Rajinikanth Birthday: 72ನೇ ವರ್ಷದ ಬರ್ತ್​ಡೇ ಸಂಭ್ರಮದಲ್ಲಿ ಸೂಪರ್​ ಸ್ಟಾರ್​ ರಜನಿಕಾಂತ್​; ಫ್ಯಾನ್ಸ್​ಗೆ ‘ಬಾಬಾ’ ಗಿಫ್ಟ್​

| Updated By: ಮದನ್​ ಕುಮಾರ್​

Updated on: Dec 12, 2022 | 7:37 AM

Happy Birthday Rajinikanth: ಇಂದಿಗೂ ರಜನಿಕಾಂತ್​ ಅವರು ‘ಸೂಪರ್​ ಸ್ಟಾರ್​’ ಆಗಿ ತಮ್ಮ ಚಾರ್ಮ್​ ಉಳಿಸಿಕೊಂಡಿದ್ದಾರೆ. 72ನೇ ವಯಸ್ಸಿನಲ್ಲೂ ​ಅವರ ಉತ್ಸಾಹ ತಗ್ಗಿಲ್ಲ.

Rajinikanth Birthday: 72ನೇ ವರ್ಷದ ಬರ್ತ್​ಡೇ ಸಂಭ್ರಮದಲ್ಲಿ ಸೂಪರ್​ ಸ್ಟಾರ್​ ರಜನಿಕಾಂತ್​; ಫ್ಯಾನ್ಸ್​ಗೆ ‘ಬಾಬಾ’ ಗಿಫ್ಟ್​
ರಜನಿಕಾಂತ್
Follow us on

ಖ್ಯಾತ ನಟ ರಜನಿಕಾಂತ್​ (Rajinikanth) ಅವರು ಇಂದು (ಡಿ.12) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 72ನೇ ವರ್ಷದ ಬರ್ತ್​ಡೇ ಪ್ರಯುಕ್ತ ಎಲ್ಲರೂ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಅಭಿಮಾನಿಗಳಿಗೆ ಈ ದಿನ ನಿಜಕ್ಕೂ ಹಬ್ಬವೇ ಸರಿ. ತಮ್ಮ ಹೆಚ್ಚಿನ ನಟನ ಜನ್ಮದಿನವನ್ನು (Rajinikanth Birthday) ಫ್ಯಾನ್ಸ್​ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಅವರ ಸಂಭ್ರಮವನ್ನು ಇಮ್ಮಡಿಗೊಳಿಸಲು ರಜನಿಕಾಂತ್​ ನಟನೆಯ ‘ಬಾಬಾ’ ಸಿನಿಮಾ (Baba Movie) ಮರು ಬಿಡುಗಡೆ ಆಗಿದೆ. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುವ ಮೂಲಕ ತಲೈವಾ ಅಭಿಮಾನಿಗಳು ಎಂಜಾಯ್​ ಮಾಡುತ್ತಿದ್ದಾರೆ. ಆಪ್ತರು ಮತ್ತು ಸೆಲೆಬ್ರಿಟಿಗಳು ಕೂಡ ರಜನಿಕಾಂತ್​ ಬರ್ತ್​ಡೇಗೆ ಶುಭ ಕೋರುತ್ತಿದ್ದಾರೆ. ಅವರ ಮುಂಬರುವ ಸಿನಿಮಾಗಳು ಸೂಪರ್​ ಹಿಟ್​ ಆಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

ಭಾರತೀಯ ಚಿತ್ರರಂಗಕ್ಕೆ ರಜನಿಕಾಂತ್ ನೀಡಿದ ಕೊಡುಗೆ ಅಪಾರ. ಕಳೆದ 5 ದಶಕಗಳಿಂದಲೂ ಅವರು ಜನರನ್ನು ರಂಜಿಸುತ್ತಾ ಬಂದಿದ್ದಾರೆ. 72ನೇ ವಯಸ್ಸಿನಲ್ಲೂ ರಜನಿಕಾಂತ್​ ಅವರ ಉತ್ಸಾಹ ತಗ್ಗಿಲ್ಲ. ಇಂದಿಗೂ ‘ಸೂಪರ್​ ಸ್ಟಾರ್​’ ಆಗಿ ತಮ್ಮ ಚಾರ್ಮ್​ ಉಳಿಸಿಕೊಂಡಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ‘ಜೈಲರ್​’, ‘ಲಾಲ್​ ಸಲಾಂ’ ಮುಂತಾದ ಸಿನಿಮಾಗಳು ರಜನಿಕಾಂತ್​ ಕೈಯಲ್ಲಿವೆ.

ಬರ್ತ್​ಡೇ ಪ್ರಯುಕ್ತ ‘ಬಾಬಾ’ ಮರುಬಿಡುಗಡೆ:

ಇದನ್ನೂ ಓದಿ
Jailer: ಶಿವಣ್ಣ-ರಜನಿಕಾಂತ್​ ಸಿನಿಮಾಗೆ ‘ಜೈಲರ್​’ ಶೀರ್ಷಿಕೆ: ಅಭಿಮಾನಿಗಳಲ್ಲಿ ಕ್ರೇಜ್​ ಹೆಚ್ಚಿಸಿದ ಪೋಸ್ಟರ್​
ರಜನಿಕಾಂತ್​ಗೆ ನಾಯಕಿ ಆದ ಐಶ್ವರ್ಯಾ ರೈ; ಹೊಸ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ
ಡಿವೋರ್ಸ್​ ಬಳಿಕ ರಜನಿ ಪುತ್ರಿಗೆ ಮತ್ತೆ ಕಂಟಕ; ಆಸ್ಪತ್ರೆಗೆ ದಾಖಲಾದ ಐಶ್ವರ್ಯಾ ರಜನಿಕಾಂತ್​
ಕೋಟ್ಯಂತರ ರೂ. ಸಂಭಾವನೆ ಪಡೆಯುವ ರಜನಿಕಾಂತ್​ ಎಷ್ಟು ಆಸ್ತಿ ಹೊಂದಿದ್ದಾರೆ? ಇಲ್ಲಿದೆ ವಿವರ..

ಸ್ಟಾರ್​ ನಟರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾಗಳು ರಿಲೀಸ್​ ಆಗುವುದು ಸಹಜ. ಆದರೆ ರಜನಿಕಾಂತ್​ ಅವರ ಹಳೇ ಸಿನಿಮಾ ‘ಬಾಬಾ’ ಇಂದು ಮರು ಬಿಡುಗಡೆ ಆಗಿದೆ. ಹೊಸ ತಂತ್ರಜ್ಞಾನ ಅಳವಡಿಸಿ, ಹೊಸ ರೂಪದಲ್ಲಿ ಈ ಚಿತ್ರವನ್ನು ತೆರೆಗೆ ತರಲಾಗಿದೆ. ಈ ಸಿನಿಮಾಗಾಗಿ ರಜನಿಕಾಂತ್​ ಅವರು ಹೊಸದಾಗಿ ಡಬ್ಬಿಂಗ್​ ಕೂಡ ಮಾಡಿದ್ದಾರೆ. ಈ ಚತ್ರದಲ್ಲಿ ಅವರಿಗೆ ಎರಡು ಶೇಡ್​ನ ಪಾತ್ರ ಇದೆ.

ಇದನ್ನೂ ಓದಿ: Puneeth Rajkumar: ರಜನಿಕಾಂತ್​ ಮೊದಲ ಸಲ ಪುನೀತ್​ ಅವರನ್ನು ನೋಡಿದ್ದು ಎಲ್ಲಿ? ದೇವರ ಸನ್ನಿಧಿಯ ಆ ಘಟನೆಯೇ ರೋಮಾಂಚಕ

ರಜನಿಗೆ ಆಪ್ತವಾದ ಸಿನಿಮಾ ‘ಬಾಬಾ’:

2002ರಲ್ಲಿ ತೆರೆಕಂಡಿದ್ದ ‘ಬಾಬಾ’ ಸಿನಿಮಾ ಹೀನಾಯವಾಗಿ ಸೋತಿತ್ತು. ವಿಶೇಷ ಏನೆಂದರೆ ಆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು ಸ್ವತಃ ರಜನಿಕಾಂತ್​! ನಿರ್ಮಾಣದ ಜವಾಬ್ದಾರಿ ಕೂಡ ಅವರದ್ದೇ. ಹಾಗಿದ್ದರೂ ಕೂಡ ಗಲ್ಲಾಪೆಟ್ಟಿಗೆಯಲ್ಲಿ ‘ಬಾಬಾ’ ಗೆಲ್ಲಲಿಲ್ಲ. ವಿತರಕರಿಗೆ ನಷ್ಟ ಆಗಿದೆ ಎಂದು ರಜನಿಕಾಂತ್​ ಅವರು ತಮ್ಮ ಸ್ವಂತ ಹಣ ನೀಡಿ ನಷ್ಟ ಭರಿಸುವ ಕೆಲಸ ಮಾಡಿದ್ದರು. ಹಾಗಿದ್ದರೂ ಕೂಡ ಇದು ರಜನಿಗೆ ಆಪ್ತವಾದ ಸಿನಿಮಾ. ಯಾಕೆಂದರೆ ಇದು ಅವರು ನಂಬುವ ದೇವರ ಕುರಿತಾಗಿ ಇರುವ ಚಿತ್ರ.

ಇದನ್ನೂ ಓದಿ: Rajinikanth: ‘ಅಪ್ಪು ದೇವರ ಮಗು’ ಎಂದು ಕನ್ನಡದಲ್ಲೇ ಮಾತಾಡಿದ ರಜನಿಕಾಂತ್​; ಮಳೆ ಸುರಿದರೂ ಕದಲಲಿಲ್ಲ ತಲೈವಾ

ಕೌತುಕ ಮೂಡಿಸಿದೆ ‘ಜೈಲರ್​’:

ಹಲವು ಕಾರಣಗಳಿಂದಾಗಿ ‘ಜೈಲರ್​’ ಸಿನಿಮಾ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರದಲ್ಲಿ ರಜನಿಕಾಂತ್​ ಜೊತೆ ಶಿವರಾಜ್​ಕುಮಾರ್​ ಕೂಡ ನಟಿಸುತ್ತಿರುವುದು ವಿಶೇಷ. ‘ಸನ್​ ಪಿಕ್ಚರ್ಸ್​’ ಮೂಲಕ ಈ ಚಿತ್ರ ಅದ್ದೂರಿಯಾಗಿ ನಿರ್ಮಾಣ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.