ ಅವರು ಎಂಟ್ರಿ ನೀಡಿದ್ದಾರೆ. ಸಿಂಪಲ್​ ಆಗಿ ಅವರು ಫ್ಯಾನ್ಸ್​ ಎದುರು ಬಂದಿದ್ದಾರೆ.
  • ಈ ಸಿನಿಮಾದ ಮೊದಲಾರ್ಧದಲ್ಲಿ ಯಾವುದೇ ಫೈಟಿಂಗ್ ದೃಶ್ಯಗಳಿಲ್ಲ. ಆ ಮೂಲಕ ಇದು ಪ್ರಭಾಸ್​ ವೃತ್ತಿಜೀವನದ ಡಿಫರೆಂಟ್​ ಸಿನಿಮಾ ಎನಿಸಿಕೊಂಡಿದೆ. ಮಾಸ್​ ಅಂಶಗಳನ್ನು ಬಯಸುವವರಿಗೆ ಬೇಸರ ಆಗಬಹುದು.
  • ‘ರಾಧೆ ಶ್ಯಾಮ್​’ ಸಿನಿಮಾದ ಫಸ್ಟ್​ ಹಾಫ್​ ತುಂಬ ಸ್ಲೋ ಆಗಿದೆ. ಕಥೆ ಪಿಕಪ್​ ಆಗಲು ತುಂಬ ಸಮಯ ಹಿಡಿಯುತ್ತದೆ. ಹಾಗಾಗಿ ಈ ಸಿನಿಮಾ ನೋಡಲು ಪ್ರೇಕ್ಷಕರಿಗೆ ತಾಳ್ಮೆ ಬೇಕು.
  • ಪೂಜಾ ಹೆಗ್ಡೆ ಮತ್ತು ಪ್ರಭಾಸ್​ ಅವರ ಕಾಂಬಿನೇಷನ್​ ಚೆನ್ನಾಗಿ ಮೂಡಿಬಂದಿದೆ. ಇಬ್ಬರೂ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಇವರಿಬ್ಬರ ಜೋಡಿ ಇಷ್ಟ ಆಗುತ್ತದೆ.
  • ಕೈ ನೋಡಿ ಭವಿಷ್ಯ ಹೇಳುವ ವ್ಯಕ್ತಿಯ ಪಾತ್ರದಲ್ಲಿ ಪ್ರಭಾಸ್​ ನಟಿಸಿದ್ದಾರೆ. ಭಾರತದಲ್ಲಿ ಫೇಮಸ್​ ಆದ ಬಳಿಕ ಕಥಾನಾಯಕ ವಿದೇಶಕ್ಕೆ ಹೋಗುತ್ತಾನೆ. ಅಲ್ಲಿ ಕಥೆ ತೆರೆದುಕೊಳ್ಳುತ್ತದೆ.
  • ಫಸ್ಟ್​ ಹಾಫ್​ನಲ್ಲಿ ಎರಡು ಸಾಂಗ್​ ಇದೆ. ಮೊದಲಾರ್ಧದ ಕಥೆ ತುಂಬ ಗಂಭೀರವಾಗಿ ಸಾಗುತ್ತದೆ. ಕಾಮಿಡಿ ದೃಶ್ಯಗಳಿಗೆ ಹೆಚ್ಚು ಜಾಗವಿಲ್ಲ. ಮಧ್ಯಂತರದ ವೇಳೆಗೆ ಒಂದು ಟ್ವಿಸ್ಟ್​ ಇದೆ.

ಇದನ್ನೂ ಓದಿ: ‘ಬಾಹುಬಲಿ’ ಚಿತ್ರದಿಂದ ಪ್ರಭಾಸ್​ಗೆ ಆದ ದೊಡ್ಡ ನಷ್ಟ ಏನು? ಅಂತೂ ಬಾಯ್ಬಿಟ್ಟ ಪ್ಯಾನ್​ ಇಂಡಿಯಾ ಸ್ಟಾರ್​

‘ರಾಧೆ ಶ್ಯಾಮ್​’ ಚಿತ್ರದ ವಿಲನ್​ ಯಾರು? ಹೊರಬಿತ್ತು ಅಸಲಿ ಕಹಾನಿ