AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳು, ಮೊಮ್ಮಕ್ಕಳ ಜೊತೆ ರಜನಿಕಾಂತ್​ ಸರಳ ಸುಂದರ ಹೋಳಿ ಆಚರಣೆ

ಈ ವರ್ಷ ಬಿಡುಗಡೆಯಾದ ರಜನಿಕಾಂತ್​ ನಟನೆಯ ‘ಲಾಲ್​ ಸಲಾಂ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಅಂದುಕೊಂಡ ಮಟ್ಟಕ್ಕೆ ಕಲೆಕ್ಷನ್​ ಮಾಡಲಿಲ್ಲ. ಆ ಸಿನಿಮಾದ ಸೋಲಿನ ನೋವನ್ನು ಬದಿಗಿಟ್ಟು ರಜನಿಕಾಂತ್​ ಅವರು ಹೋಳಿ ಹಬ್ಬ ಆಚರಿಸಿದ್ದಾರೆ. ಪುತ್ರಿಯರಾದ ಐಶ್ವರ್ಯಾ, ಸೌಂದರ್ಯಾ ಅವರು ಕೂಡ ಅಪ್ಪನ ಜೊತೆ ಹೋಳಿ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ.

ಮಕ್ಕಳು, ಮೊಮ್ಮಕ್ಕಳ ಜೊತೆ ರಜನಿಕಾಂತ್​ ಸರಳ ಸುಂದರ ಹೋಳಿ ಆಚರಣೆ
ಕುಟುಂಬದ ಜೊತೆ ರಜನಿಕಾಂತ್​ ಹೋಳಿ ಆಚರಣೆ
ಮದನ್​ ಕುಮಾರ್​
|

Updated on: Mar 26, 2024 | 7:18 PM

Share

ನಟ ರಜನಿಕಾಂತ್​ (Rajinikanth) ಅವರು ಪಕ್ಕಾ ಫ್ಯಾಮಿಲಿ ಮ್ಯಾನ್​. ಸಿನಿಮಾದಲ್ಲಿ ಸೂಪರ್​ ಸ್ಟಾರ್​ ಆಗಿ ಮಿಂಚುವ ಅವರು ನಿಜ ಜೀವನದಲ್ಲಿ ಸಿಕ್ಕಾಪಟ್ಟೆ ಸರಳವಾಗಿ ಇರುತ್ತಾರೆ. ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಅವರು ಇಷ್ಟಪಡುತ್ತಾರೆ. ಈಗ ಅವರು ಮಕ್ಕಳು ಮತ್ತು ಮೊಮ್ಮಕ್ಕಳ ಜೊತೆ ಸೇರಿಕೊಂಡು ಹೋಳಿ (Holi 2024) ಹಬ್ಬವನ್ನು ಆಚರಿಸಿದ್ದಾರೆ. ಮನೆಯಲ್ಲಿ ಬಹಳ ಸರಳವಾಗಿ ಅವರು ಹೋಳಿ ಆಡಿದ್ದಾರೆ. ಈ ಖುಷಿಯ ಕ್ಷಣಗಳ ಫೋಟೋವನ್ನು ಅವರ ಮಗಳಾದ ಸೌಂದರ್ಯಾ ಹಾಗೂ ಐಶ್ವರ್ಯಾ (Aishwarya Rajinikanth) ಅವರು ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಆ ಮೂಲಕ ‘ಸೂಪರ್​ ಸ್ಟಾರ್​’ಗೆ ಫ್ಯಾನ್ಸ್​ ಹೋಳಿ ಹಬ್ಬದ ಶುಭ ಕೋರಿದ್ದಾರೆ.

‘ಹ್ಯಾಪಿ ಹೋಳಿ’ ಎಂಬ ಕ್ಯಾಪ್ಷನ್​ನೊಂದಿಗೆ ಸೌಂದರ್ಯಾ ರಜನಿಕಾಂತ್​ ಅವರು ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ. ಇನ್ನು, ಐಶ್ವರ್ಯಾ ರಜನಿಕಾಂತ್​ ಅವರು ‘ಹ್ಯಾಪಿ ರಜನಿಕಾಂತ್​ ಡೇ ಶಿವಾಜಿ ರಾವ್​. ಬಾಲಚಂದರ್​ ತಾತಾ ಅವರನ್ನು ನೆನಪಿಸಿಕೊಳ್ಳುತ್ತಿದ್ದೇವೆ’ ಎಂದು ಕ್ಯಾಪ್ಷನ್​ ನೀಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್​ ಆಗಿವೆ. ರಜನಿಕಾಂತ್ ಪತ್ನಿ ಲತಾ, ಮೊಮ್ಮಕ್ಕಳಾದ ವೇದ್, ವೀರ್, ಅಳಿಯ ವಿಶಗನ್​ ಮುಂತಾದವರು ಕೂಡ ಹೋಳಿ ಆಡಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ ಉಪೇಂದ್ರ ಮನೆಯಲ್ಲಿ ಹೋಳಿ ಆಚರಣೆ; ಬಣ್ಣದಲ್ಲಿ ಮಿಂದೆದ್ದ ತಾರೆಯರು

2024ರ ಆರಂಭದಲ್ಲೇ ರಜನಿಕಾಂತ್​ ಅವರಿಗೆ ಕೊಂಚ ಹಿನ್ನಡೆ ಆಯಿತು. ಅವರು ವಿಶೇಷ ಪಾತ್ರದಲ್ಲಿ ನಟಿಸಿದ ‘ಲಾಲ್ ಸಲಾಂ’ ಸಿನಿಮಾ ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್​ ಮಾಡಲಿಲ್ಲ. ಆ ಚಿತ್ರಕ್ಕೆ ಐಶ್ವರ್ಯಾ ರಜನಿಕಾಂತ್​ ಅವರು ನಿರ್ದೇಶನ ಮಾಡಿದ್ದರು. ಮೊಯಿದ್ದೀನ್​ ಭಾಯ್​ ಎಂಬ ಪಾತ್ರದಲ್ಲಿ ರಜನಿ ಕಾಣಿಸಿಕೊಂಡಿದ್ದರು. ಆ ಸಿನಿಮಾ ಸೋಲಿನ ಕಹಿಯನ್ನು ಮರೆತು ಎಲ್ಲರೂ ಸೇರಿ ಹೋಳಿ ಆಚರಣೆ ಮಾಡಿದ್ದಾರೆ.

73ರ ಪ್ರಾಯದಲ್ಲೂ ರಜನಿಕಾಂತ್​ ಅವರು ಸಖತ್​ ಬೇಡಿಕೆ ಹೊಂದಿದ್ದಾರೆ. 2023ರಲ್ಲಿ ಅವರು ನಟಿಸಿದ್ದ ‘ಜೈಲರ್​’ ಸಿನಿಮಾ ಸೂಪರ್​ ಹಿಟ್​ ಆಯಿತು. ಈಗ ಅವರು ‘ವೆಟ್ಟೈಯನ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾಗೆ ಟಿ.ಜೆ. ಜ್ಞಾನವೇಲ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ಲೈಕಾ ಪ್ರೊಡಕ್ಷನ್ಸ್​’ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಅಮಿತಾಭ್​ ಬಚ್ಚನ್, ಫಹಾದ್​ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್​, ಕಿಶೋರ್​ ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇದು ರಜನಿಕಾಂತ್​ ನಟನೆಯ 170ನೇ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್