‘ರಾಧೆ ಶ್ಯಾಮ್​’ ಚಿತ್ರದ ವಿಲನ್​ ಯಾರು? ಹೊರಬಿತ್ತು ಅಸಲಿ ಕಹಾನಿ

‘ರಾಧೆ ಶ್ಯಾಮ್​’ ಚಿತ್ರದ ವಿಲನ್​ ಯಾರು? ಹೊರಬಿತ್ತು ಅಸಲಿ ಕಹಾನಿ
ಪ್ರಭಾಸ್​-ಪೂಜಾ ಹೆಗ್ಡೆ

ಈಗಾಗಲೇ ‘ರಾಧೆ ಶ್ಯಾಮ್​’ ಸಿನಿಮಾ ಟ್ರೇಲರ್​ ಮೂಲಕ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾ ಮಾರ್ಚ್​ 11ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ತೆರೆಗೆ ಬರೋಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ರಿಲೀಸ್ ಆದ ಟ್ರೇಲರ್​ನಲ್ಲಿ ವಿಲನ್ ಪಾತ್ರದ ಬಗ್ಗೆ ಯಾವುದೇ ಹಿಂಟ್​ ನೀಡಿಲ್ಲ.

TV9kannada Web Team

| Edited By: Rajesh Duggumane

Mar 03, 2022 | 9:38 PM

ಸ್ಟಾರ್​ ನಟರ ಸಿನಿಮಾ ಎಂದರೆ ಅಲ್ಲಿ ವಿಲನ್​ ಪಾತ್ರಕ್ಕೂ ಪ್ರಾಮುಖ್ಯತೆ ಇರುತ್ತದೆ. ಓರ್ವ ಸ್ಟ್ರಾಂಗ್​ ವಿಲನ್ ಇದ್ದರೆ ಚಿತ್ರದ ತೂಕ ಹೆಚ್ಚುತ್ತದೆ. ಕಮರ್ಷಿಯಲ್​ ಚಿತ್ರಗಳಲ್ಲಿ ಕೇವಲ ಹೀರೋನ ಹೈಲೈಟ್​ ಮಾಡೋಕೆ ಹೋದರೆ ಸಿನಿಮಾ ಸಪ್ಪೆ ಎನಿಸಬಹುದು. ಪ್ರಭಾಸ್ (Prabhas)​ ಸಿನಿಮಾಗಳಲ್ಲಿ ವಿಲನ್​ ಆಯ್ಕೆ ಮಾಡಿಕೊಳ್ಳುವಾಗ ನಿರ್ದೇಶಕರು ಸಾಕಷ್ಟು ಆಲೋಚಿಸುತ್ತಾರೆ. ಈ ಮೊದಲು ತೆರೆಕಂಡ ಅವರ ನಟನೆಯ ‘ಬಾಹುಬಲಿ’ ಸಿನಿಮಾದಲ್ಲಿ (Bahubali Movie) ರಾನಾ ವೈರಿ ಪಾತ್ರ ಮಾಡಿದ್ದರು. ಈ ಪಾತ್ರಕ್ಕೆ ಸಾಕಷ್ಟು ತೂಕ ಇತ್ತು. ಈಗ ಅವರ ಮುಂದಿನ ಸಿನಿಮಾ ‘ರಾಧೆ ಶ್ಯಾಮ್​’ ಚಿತ್ರದಲ್ಲಿ (Radhe Shyam Movie) ವಿಲನ್ ಯಾರು ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಈಗಾಗಲೇ ‘ರಾಧೆ ಶ್ಯಾಮ್​’ ಸಿನಿಮಾ ಟ್ರೇಲರ್​ ಮೂಲಕ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾ ಮಾರ್ಚ್​ 11ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ತೆರೆಗೆ ಬರೋಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ರಿಲೀಸ್ ಆದ ಟ್ರೇಲರ್​ನಲ್ಲಿ ವಿಲನ್ ಪಾತ್ರದ ಬಗ್ಗೆ ಯಾವುದೇ ಹಿಂಟ್​ ನೀಡಿಲ್ಲ. ಸಿನಿಮಾದ ಕಥೆ ನೋಡಿದರೆ, ಈ ಚಿತ್ರದಲ್ಲಿ ವಿಲನ್​ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಯಾವುದೇ ವೈರತ್ವ ಇಲ್ಲದೆ, ‘ರಾಧೆ ಶ್ಯಾಮ್​’ ಸಾಗಲಿದೆ ಎನ್ನಲಾಗುತ್ತಿದೆ.

2011ರಲ್ಲಿ ತೆರೆಗೆ ಬಂದ ‘ಮಿಸ್ಟರ್​ ಪರ್ಫೆಕ್ಟ್​’ ಸಿನಿಮಾದಲ್ಲಿ ಪ್ರಭಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಯಾವುದೇ ವಿಲನ್​ ಇರಲಿಲ್ಲ. ಈಗ ಈ ಸಿನಿಮಾ ತೆರೆಕಂಡು 11 ವರ್ಷಗಳ ಬಳಿಕ ವಿಲನ್ ಇಲ್ಲದ ಸಿನಿಮಾದಲ್ಲಿ ಪ್ರಭಾಸ್​ ಆ್ಯಕ್ಟ್​ ಮಾಡಿದ್ದಾರೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ‘ರಾಧೆ ಶ್ಯಾಮ್​’ ಚಿತ್ರದಲ್ಲಿ ಪ್ರೀತಿ ಮತ್ತು ಹಣೆಬರಹದ ವಿಚಾರ ಹೈಲೈಟ್​ ಆಗಲಿದೆ. ಟ್ರೇಲರ್​ನಲ್ಲೂ ಈ ವಿಚಾರವನ್ನು ತೋರಿಸಲಾಗಿತ್ತು.

ಮದುವೆ ಬಗ್ಗೆ ಮಾತನಾಡಿದ ಪ್ರಭಾಸ್:

ಎಲ್ಲರೂ ಒಂದು ಹಂತಕ್ಕೆ ಸೆಟಲ್​ ಆದ ನಂತರ ಮದುವೆ ಆಗೋಕೆ ಇಷ್ಟಪಡುತ್ತಾರೆ. ಆದರೆ, ಪ್ರಭಾಸ್​ ವಿಚಾರದಲ್ಲಿ ಹಾಗಿಲ್ಲ. ಅವರ ಬಳಿ ಎಲ್ಲವೂ ಇದೆ. ಆದರೆ, ಮದುವೆ ಮಾತ್ರ ಆಗುವ ಗೋಜಿಗೆ ಹೋಗಿಲ್ಲ. ಈ ವಿಚಾರದಲ್ಲಿ ಅವರ ಅಭಿಮಾನಿಗಳಲ್ಲಿ ಕುತೂಹಲ ಇದೆ. ಈಗ ಏಕೆ ಮದುವೆ ಆಗಿಲ್ಲ ಎನ್ನುವ ಪ್ರಶ್ನೆಗೆ ಪ್ರಭಾಸ್ ಉತ್ತರ ನೀಡಿದ್ದಾರೆ. ‘ರಾಧೆ ಶ್ಯಾಮ್​’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ ಮುಂಬೈನಲ್ಲಿ ನಡೆದಿದೆ. ಈ ವೇಳೆ ಪ್ರಭಾಸ್​ ಕೂಡ ಇದ್ದರು. ಮಾಧ್ಯಮಗಳ ಜತೆ ಮಾತನಾಡುವಾಗ, ಸಿನಿಮಾ ವಿಚಾರದ ಜತೆಗೆ ಮದುವೆ ಬಗ್ಗೆಯೂ ಕೇಳಲಾಗಿದೆ. ಇದಕ್ಕೆ ಅವರು ನೇರವಾಗಿಯೇ ಉತ್ತರಿಸಿದ್ದಾರೆ. ‘ರಾಧೆ ಶ್ಯಾಮ್​’ ಸಿನಿಮಾದಲ್ಲಿ ಕೈ ನೋಡಿ ಭವಿಷ್ಯ ಹೇಳುವ ವ್ಯಕ್ತಿಯಾಗಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಇದೇ ಮಾದರಿಯಲ್ಲೇ ಅವರು ಈಗ ಉತ್ತರಿಸಿದ್ದಾರೆ. ‘ಪ್ರೀತಿ ವಿಚಾರದಲ್ಲಿ ನನ್ನ ಪ್ರಿಡಿಕ್ಷನ್​ಗಳು ಯಾವಾಗಲೂ ವಿಫಲವಾಗಿದೆ. ಹೀಗಾಗಿ ಈವರೆಗೆ ಮದುವೆ ಆಗಿಲ್ಲ’ ಎಂದಿದ್ದಾರೆ ಪ್ರಭಾಸ್.

ಈ ಮೊದಲು ಅನುಷ್ಕಾ ಶೆಟ್ಟಿ ಜತೆ ಪ್ರಭಾಸ್ ಹೆಸರು ತಳುಕು ಹಾಕಿಕೊಂಡಿತ್ತು. ಅನುಷ್ಕಾ ಕೂಡ ಈವರೆಗೆ ಮದುವೆ ಆಗಿಲ್ಲ. ‘ಬಾಹುಬಲಿ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದರು. ಆದರೆ, ಕೆಲ ಸಮಯದ ನಂತರ ಈ ವಿಚಾರದ ಬಗ್ಗೆ ಯಾವುದೇ ಅಪ್​ಡೇಟ್​ ಬರಲಿಲ್ಲ.

ಇದನ್ನೂ ಓದಿ:  ರಾಜಮೌಳಿ ಜತೆ ಪ್ರಭಾಸ್​ ಮತ್ತೊಂದು ಸಿನಿಮಾ; ಗುಡ್​ ನ್ಯೂಸ್​ ತಿಳಿಸಿದ ‘ರಾಧೆ ಶ್ಯಾಮ್​’ ಹೀರೋ

ರಾಜಮೌಳಿ ಜತೆ ಪ್ರಭಾಸ್​ ಮತ್ತೊಂದು ಸಿನಿಮಾ; ಗುಡ್​ ನ್ಯೂಸ್​ ತಿಳಿಸಿದ ‘ರಾಧೆ ಶ್ಯಾಮ್​’ ಹೀರೋ

Follow us on

Related Stories

Most Read Stories

Click on your DTH Provider to Add TV9 Kannada