Rajinikanth: ರಜನಿಕಾಂತ್​ಗೆ ಅಷ್ಟು ಚೆನ್ನಾಗಿ ತಮಿಳು ಕಲಿಸಿದ್ದು ಯಾರು? ಎರಡೇ ತಿಂಗಳಲ್ಲಿ ಬದಲಾಗಿತ್ತು ಬದುಕು

Rajinikanth Friend Raj Bahadur: ಕರ್ನಾಟಕದಲ್ಲಿ ಬೆಳೆದ ರಜನಿಕಾಂತ್​ ಅವರಿಗೆ ಆರಂಭದಲ್ಲಿ ಚೆನ್ನಾಗಿ ತಮಿಳು ಮಾತನಾಡಲು ಬರುತ್ತಿರಲಿಲ್ಲ. ಆದರೆ ಅವರು ಎರಡೇ ತಿಂಗಳಲ್ಲಿ ಸ್ಪಷ್ಟವಾಗಿ ತಮಿಳು ಮಾತನಾಡುವುದನ್ನು ಕಲಿತು ಖ್ಯಾತ ನಿರ್ದೇಶಕ ಬಾಲಚಂದರ್​ಗೂ ಅಚ್ಚರಿ ಮೂಡಿಸಿದ್ದರು.

Rajinikanth: ರಜನಿಕಾಂತ್​ಗೆ ಅಷ್ಟು ಚೆನ್ನಾಗಿ ತಮಿಳು ಕಲಿಸಿದ್ದು ಯಾರು? ಎರಡೇ ತಿಂಗಳಲ್ಲಿ ಬದಲಾಗಿತ್ತು ಬದುಕು
ರಾಜ್ ಬಹದ್ದೂರ್, ರಜನಿಕಾಂತ್
Follow us
TV9 Web
| Updated By: ಮದನ್​ ಕುಮಾರ್​

Updated on:Oct 26, 2021 | 4:31 PM

ಸಿನಿಮಾ ನಟ ಆಗುವುದಕ್ಕೂ ಮುನ್ನ ರಜನಿಕಾಂತ್​ ಅವರು ಬೆಂಗಳೂರಿನಲ್ಲಿ ಬಸ್​ ಕಂಡಕ್ಟರ್​ ಆಗಿದ್ದರು. ಅವರ ಜೊತೆ ಬಸ್​ ಚಾಲಕನಾಗಿ ಸ್ನೇಹಿತ ರಾಜ್​ ಬಹದ್ದೂರ್​ ಕೆಲಸ ಮಾಡುತ್ತಿದ್ದರು. ರಜನಿಕಾಂತ್​ ಅವರಲ್ಲಿನ ನಟನೆಯ ಸಾಮರ್ಥ್ಯ ಗುರುತಿಸಿ, ಅವರನ್ನು ತಮಿಳುನಾಡಿಗೆ ಕಳಿಸಿಕೊಟ್ಟವರು ಇದೇ ರಾಜ್​ ಬಹದ್ದೂರು. ಇಂದಿಗೂ ಅವರಿಬ್ಬರ ನಡುವೆ ಆ ಸ್ನೇಹ ಮುಂದುವರಿದಿದೆ. ಅ.25ರಂದು ರಜನಿಗೆ ‘ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಈ ಖುಷಿಯ ಸಂದರ್ಭದಲ್ಲಿ ತಮ್ಮ ಹಳೇ ಸ್ನೇಹಿತನನ್ನು ರಜನಿ ಮರೆತಿಲ್ಲ. ತಲೈವಾಗೆ ಈ ಪ್ರತಿಷ್ಠಿತ ಗೌರವ ಸಿಕ್ಕಿರುವುದು ರಾಜ್​ ಬಹದ್ದೂರ್​ಗೆ ಹೆಮ್ಮೆ ತಂದಿದೆ.​ ಅದೇ ಖುಷಿಯಲ್ಲಿ ಅವರು ತಮ್ಮ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.

ಹವ್ಯಾಸಕ್ಕಾಗಿ ನಾಟಕ ಮಾಡುತ್ತಿದ್ದ ರಜನಿಕಾಂತ್​ ಅವರು ಸಿನಿಮಾದಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡಿದವರು ರಾಜ್​ ಬಹದ್ದೂರ್​. ನಟನೆಯಲ್ಲಿ ಇನ್ನಷ್ಟು ತರಬೇತಿ ಪಡೆಯಲು ಚೈನ್ನೈಗೆ ಹೋದಾಗ ರಜನಿಕಾಂತ್​ಗೆ ಸ್ಪಷ್ಟವಾಗಿ ತಮಿಳು ಮಾತನಾಡಲು ಬರುತ್ತಿರಲಿಲ್ಲ. ನಾಟಕವೊಂದರಲ್ಲಿ ಅವರ ಪ್ರತಿಭೆಯನ್ನು ಗಮನಿಸಿದ ಖ್ಯಾತ ನಿರ್ದೇಶಕ ಬಾಲಚಂದರ್​ ಅವರು, ‘ನೀನು ತಮಿಳು ಕಲಿತುಕೋ’ ಎಂದು ಸಲಹೆ ನೀಡಿದ್ದರು. ಆ ಬಗ್ಗೆ ರಾಜ್​ ಬಹದ್ದೂರ್​ ಈಗ ವಿವರಿಸಿದ್ದಾರೆ.

‘ಆಗ ಅವನಿಗೆ ತಮಿಳು ಸರಿಯಾಗಿ ಬರುತ್ತಿರಲಿಲ್ಲ. ನಾನು ಚೆನ್ನಾಗಿ ತಮಿಳು ಮಾತನಾಡುತ್ತಿದ್ದೆ. ಬಾಲಚಂದರ್​ ನೀಡಿದ ಸಲಹೆ ಬಗ್ಗೆ ಬೆಂಗಳೂರಿಗೆ ಬಂದು ನನ್ನ ಬಳಿ ಹೇಳಿಕೊಂಡ. ಅವರು ಹೇಳಿದ್ದಾರೆ ಎಂದರೆ ಏನೋ ಅರ್ಥ ಇದೆ ಅಂತ ನಮಗೆ ಅನಿಸಿತು. ಇನ್ಮೇಲೆ ನಾವಿಬ್ಬರು ತಮಿಳಿನಲ್ಲಿ ಮಾತನಾಡೋಣ ಅಂತ ತೀರ್ಮಾನಿಸಿದೆವು. ನೀವು ನಂಬುತ್ತೀರೋ ಇಲ್ಲವೋ, ಶೇ.20ರಷ್ಟು ತಮಿಳು ಮಾತನಾಡುತ್ತಿದ್ದವನು ಎರಡೇ ತಿಂಗಳಲ್ಲಿ ಶೇ.100ರಷ್ಟು ಸ್ಪಷ್ಟವಾಗಿ ಮಾತನಾಡುವುದು ಕಲಿತ’ ಎಂದು ತಮ್ಮ ಸ್ನೇಹಿತನಿಗೆ ತಾವು ತಮಿಳು ಹೇಳಿಕೊಟ್ಟ ದಿನಗಳನ್ನು ರಾಜ್​ ಬಹದ್ದೂರ್​ ಮೆಲುಕು ಹಾಕಿದ್ದಾರೆ.

‘ಅಷ್ಟು ದೊಡ್ಡ ನಿರ್ದೇಶಕರು ಹೇಳಿದ್ದಾರೆ ಎಂದು ಕಲಿಯುವ ಹುಮ್ಮಸ್ಸಿನಿಂದ ಪ್ರಯತ್ನಿಸಿ ಶೇ.100ರಷ್ಟು ತಮಿಳು ಮಾತಾಡೋದು ಕಲಿತ. ‘ಅಪೂರ್ವ ರಾಗಂಗಳ್​’ ಚಿತ್ರದಲ್ಲಿ ರಜನಿಕಾಂತ್​ಗೆ ಒಂದು ಪಾತ್ರ ನೀಡಬೇಕು ಅಂತ ಬಾಲಚಂದರ್​ ಕರೆದರು. ಆದರೆ ನಿನಗೆ ತಮಿಳು ಬರುವುದಿಲ್ಲವಲ್ಲ ಏನು ಮಾಡೋದು ಅಂದರು. ಇವನು ಕೂಡಲೇ ಪಟಪಟನೆ ತಮಿಳಿನಲ್ಲಿ ಮಾತನಾಡಿ ತೋರಿಸಿದ. ತಾನೇ ಡಬ್ಬಿಂಗ್​ ಮಾಡುತ್ತೇನೆ ಅಂತ ಕೂಡ ಹೇಳಿದ. ಅದನ್ನು ಕೇಳಿ ಬಾಲಚಂದರ್​ ಅಚ್ಚರಿಪಟ್ಟರು. ಆಗ ಅವನಿಗೆ ‘ಅಪೂರ್ವ ರಾಗಂಗಳ್​’ ಚಾನ್ಸ್​ ಸಿಕ್ಕಿತು. ಅದಾದ ಮೇಲೆ ಹಲವು ಅವಕಾಶಗಳು ಹುಡುಕಿಕೊಂಡು ಬಂದವು’ ಎಂದು ಆ ದಿನಗಳ ಕಹಾನಿಯನ್ನು ರಾಜ್​ ಬಹದ್ದೂರ್​ ತೆರೆದಿಟ್ಟಿದ್ದಾರೆ.

ಇದನ್ನೂ ಓದಿ:

‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್​; ಧನ್ಯಾ ರಾಮ್​ಕುಮಾರ್​-ಸೂರಜ್​ಗೆ ತಲೈವಾ ಬೆಂಬಲ

ಜಗ್ಗೇಶ್​ ಪುತ್ರನ ‘ಕಾಗೆ ಮೊಟ್ಟೆ’ ಸಿನಿಮಾ ರಿಲೀಸ್​ಗೆ ರೆಡಿ; ಗುರುರಾಜ್​ ಚಿತ್ರದಲ್ಲಿ ರಜನಿಕಾಂತ್​ ಸ್ನೇಹಿತ ರಾಜ್ ಬಹದ್ದೂರ್​

Published On - 4:15 pm, Tue, 26 October 21

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ