AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನೀಕಾಂತ್ ಸಿನಿಮಾ: ಮೂರನೇ ಬಾರಿ ನಿರ್ದೇಶಕ ಬದಲು

Rajinikanth next movie: ರಜನೀಕಾಂತ್ ಪ್ರಸ್ತುತ ‘ಜೈಲರ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಕಮಲ್ ಹಾಸನ್ ಜೊತೆಗೆ ಹೊಸದೊಂದು ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಅವರ 173ನೇ ಸಿನಿಮಾ ಸೆಟ್ಟೇರಲಿಕ್ಕಿದೆ. ಈಗ ಸಮಸ್ಯೆ ಆಗಿರುವುದು ಇದೇ ಸಿನಿಮಾಕ್ಕೆ. ಈಗಾಗಲೇ ಎರಡು ನಿರ್ದೇಶಕರನ್ನು ಬದಲಾಯಿಸಲಾಗಿತ್ತು. ಈಗ ಮೂರನೇ ನಿರ್ದೇಶಕರೂ ಸಹ ಸಿನಿಮಾದಿಂದ ಹೊರನಡೆದಿದ್ದಾರೆ.

ರಜನೀಕಾಂತ್ ಸಿನಿಮಾ: ಮೂರನೇ ಬಾರಿ ನಿರ್ದೇಶಕ ಬದಲು
Rajinikanth
ಮಂಜುನಾಥ ಸಿ.
|

Updated on: Apr 14, 2026 | 12:28 PM

Share

ರಜನೀಕಾಂತ್ (Rajinikanth) ಸಿನಿಮಾ ನಿರ್ಮಿಸಲು, ನಿರ್ದೇಶಿಸಲು ಜನ ಸಾಲು ಗಟ್ಟಿ ನಿಂತಿದ್ದಾರೆ. ಆದರೆ ಯಾಕೋ ರಜನೀಕಾಂತ್ ಅವರ ಹೊಸ ಸಿನಿಮಾಕ್ಕೆ ನಿರ್ದೇಶಕರುಗಳೇ ಸೆಟ್ ಆಗುತ್ತಿಲ್ಲ. ರಜನೀಕಾಂತ್ ಪ್ರಸ್ತುತ ‘ಜೈಲರ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಕಮಲ್ ಹಾಸನ್ ಜೊತೆಗೆ ಹೊಸದೊಂದು ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಅವರ 173ನೇ ಸಿನಿಮಾ ಸೆಟ್ಟೇರಲಿಕ್ಕಿದೆ. ಈಗ ಸಮಸ್ಯೆ ಆಗಿರುವುದು ಇದೇ ಸಿನಿಮಾಕ್ಕೆ. ಈಗಾಗಲೇ ಎರಡು ನಿರ್ದೇಶಕರನ್ನು ಬದಲಾಯಿಸಲಾಗಿತ್ತು. ಈಗ ಮೂರನೇ ನಿರ್ದೇಶಕರೂ ಸಹ ಸಿನಿಮಾದಿಂದ ಹೊರನಡೆದಿದ್ದಾರೆ.

ರಜನೀಕಾಂತ್ ಅವರ 173ನೇ ಸಿನಿಮಾವನ್ನು ಕಮಲ್ ಹಾಸನ್ ನಿರ್ಮಾಣ ಮಾಡಲಿದ್ದು, ಸಿನಿಮಾಕ್ಕೆ ಮೊದಲು ಸುಂದರ್ ಸಿ ಅವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಖುದ್ದು ಸುಂದರ್ ಅವರು ಸಿನಿಮಾದಿಂದ ಹೊರನಡೆದರು. ಬಳಿಕ ಇದೇ ಸಿನಿಮಾವನ್ನು ‘ಡಾನ್’ ಸಿನಿಮಾ ನಿರ್ದೇಶಿಸಿದ್ದ ಸಿಬಿಲ್ ಚಕ್ರವರ್ತಿ ನಿರ್ದೇಶಿಸಲಿದ್ದಾರೆ ಎನ್ನಲಾಯ್ತು. ಸಿನಿಮಾದ ಪ್ರೀ ಪ್ರೊಡಕ್ಷನ್ ಸಹ ಶುರು ಆಗಿತ್ತು. ಆದರೆ ಅವರೂ ಸಹ ಸಿನಿಮಾದಿಂದ ಹೊರ ನಡೆದಿದ್ದಾರೆ.

ಸಿಬಿಲ್ ಚಕ್ರವರ್ತಿ, ಚಿತ್ರತಂಡದ ಜೊತೆಗೆ ಭಿನ್ನಾಭಿಪ್ರಾಯದ ಕಾರಣದಿಂದ ಸಿನಿಮಾದಿಂದ ಹೊರ ನಡೆದಿದ್ದು, ಅವರ ಎಕ್ಸಿಟ್ ಬಳಿಕ ಸಿನಿಮಾಕ್ಕೆ ಅಶ್ವತ್ ಮಾರಿಮುತ್ತು ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ. ಪ್ರದೀಪ್ ರಂಗನಾಥ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ‘ಡ್ರ್ಯಾಗನ್’ ನಿರ್ದೇಶಿಸಿದ್ದ ಅಶ್ವತ್ಥ್ ಅವರನ್ನು ಕಮಲ್ ಹಾಸನ್ ಅವರು ಈ ಸಿನಿಮಾಕ್ಕೆ ಆಯ್ಕೆ ಮಾಡಿದ್ದರು. ಆದರೆ ಈಗ ಹರಿದಾಡುತ್ತಿರುವ ಸುದ್ದಿಯಂತೆ ಅಶ್ವತ್ಥ್ ಅವರೂ ಸಹ ಸಿನಿಮಾದಿಂದ ಹೊರ ನಡೆದಿದ್ದಾರೆ.

ಇದನ್ನೂ ಓದಿ:ರಜನೀಕಾಂತ್ ಋಣ ತೀರಿಸಿದ ಶಾರುಖ್ ಖಾನ್, ಎಸ್​​ಆರ್​​ಕೆ ಜೊತೆ ಎಸ್​​ಆರ್​​ಕೆ

ಅಶ್ವತ್ಥ್ ಅವರು ತೆಲುಗು ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದು, ಆ ಸಿನಿಮಾದ ನಿರ್ದೇಶನದ ಬಳಿಕವಷ್ಟೆ ರಜನೀಕಾಂತ್ ಮತ್ತು ಕಮಲ್ ಹಾಸನ್ ಅವರ ಸಿನಿಮಾ ನಿರ್ದೇಶಿಸಬೇಕಿದೆ. ಆದರೆ ನಿರ್ಮಾಣ ಸಂಸ್ಥೆ ಈಗಲೇ ಸಿನಿಮಾ ಶುರು ಮಾಡುವ ಉಮೇದಿನಲ್ಲಿರುವ ಕಾರಣ ಅಶ್ವತ್ಥ್ ಸಹ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿಗೆ ಮೂವರು ನಿರ್ದೇಶಕರು ರಜನೀಕಾಂತ್ ಅವರ ಸಿನಿಮಾದಿಂದ ಹೊರನಡೆದಂತಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us