AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲಾಲ್ ಸಲಾಂ’ ಚಿತ್ರಕ್ಕೆ ಸಾಧಾರಣ ಓಪನಿಂಗ್; ರಜನಿಕಾಂತ್ ಸಿನಿಮಾ ಗಳಿಸಿದ್ದೆಷ್ಟು?

Lal Salaam Movie Collection: ರಜನಿಕಾಂತ್ ನಟನೆಯ ‘ಲಾಲ್ ಸಲಾಂ’ ಸಿನಿಮಾದಲ್ಲಿ ಧರ್ಮಗಳ ಭಾವೈಕ್ಯತೆ ಬಗ್ಗೆ ಹೇಳಲಾಗಿದೆ. ಈ ಚಿತ್ರ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 4.30 ಕೋಟಿ ರೂಪಾಯಿ. ರಜನಿಕಾಂತ್ ಇದ್ದಾರೆ ಎನ್ನುವ ಕಾರಣಕ್ಕೆ ಕೆಲವರು ಥಿಯೇಟರ್​ಗೆ ಹೋಗಿ ಸಿನಿಮಾ ನೋಡಿದ್ದಾರೆ. ಆದರೂ ಸಾಧಾರಣ ಗಳಿಕೆ ಆಗಿದೆ.

‘ಲಾಲ್ ಸಲಾಂ’ ಚಿತ್ರಕ್ಕೆ ಸಾಧಾರಣ ಓಪನಿಂಗ್; ರಜನಿಕಾಂತ್ ಸಿನಿಮಾ ಗಳಿಸಿದ್ದೆಷ್ಟು?
ರಜನಿಕಾಂತ್​
ರಾಜೇಶ್ ದುಗ್ಗುಮನೆ
|

Updated on: Feb 10, 2024 | 10:29 AM

Share

ರಜನಿಕಾಂತ್ (Rajinikanth) ನಟನೆಯ, ಅವರ ಮಗಳು ಐಶ್ವರ್ಯಾ ನಿರ್ದೇಶನದ ರಜನಿಕಾಂತ್ ‘ಲಾಲ್ ಸಲಾಂ’ ಸಿನಿಮಾ ಫೆಬ್ರವರಿ 9ರಂದು ರಿಲೀಸ್ ಆಗಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಕೆಲವರು ಚಿತ್ರವನ್ನು ಇಷ್ಟಪಟ್ಟರೆ ಇನ್ನೂ ಕೆಲವರಿಗೆ ಸಿನಿಮಾ ಇಷ್ಟ ಆಗಿಲ್ಲ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಎಷ್ಟು ಗಳಿಕೆ ಮಾಡಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಈ ಚಿತ್ರ ಡಲ್ ಓಪನಿಂಗ್ ಪಡೆದಿದೆ.

‘ಲಾಲ್ ಸಲಾಂ’ ಸಿನಿಮಾದಲ್ಲಿ ಧರ್ಮಗಳ ಭಾವೈಕ್ಯತೆ ಬಗ್ಗೆ ಇದೆ. ಈ ಚಿತ್ರ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 4.30 ಕೋಟಿ ರೂಪಾಯಿ ಮಾತ್ರ. ಚಿತ್ರಮಂದಿರದಲ್ಲಿ ಚಿತ್ರದ ಆಕ್ಯುಪೆನ್ಸಿ ಕೇವಲ 30 ಪರ್ಸೆಂಟ್ ಇತ್ತು. ರಜನಿಕಾಂತ್ ಇದ್ದಾರೆ ಎನ್ನುವ ಕಾರಣಕ್ಕೆ ಕೆಲವರು ಥಿಯೇಟರ್​ಗೆ ಹೋಗಿ ಸಿನಿಮಾ ನೋಡಿದ್ದಾರೆ. ಆದರೂ ಅಂದುಕೊಂಡಷ್ಟು ಸಿನಿಮಾ ಗಳಿಕೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಬಾಯಿಮಾತಿನ ಪ್ರಚಾರ ಸಿಕ್ಕರೆ ಮಾತ್ರ ಸಿನಿಮಾಗೆ ಸಹಕಾರಿ ಆಗಲಿದೆ.

ಈ ಚಿತ್ರ ತಮಿಳು ಮಾತ್ರವಲ್ಲದೆ ತೆಲುಗು ಭಾಷೆಯಲ್ಲೂ ರಿಲೀಸ್ ಆಗಿದೆ. ಆಂಧ್ರದ ಅನೇಕ ಕಡೆಗಳಲ್ಲಿ ಥಿಯೇಟರ್​ನಲ್ಲಿ ಜನ ಇಲ್ಲದೆ ಶೋ ರದ್ದು ಮಾಡಲಾಗಿದೆ. ಹೀಗಾಗಿ, ಆಂಧ್ರ ಭಾಗದಲ್ಲಿ ಈ ಸಿನಿಮಾದಿಂದ ತಂಡ ಹೆಚ್ಚಿನದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ, ತಮಿಳುನಾಡು ಭಾಗದಿಂದ ಮಾತ್ರ ಗಳಿಕೆ ಆಗಬೇಕಿದೆ. ಈ ಚಿತ್ರಕ್ಕೆ ರಜನಿಕಾಂತ್ 40 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಹೀಗಾಗಿ ಚಿತ್ರದ ಬಜೆಟ್ ಹೆಚ್ಚಿದೆ. ಇದನ್ನು ರಿಕವರಿ ಮಾಡೋದು ಅಷ್ಟು ಸುಲಭದಲ್ಲಿಲ್ಲ.

ಇದನ್ನೂ ಓದಿ: ಪ್ರೇಕ್ಷಕರೇ ಇಲ್ಲದೇ ರಜನಿಕಾಂತ್​ ಸಿನಿಮಾ ಕ್ಯಾನ್ಸಲ್​; ‘ಲಾಲ್​ ಸಲಾಂ’ ಚಿತ್ರಕ್ಕೆ ಹಿನ್ನಡೆ

‘ಲಾಲ್ ಸಲಾಂ’ ಸಿನಿಮಾದಲ್ಲಿ ರಜನಿಕಾಂತ್ ಪ್ರಮುಖ ಅತಿಥಿ ಪಾತ್ರ ಮಾಡಿದ್ದಾರೆ. ವಿಷ್ಣು ವಿಶಾಲ್, ವಿಕ್ರಾಂತ್ ಮೊದಲಾದವರು ನಟಿಸಿದ್ದಾರೆ. ರಜನಿಕಾಂತ್ ಅವರ ಪಾತ್ರ ಅಭಿಮಾನಿಗಳಿಗೆ ಇಷ್ಟ ಆಗಿದೆ. ಈ ಸಿನಿಮಾ ಸಂಕ್ರಾಂತಿ ಸಂದರ್ಭದಲ್ಲಿಯೇ ರಿಲೀಸ್ ಆಗಬೇಕಿತ್ತು. ಆದರೆ ಸ್ಪರ್ಧೆ ಹೆಚ್ಚಿದ್ದರಿಂದ ಈ ಚಿತ್ರ ಫೆಬ್ರವರಿ 9ರಂದು ರಿಲೀಸ್ ಆಯಿತು. ಸಂಕ್ರಾಂತಿ ಸಂದರ್ಭದಲ್ಲೇ ಸಿನಿಮಾ ರಿಲೀಸ್ ಆಗಿದ್ದರೆ ಚಿತ್ರಕ್ಕೆ ಇಷ್ಟೂ ಗಳಿಕೆ ಆಗುತ್ತಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More