‘ವೆಟ್ಟೈಯಾನ್’ ರಿಲೀಸ್ ಸಂದರ್ಭದಲ್ಲೇ ರಜನಿಕಾಂತ್​​ಗೆ ತೀವ್ರ ಅನಾರೋಗ್ಯ; ಆಸ್ಪತ್ರೆಗೆ ದಾಖಲು

ನಟ ರಜನಿಕಾಂತ್ ಅವರು ‘ವೆಟ್ಟೈಯನ್’ ಸಿನಿಮಾದ ರಿಲೀಸ್​ಗೆ ಕಾದಿದ್ದಾರೆ. ಈ ಚಿತ್ರ ಅಕ್ಟೋಬರ್ 10ರಂದು ಬಿಡುಗಡೆ ಆಗುತ್ತಿದೆ. ರಜನಿಕಾಂತ್ ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ರಿಲೀಸ್ ಸಂದರ್ಭದಲ್ಲಿ ರಜನಿಕಾಂತ್​ಗೆ ಅನಾರೋಗ್ಯ ಆಗಿದೆ.

‘ವೆಟ್ಟೈಯಾನ್’ ರಿಲೀಸ್ ಸಂದರ್ಭದಲ್ಲೇ ರಜನಿಕಾಂತ್​​ಗೆ ತೀವ್ರ ಅನಾರೋಗ್ಯ; ಆಸ್ಪತ್ರೆಗೆ ದಾಖಲು
ರಜಿನಿಕಾಂತ್
Follow us
|

Updated on: Oct 01, 2024 | 8:06 AM

ಕಾಲಿವುಡ್ ನಟ ರಜನಿಕಾಂತ್ ಅವರಿಗೆ ಈಗ 73 ವರ್ಷ. ವಯಸ್ಸು ಆದಂತೆ ಅವರಿಗೆ ಅನಾರೋಗ್ಯ ಸಮಸ್ಯೆ ಕೂಡ ಹೆಚ್ಚುತ್ತಿದೆ. ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಅವರ ಹೃದಯ ಪರೀಕ್ಷೆ ಕೂಡ ಮಾಡಿಸಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಆತಂಕಗೊಂಡಿದ್ದಾರೆ. ಅವರ ನಟನೆಯ ‘ವೆಟ್ಟೈಯಾನ್’ ಸಿನಿಮಾ ರಿಲೀಸ್ ಸಂದರ್ಭದಲ್ಲೇ ಈ ರೀತಿ ಆಗಿದೆ.

ರಜನಿಕಾಂತ್ ಅವರಿಗೆ ಸೆಪ್ಟೆಂಬರ್ 30ರ ತಡರಾತ್ರಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ಕಾರಣದಿಂದ ಅವರನ್ನು ತಕ್ಷಣವೇ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಈ ವೇಳೆ ಅವರ ಹೃದಯ ಪರೀಕ್ಷೆ ಕೂಡ ಮಾಡಿಸಲಾಗಿದೆ. ಹೃದಯರೋಗ ತಜ್ಞ ಸಾಯಿ ಸತೀಶ್ ಅವರು ರಜನಿ ಅವರನ್ನು ಪರೀಕ್ಷೆ ಮಾಡಿದ್ದಾರೆ. ಈಗ ರಜನಿಕಾಂತ್ ಆರೋಗ್ಯ ಸುಸ್ಥಿರವಾಗಿದೆ.

ಇಂದು (ಅಕ್ಟೋಬರ್ 1) ಅಪೋಲೋ ಆಸ್ಪತ್ರೆಯಲ್ಲಿ ರಜನಿಕಾಂತ್ ಅವರ ಹೃದಯದ ಪರೀಕ್ಷೆ ನಡೆಯಲಿದೆ. ಈ ವೇಳೆ ಕೆಲವು ಚಿಕಿತ್ಸೆಗಳನ್ನು ರಜನಿಕಾಂತ್​ಗೆ ನೀಡಲಾಗುತ್ತಿದೆ ಎನ್ನಲಾಗಿದೆ. ಸದ್ಯ ರಜನಿಕಾಂತ್ ಫ್ಯಾನ್ಸ್ ಸಾಕಷ್ಟು ಆತಂಕಗೊಂಡಿದ್ದಾರೆ. ಅವರ ಕಡೆಯಿಂದ ಆರೋಗ್ಯದ ಬಗ್ಗೆ ಅಪ್​ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ: ‘ನೆಲದ ಮೇಲೆ ಮಲಗುತ್ತಿದ್ದರು’: ರಜನಿಕಾಂತ್ ಸರಳತೆಯ ಕೊಂಡಾಡಿದ ಬಿಗ್​-ಬಿ

ಈ ಮೊದಲು ಕೂಡ ರಜನಿಕಾಂತ್ ಅವರು ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಈ ರೀತಿ ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಆತಂಕ ಹೆಚ್ಚಿದೆ. ಆದಾಗ್ಯೂ ಅವರು ಸಿನಿಮಾ ಕೃಷಿಯನ್ನು ನಿಲ್ಲಿಸಿಲ್ಲ ಅನ್ನೋದು ವಿಶೇಷ.

ರಜನಿಕಾಂತ್ ನಟನೆಯ ‘ವೆಟ್ಟೈಯಾನ್’ ಸಿನಿಮಾ ಅಕ್ಟೋಬರ್ 10ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾಗಾಗಿ ಫ್ಯಾನ್ಸ್ ಕಾದಿದ್ದಾರೆ. ರಜನಿಕಾಂತ್ ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ರಿಲೀಸ್ ಸಂದರ್ಭದಲ್ಲಿ ಈ ರೀತಿ ಆಗಿರುವುದು ಸಹಜವಾಗಿಯೇ ಅವರ ಫ್ಯಾನ್ಸ್​ಗೆ ಬೇಸರ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

45 ಲಕ್ಷ ರೂ. ನೋಟುಗಳಿಂದ ದುರ್ಗಾದೇವಿಗೆ ಅಲಂಕಾರ! ಬೆರಗಾದ ಭಕ್ತರು
45 ಲಕ್ಷ ರೂ. ನೋಟುಗಳಿಂದ ದುರ್ಗಾದೇವಿಗೆ ಅಲಂಕಾರ! ಬೆರಗಾದ ಭಕ್ತರು
ನವರಾತ್ರಿ ಉತ್ಸವದಲ್ಲಿ ಕಣ್ಮನ ಸೆಳೆದ ಕಾಂತಾರ ಚಿತ್ರದ ಪಂಜುರ್ಲಿ ನೃತ್ಯ
ನವರಾತ್ರಿ ಉತ್ಸವದಲ್ಲಿ ಕಣ್ಮನ ಸೆಳೆದ ಕಾಂತಾರ ಚಿತ್ರದ ಪಂಜುರ್ಲಿ ನೃತ್ಯ
ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು
ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು
ಒಳ ಉಡುಪಿನ ವಿಷಯ ಪ್ರಸ್ತಾಪಿಸಿ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ತಂದ ಜಗದೀಶ್
ಒಳ ಉಡುಪಿನ ವಿಷಯ ಪ್ರಸ್ತಾಪಿಸಿ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ತಂದ ಜಗದೀಶ್
ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು
ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು