AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್ ಜೊತೆಗೆ ಸಮಂತಾ ಹಾಲಿ ಪತಿ ಸಿನಿಮಾ

Raj and DK: ರಾಜ್ ನಿಧಿಮೋರು ಸಹ ಜನಪ್ರಿಯ ಚಿತ್ರಕತೆ ಬರಹಗಾರ ಮತ್ತು ನಿರ್ದೇಶಕ ಆಗಿದ್ದು, ಖುದ್ದು ಪತ್ನಿಯ ಸಿನಿಮಾ ಮೇಲೆ ಬಂಡವಾಳ ಹೂಡಿದ್ದಾರೆ. ರಾಜ್ ಅವರು ತಮ್ಮ ಗೆಳೆಯ ಡಿಕೆ ಜೊತೆ ಸೇರಿಕೊಂಡು (ರಾಜ್-ಡಿಕೆ) ಬಾಲಿವುಡ್​​ನಲ್ಲಿ ಈಗಾಗಲೇ ಕೆಲ ಸಿನಿಮಾ ಮತ್ತು ವೆಬ್ ಸರಣಿ ನಿರ್ದೇಶಿಸಿದ್ದಾರೆ. ಇದೀಗ ಬಾಲಿವುಡ್​ನ ದೊಡ್ಡ ಸ್ಟಾರ್ ನಟನ ಜೊತೆಗೆ ಕೆಲಸ ಮಾಡಲು ಮುಂದಾಗಿದ್ದಾರೆ.

ಸಲ್ಮಾನ್ ಖಾನ್ ಜೊತೆಗೆ ಸಮಂತಾ ಹಾಲಿ ಪತಿ ಸಿನಿಮಾ
Raj Nidhimoru Salman Khan
ಮಂಜುನಾಥ ಸಿ.
|

Updated on: Jun 16, 2026 | 12:44 PM

Share

ಸಮಂತಾ ಋತ್ ಪ್ರಭು (Samantha Ruth Prabhu) ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಇದೇ 19ನೇ ತಾರೀಖು ಬಿಡುಗಡೆ ಆಗಲಿದೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ಸಮಂತಾ, ಗೃಹಿಣಿಯಾಗಿ ಜೊತೆಗೆ ಸಖತ್ ಆಕ್ಷನ್ ಮಾಡುವ ಫೈಟರ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಸಿನಿಮಾ ಅನ್ನು ಸಿನಿಮಾ ಅನ್ನು ನಂದಿನಿ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಸಮಂತಾರ ಹಾಲಿ ಪತಿ ರಾಜ್ ನಿಧಿಮೋರು. ಅಸಲಿಗೆ ರಾಜ್ ನಿಧಿಮೋರು ಸಹ ಜನಪ್ರಿಯ ಚಿತ್ರಕತೆ ಬರಹಗಾರ ಮತ್ತು ನಿರ್ದೇಶಕ ಆಗಿದ್ದು, ಖುದ್ದು ಪತ್ನಿಯ ಸಿನಿಮಾ ಮೇಲೆ ಬಂಡವಾಳ ಹೂಡಿದ್ದಾರೆ. ರಾಜ್ ಅವರು ತಮ್ಮ ಗೆಳೆಯ ಡಿಕೆ ಜೊತೆ ಸೇರಿಕೊಂಡು (ರಾಜ್-ಡಿಕೆ) ಬಾಲಿವುಡ್​​ನಲ್ಲಿ ಈಗಾಗಲೇ ಕೆಲ ಸಿನಿಮಾ ಮತ್ತು ವೆಬ್ ಸರಣಿ ನಿರ್ದೇಶಿಸಿದ್ದಾರೆ. ಇದೀಗ ಬಾಲಿವುಡ್​ನ ದೊಡ್ಡ ಸ್ಟಾರ್ ನಟನ ಜೊತೆಗೆ ಕೆಲಸ ಮಾಡಲು ಮುಂದಾಗಿದ್ದಾರೆ.

‘ಮಾ ಇಂಟಿ ಬಂಗಾರಂ’ ಸಿನಿಮಾದ ಪ್ರಚಾರ ಕಾರ್ಯಕ್ರಮದ ವೇಳೆ ರಾಜ್ ನಿಧಿಮೋರು ಅವರು ಈ ವಿಷಯ ಮಾತನಾಡಿದ್ದು, ಸಲ್ಮಾನ್ ಖಾನ್ ಹೆಸರು ನೇರವಾಗಿ ಹೇಳದೇ ಇದ್ದರೂ, ಪರೋಕ್ಷವಾಗಿ ತಾವು ಸಲ್ಮಾನ್ ಖಾನ್ ಜೊತೆಗೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ರಾಜ್ ಮತ್ತು ಡಿಕೆ ಒಟ್ಟಾಗಿ ಈ ಸಿನಿಮಾ ನಿರ್ದೇಶಿಸಲಿದ್ದಾರೆ.

ರಾಜ್ ಮತ್ತು ಡಿ.ಕೆ ಕಳೆದ ಕೆಲವು ವರ್ಷಗಳಿಂದ ‘ದಿ ಫ್ಯಾಮಿಲಿ ಮ್ಯಾನ್’, ‘ಫರ್ಜಿ’, ‘ಗನ್ಸ್ ಅಂಡ್ ಗುಲಾಬ್ಸ್’ ಮತ್ತು ‘ಸಿಟಾಡೆಲ್: ಹನಿ ಬನ್ನಿ’ ಅಂತಹ ಬ್ಲಾಕ್‌ಬಸ್ಟರ್ ಸರಣಿಗಳೊಂದಿಗೆ ಡಿಜಿಟಲ್ ಲೋಕದಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಆದರೆ ಈಗ ಮತ್ತೆ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಅದೂ ಈ ಬಾರಿ ಅವರು ಭಾರಿ ಬಜೆಟ್​ನ ಸೂಪರ್ ಹೀರೋ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದು, ಸಹಜವಾಗಿಯೇ ಸಿನಿಮಾ ಪ್ರೇಮಿಗಳಲ್ಲಿ ಇದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ಒಬ್ಬೊಬ್ರಿಗೆ ಕೊಡ್ತೀನಿ ನೋಡಿ; ಸಮಂತಾ ಎಚ್ಚರಿಕೆ ನೀಡಿದ್ದು ಯಾರಿಗೆ?

ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಾಜ್ ನಿದಿಮೋರು, ‘ಒಬ್ಬ ದೊಡ್ಡ ನಟನೊಂದಿಗೆ ತಾವು ಕೈಜೋಡಿಸುತ್ತಿರುವುದಾಗಿ ಹೇಳಿದ್ದಾರೆ. ಒಂದು ಹಾಲಿವುಡ್ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಪ್ರಾರಂಭವಾಗಿವೆ, ಮತ್ತು ಅದು ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ಮತ್ತೊಂದು ಸರಣಿಯು ಅಭಿವೃದ್ಧಿ ಹಂತದಲ್ಲಿದೆ. ನಮ್ಮ ಹಿಂದಿ ಚಲನಚಿತ್ರದ ನಿರ್ಮಾಣವು ಶೀಘ್ರದಲ್ಲೇ ಪ್ರಾರಂಭವಾಗಲಿದೆ’ ಎಂದು ತಿಳಿಸಿದರು.

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರೊಂದಿಗೆ ರಾಜ್ ಮತ್ತು ಡಿಕೆ ಸಿನಿಮಾ ಮಾಡುವುದಾಗಿ ಈ ಹಿಂದೆಯೇ ಸುದ್ದಿಗಳು ಹರಿದಾಡಿದ್ದವು. ಪ್ರಸ್ತುತ ಪ್ರಿ-ವಿಶುವಲೈಸೇಶನ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡ ನಂತರ, ಅಕ್ಟೋಬರ್ 2026 ರ ವೇಳೆಗೆ ಚಿತ್ರೀಕರಣವನ್ನು ಪ್ರಾರಂಭಿಸಲಾಗುವುದಂತೆ. ಈ ಸಿನಿಮಾ ಮೂಲಕ ಸಲ್ಮಾನ್ ಖಾನ್ ಅವರು ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಸೂಪರ್ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಕ್ಕೆ ರಾಜ್ ಅವರ ಪತ್ನಿ ಹಾಗೂ ನಟಿ ಸಮಂತಾ ರುತ್ ಪ್ರಭು ಅವರು ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ