ರಜತ್-ವಿನಯ್ ಅಂದರ್ ಆಗಿದ್ದಕ್ಕೆ ಈ ವಾರದ ‘ಬಾಯ್ಸ್ vs ಗರ್ಲ್ಸ್’ ಶೋ ಕ್ಯಾನ್ಸಲ್?

| Updated By: ರಾಜೇಶ್ ದುಗ್ಗುಮನೆ

Updated on: Mar 29, 2025 | 9:03 AM

ರಜತ್ ಕಿಶನ್ ಮತ್ತು ವಿನಯ್ ಗೌಡ ಅವರು ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನಂತರ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದಾರೆ. ಅವರಿಗೆ ಜಾಮೀನು ಸಿಕ್ಕಿದ್ದರೂ, ಅವರ ಅನುಪಸ್ಥಿತಿಯಿಂದ ಶೋ ಮೇಲೆ ಪರಿಣಾಮ ಬೀರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ವಾರದ ಶೋ ರದ್ದಾಗುವ ಸಾಧ್ಯತೆಯಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ರಜತ್-ವಿನಯ್ ಅಂದರ್ ಆಗಿದ್ದಕ್ಕೆ ಈ ವಾರದ ‘ಬಾಯ್ಸ್ vs ಗರ್ಲ್ಸ್’ ಶೋ ಕ್ಯಾನ್ಸಲ್?
ವಿನಯ್-ರಜತ್
Follow us on

ರಜತ್ ಕಿಶನ್ ಹಾಗೂ ವಿನಯ್ ಗೌಡ (Vinay Gowda) ಅವರು ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಅಂದರ್ ಆಗಿದ್ದಾರೆ. ಅವರಿಗೆ ಕೋರ್ಟ್​ನಿಂದ ಜಾಮೀನು ಕೂಡ ಸಿಕ್ಕಿದ್ದು ಇಂದು (ಮಾರ್ಚ್​ 29) ಬಿಡುಗಡೆ ಹೊಂದಲಿದ್ದಾರೆ. ರಜತ್ ಹಾಗೂ ವಿನಯ್ ‘ಬಾಯ್ಸ್ vs ಗರ್ಲ್ಸ್’ (Boys vs Girls) ಶೋನಲ್ಲಿ ಸ್ಪರ್ಧಿಸಿದ್ದಾರೆ. ಅವರು ಜೈಲಿನಲ್ಲಿ ಇರೋ ಕಾರಣದಿಂದ ಈ ಶೋನಲ್ಲಿ ಅವರು ಭಾಗವಹಿಸಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಈ ವಾರದ ಶೋ ರದ್ದಾಯಿತೇ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

‘ಬಾಯ್ಸ್ vs ಗರ್ಲ್ಸ್’ ಶೋ ಕಲರ್ಸ್ ಕನ್ನಡದಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರ ಕಾಣುತ್ತಿತ್ತು. ಈ ಶೋ ಮುಗಿದ ಬಳಿಕ ವಿನಯ್ ಹಾಗೂ ರಜತ್ ಅವರು ಶೋಗೆ ಬಳಸಿದ ಮಚ್ಚನ್ನು ಹಿಡಿದುಕೊಂಡು ರೀಲ್ಸ್ ಮಾಡಿದ್ದರು. ರಸ್ತೆಯ ಮೇಲೆ ಅದನ್ನು ಝಳಪಿಸುತ್ತಾ ಮಿಂಚಿದ್ದರು. ಆದರೆ, ಇದುವೇ ಅವರಿಗೆ ಮುಳುವಾಗಿದೆ. ಅವರು ಕೆಲವು ದಿನ ಅಂದರ್ ಆಗಿದ್ದಾರೆ. ಈಗ ಕೋರ್ಟ್​ನಿಂದ ಜಾಮೀನು ಸಿಕ್ಕಿದ್ದು ಅವರು ನಿರಾಳರಾಗಿದ್ದಾರೆ. ಅವರಿಲ್ಲದೆ, ‘ಬಾಯ್ಸ್ vs ಗರ್ಲ್ಸ್​’ ಶೋ ನಡೆದಿಲ್ಲವೇ ಎನ್ನುವ ಪ್ರಶ್ನೆ ಮೂಡಿದೆ.

ವಿನಯ್ ಅವರು ಬಾಯ್ಸ್ ತಂಡದ ಕ್ಯಾಪ್ಟನ್ ಆಗಿದ್ದಾರೆ. ಅದೇ ರೀತಿ ರಜತ್ ಕೂಡ ಪ್ರಮುಖ ಸ್ಪರ್ಧಿಯೇ. ಇಬ್ಬರೂ ಇಲ್ಲದೆ ಹೋದರೆ ತಂಡಕ್ಕೆ ದೊಡ್ಡ ಬಲವೇ ಇಲ್ಲದಂತೆ ಆಗುತ್ತದೆ. ಈ ಕಾರಣದಿಂದ ಈ ವಾರದ ಸಂಚಿಕೆಯನ್ನು ರದ್ದು ಮಾಡಲಾಯಿತೇ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಈ ಬಗ್ಗೆ ವಾಹಿನಿ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ.

ಇದನ್ನೂ ಓದಿ
ಸೌಂದರ್ಯಾ ಜಾತಕದಲ್ಲಿ ಏನಿತ್ತು? ಸಾವಿನ ವಿಚಾರ ತಂದೆಗೆ ಮೊದಲೇ ತಿಳಿದಿತ್ತು
‘ನಿಮಗಿಂತ ಮೂಗೇ ಮೊದಲು ಬರುತ್ತೆ’; ಪೂಜಾ ಗಾಂಧಿಗೆ ಹೇಳಿದ್ದ ಯೋಗರಾಜ್ ಭಟ್
ಉತ್ತಮ TRP ಮಧ್ಯೆಯೂ ಕೊನೆಯಾಗಲಿದೆ ಕಲರ್ಸ್​ನ ಈ ಸೂಪರ್ ಹಿಟ್ ಧಾರಾವಾಹಿ?
ಎಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ, ದೇವರಿಗೆ ಬಿಟ್ಟಿದ್ದು: ಸಲ್ಮಾನ್ ಖಾನ್

ಇದನ್ನೂ ಓದಿ: ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ? ವಿವರಿಸಿದ ಲಾಯರ್

ಹಾಗಾದರೆ ಆ ಸಮಯದಲ್ಲಿ ಏನನ್ನು ಪ್ರಸಾರ ಮಾಡಲಾಗುತ್ತದೆ? ಅದಕ್ಕೂ ಉತ್ತರ ಇದೆ. ‘ಮಜಾ ಟಾಕೀಸ್’ ಇಂದು (ಮಾರ್ಚ್ 29) ಮಹಾ ಸಂಚಿಕೆ ಪ್ರಸಾರ ಕಾಣಲಿದೆ. ಅಂದರೆ ಎರಡು ಎಪಿಸೋಡ್​​ಗಳು ಒಂದೇ ದಿನ ಪ್ರಸಾರ ಆಗಲಿವೆ. ಭಾನುವಾರ  (ಮಾರ್ಚ್ 30) ಯುಗಾದಿ ಪ್ರಯುಕ್ತ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ‘ಭೀಮ’ ಸಿನಿಮಾ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.