
ಈ ಶುಕ್ರವಾರ (ಏಪ್ರಿಲ್ 28) ಎಂದಿನಂತೆ ಒಂದಷ್ಟು ಹೊಸ ಸಿನಿಮಾಗಳು (New Movies) ಬಿಡುಗಡೆ ಆಗಿವೆ. ಪ್ರತಿ ಸಿನಿಮಾ ಕೂಡ ಒಂದೊಂದು ಕಾರಣಕ್ಕೆ ಪ್ರಮುಖ ಎನಿಸಿಕೊಂಡಿವೆ. ಕನ್ನಡದಲ್ಲಿ ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ (Raghavendra Stores Movie) ತೆರೆಕಂಡಿದೆ. ಇದು ‘ಹೊಂಬಾಳೆ ಫಿಲ್ಮ್ಸ್’ ಮೂಲಕ ನಿರ್ಮಾಣವಾದ ಚಿತ್ರವಾದ್ದರಿಂದ ಪ್ರೇಕ್ಷಕರಿಗೆ ನಿರೀಕ್ಷೆ ಇದೆ. ಇನ್ನು, ಈ ಸಿನಿಮಾದ ಜೊತೆಯಲ್ಲಿ ವಿಜಯ್ ರಾಘವೇಂದ್ರ ನಟನೆಯ ‘ರಾಘು’ ಚಿತ್ರ ಕೂಡ ಪೈಪೋಟಿ ನೀಡುತ್ತಿದೆ. ಅತ್ತ, ಪರಭಾಷೆಯಲ್ಲೂ ಸ್ಟಾರ್ ಸಿನಿಮಾಗಳು ರಿಲೀಸ್ ಆಗಿವೆ. ಬಹುತಾರಾಗಣದ ‘ಪೊನ್ನಿಯಿನ್ ಸೆಲ್ವನ್ 2’ (Ponniyin Selvan 2) ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಿದೆ. ಅಖಿಲ್ ಅಕ್ಕಿನೇನಿ ಅಭಿನಯದ ‘ಏಜೆಂಟ್’ ಸಿನಿಮಾ ಕೂಡ ಚಿತ್ರಮಂದಿರಕ್ಕೆ ಬಂದಿದೆ. ಅಂತಿಮವಾಗಿ ಯಾರಿಗೆ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಈ ವಾರ ಬಿಡುಗಡೆ ಆಗಿರುವ ಈ ಎಲ್ಲ ಪ್ರಮುಖ ಸಿನಿಮಾಗಳ ಬಗ್ಗೆ ವಿವರ ಇಲ್ಲಿದೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ನಟ ಜಗ್ಗೇಶ್ ಅವರು ಇದರಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ಶ್ವೇತಾ ಶ್ರೀವಾತ್ಸವ್ ಕಾಣಿಸಿಕೊಂಡಿದ್ದಾರೆ. ದತ್ತಣ್ಣ, ಅಚ್ಯುತ್ ಕುಮಾರ್, ರವಿಶಂಕರ್ ಗೌಡ, ಮಿತ್ರ ಮುಂತಾದವರು ಸಹ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: Jaggesh: ತಮ್ಮದೇ ರಾಘವೇಂದ್ರ ಸ್ಟೋರ್ಸ್ ಸಿನಿಮಾ ವೀಕ್ಷಿಸಿ ವಿಮರ್ಶೆ ನೀಡಿದ ಜಗ್ಗೇಶ್
ನಟ ವಿಜಯ್ ರಾಘವೇಂದ್ರ ಅವರು ಪ್ರತಿ ಬಾರಿಯೂ ವಿಶೇಷವಾದ ಕಥಾಹಂದರ ಮತ್ತು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವಾರ ರಿಲೀಸ್ ಆಗುತ್ತಿರುವ ‘ರಾಘು’ ಸಿನಿಮಾ ಕೂಡ ಆ ಪಟ್ಟಿಗೆ ಸೇರ್ಪಡೆ. ಎಂ. ಆನಂದ್ ರಾಜ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇದೊಂದು ಪ್ರಯೋಗಾತ್ಮಕ ಸಿನಿಮಾ. ಇಡೀ ಚಿತ್ರದಲ್ಲಿ ಇರುವುದು ಒಂದೇ ಪಾತ್ರ. ಅಂಥ ಚಾಲೆಂಜಿಂಗ್ ಪಾತ್ರಕ್ಕೆ ವಿಜಯ್ ರಾಘವೇಂದ್ರ ಬಣ್ಣ ಹಚ್ಚಿದ್ದಾರೆ.
ಖ್ಯಾತ ನಿರ್ದೇಶಕ ಮಣಿರತ್ನಂ ಅವರು ಆ್ಯಕ್ಷನ್-ಕಟ್ ಹೇಳಿರುವ ‘ಪೊನ್ನಿಯಿನ್ ಸೆಲ್ವನ್ 1’ ಸಿನಿಮಾ ಕಳೆದ ವರ್ಷ ಹಿಟ್ ಆಗಿತ್ತು. ಈಗ ‘ಪೊನ್ನಿಯಿನ್ ಸೆಲ್ವನ್ 2’ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಐಶ್ವರ್ಯಾ ರೈ ಬಚ್ಚನ್, ವಿಕ್ರಮ್, ಜಯಂ ರವಿ, ಕಾರ್ತಿ, ತ್ರಿಷಾ ಕೃಷ್ಣನ್ ಮುಂತಾದವರು ಅಭಿನಯಿಸಿದ್ದಾರೆ. ಕನ್ನಡಕ್ಕೂ ಡಬ್ ಆಗಿ ಈ ಸಿನಿಮಾ ಬಿಡುಗಡೆ ಆಗಿದೆ.
ಇದನ್ನೂ ಓದಿ: Ponniyin Selvan: ಚನ್ನಪಟ್ಟಣದ ಬೊಂಬೆ ನೋಡಿ ಖುಷಿ ಪಟ್ಟ ನಟಿ ತ್ರಿಷಾ
ನಟ ಅಖಿಲ್ ಅಕ್ಕಿನೇನಿ ಪಾಲಿಗೆ ‘ಏಜೆಂಟ್’ ಸಿನಿಮಾ ಬಹಳ ಮುಖ್ಯ ಎನಿಸಿಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ಅವರು ಮಾಸ್ ಅವತಾರ ತಾಳಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ‘ಏಜೆಂಟ್’ ಸಿದ್ಧವಾಗಿದೆ. ಅಖಿಲ್ ಅವರು ಭರ್ಜರಿ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟ ದಿನೋ ಮೋರಿಯಾ ಅವರು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಅವರು ಟಾಲಿವುಡ್ಗೆ ಕಾಲಿಟ್ಟಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:25 pm, Thu, 27 April 23