RRR Box Office Collection: ಬಾಕ್ಸಾಫೀಸ್​ನಲ್ಲಿ ‘ಆರ್​ಆರ್​ಆರ್​’ ದಾಖಲೆಯ ಓಟ; ₹ 1,000 ಕೋಟಿ ಕ್ಲಬ್​ಗೆ ಇನ್ನೆಷ್ಟು ದೂರ?

| Updated By: shivaprasad.hs

Updated on: Apr 03, 2022 | 8:58 PM

Ram Charan | Jr NTR | Rajamouli: ಬಾಕ್ಸಾಫೀಸ್​ನಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ‘ಆರ್​ಆರ್​ಆರ್​’ ಇದೀಗ ಹೊಸ ದಾಖಲೆ ಬರೆದಿದೆ. ರಜಿನಿಕಾಂತ್ ಹಾಗೂ ಅಕ್ಷಯ್ ಕುಮಾರ್ ನಟನೆಯ 2.0 ಗಲ್ಲಾಪೆಟ್ಟಿಗೆಯಲ್ಲಿ ಸುಮಾರು 800 ಕೋಟಿ ರೂ ಬಾಚಿಕೊಂಡಿತ್ತು. ಇದೀಗ ಕೇವಲ 9 ದಿನದಲ್ಲಿಯೇ ಈ ದಾಖಲೆಯನ್ನು ‘ಆರ್​ಆರ್​ಆರ್’ ಮುರಿದಿದೆ.

RRR Box Office Collection: ಬಾಕ್ಸಾಫೀಸ್​ನಲ್ಲಿ ‘ಆರ್​ಆರ್​ಆರ್​’ ದಾಖಲೆಯ ಓಟ; ₹ 1,000 ಕೋಟಿ ಕ್ಲಬ್​ಗೆ ಇನ್ನೆಷ್ಟು ದೂರ?
‘ಆರ್​​ಆರ್​ಆರ್​’ ಚಿತ್ರದಲ್ಲಿ ರಾಮ್ ಚರಣ್, ಜ್ಯೂ.ಎನ್​ಟಿಆರ್
Follow us on

ತೆರೆಕಂಡ ಎರಡನೇ ವಾರದಲ್ಲೂ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ (RRR Movie Collection) ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಹಲವು ಭಾಷೆಗಳಲ್ಲಿ ರಿಲೀಸ್ ಆಗಿರುವ ಸಿನಿಮಾವನ್ನು ಜನರು ಇಷ್ಟಪಟ್ಟಿದ್ದು, ಬಾಕ್ಸಾಫೀಸ್​ನಲ್ಲಿ ದಾಖಲೆಯ ಕಲೆಕ್ಷನ್ ಮಾಡುತ್ತಿದೆ. ಹಿಂದಿ ಅವತರಣಿಕೆಯಲ್ಲೂ ಚಿತ್ರವು ಕಲೆಕ್ಷನ್ ವಿಚಾರದಲ್ಲಿ ಹಲವು ದಾಖಲೆ ಬರೆದಿದ್ದು, ಈ ವಾರ ತೆರೆಕಂಡ ಚಿತ್ರಕ್ಕೂ ಭರ್ಜರಿ ಪೈಪೋಟಿ ನೀಡಿದೆ. ಅಷ್ಟೇ ಅಲ್ಲ, ಬಹುನಿರೀಕ್ಷಿತ ಜಾನ್ ಅಬ್ರಹಾಂ ನಟನೆಯ ‘ಅಟ್ಯಾಕ್’ (Attack) ‘ಆರ್​ಆರ್​ಆರ್​’ ಎದುರು ಸಪ್ಪೆಯಾಗಿದೆ. ಎಲ್ಲೆಡೆ ಪ್ರಾಬಲ್ಯ ಮೆರೆಯುತ್ತಿರುವ ‘ಆರ್​ಆರ್​ಆರ್​’ ಇದೀಗ ಹೊಸ ದಾಖಲೆ ಬರೆದಿದೆ. ಹೌದು. ರಜಿನಿಕಾಂತ್ ಹಾಗೂ ಅಕ್ಷಯ್ ಕುಮಾರ್ ನಟನೆಯ 2.0 ಗಲ್ಲಾಪೆಟ್ಟಿಗೆಯಲ್ಲಿ ಸುಮಾರು 800 ಕೋಟಿ ರೂ ಬಾಚಿಕೊಂಡಿತ್ತು. ಇದೀಗ ಕೇವಲ 9 ದಿನದಲ್ಲಿಯೇ ಈ ದಾಖಲೆಯನ್ನು ‘ಆರ್​ಆರ್​ಆರ್’ ಮುರಿದಿದೆ. ಹೌದು. ಬಾಕ್ಸಾಫೀಸ್ ವಿಶ್ಲೇಷಕರ ಪ್ರಕಾರ ‘ಆರ್​ಆರ್​ಆರ್​’ ಇದುವರೆಗೆ ಗಳಿಸಿದ್ದು 819.06 ಕೋಟಿ ರೂ. ಅರ್ಥಾತ್ ಬಿಡುಗಡೆಯಾದ ಒಂಬತ್ತು ದಿನದಲ್ಲಿ ಇಷ್ಟು ಮೊತ್ತವನ್ನು ಚಿತ್ರ ಗಳಿಸಿದ್ದು, ಇಂದು ಭಾನುವಾರವಾಗಿರುವುದರಿಂದ ಈ ಗಳಿಕೆ ಮತ್ತಷ್ಟು ಏರಲಿದೆ.

ಎರಡನೇ ವಾರದ ಅಂತ್ಯದ ವೇಳೆಗೆ ಅಥವಾ ಮೂರನೇ ವಾರದ ಪ್ರಾರಂಭದಲ್ಲಿ ‘ಆರ್​ಆರ್​ಆರ್​’ 1000 ಕೋಟಿ ಕ್ಲಬ್ ಸೇರಬಹುದು ಎನ್ನುವುದು ವಿಶ್ಲೇಷಕರ ಅಂದಾಜು. ಎರಡನೇ ವಾರದಲ್ಲಿ ಶುಕ್ರವಾರ ಸುಮಾರು ₹ 41 ಕೋಟಿ ಹಾಗೂ ಶನಿವಾರ ₹ 68.18 ಕೋಟಿಯನ್ನು ಚಿತ್ರ ಗಳಿಸಿದೆ. ಪ್ರಸ್ತುತ 800 ಕೋಟಿ ಕ್ಲಬ್ ಸೇರಿರುವ ‘ಆರ್​ಆರ್​ಆರ್’ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಗಳಿಸಿದ ಸಾರ್ವಕಾಲಿಕ ಚಿತ್ರಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

‘ಆರ್​ಆರ್​ಆರ್​’ ಕಲೆಕ್ಷನ್ ಕುರಿತು ಬಾಕ್ಸಾಫೀಸ್ ವಿಶ್ಲೇಷಕರೋರ್ವರ ಟ್ವೀಟ್:

‘ಆರ್​ಆರ್​ಆರ್​’ ಸಿನಿಮಾದಲ್ಲಿ ಬರುವ ಪಾತ್ರಗಳು ನೈಜವಾದರೂ ಕಥೆ ಕಲ್ಪನೆಯನ್ನು ಒಳಗೊಂಡಿದೆ. ರಾಮ್​ ಚರಣ್ ಹಾಗೂ ಜ್ಯೂ.ಎನ್​ಟಿಆರ್​ಗೆ ಈ ಚಿತ್ರದಿಂದ ದೊಡ್ಡ ಗೆಲುವು ಸಿಕ್ಕಿದ್ದು, ದೇಶದೆಲ್ಲೆಡೆ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಚಿತ್ರವು ಒಟ್ಟು 500 ಕೋಟಿ ರೂ ವೆಚ್ಚ ಮಾಡಿ ತಯಾರಿಸಲಾಗಿದೆ ಎನ್ನಲಾಗಿದ್ದು, ಜನರ ಪ್ರತಿಕ್ರಿಯೆಯಿಂದ ನಿರ್ಮಾಪಕರು ಮುಖದಲ್ಲಿ ಸಂತಸ ಮೂಡಿದೆ. ‘ಆರ್​ಆರ್​ಆರ್​’ನಲ್ಲಿ ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಮೊದಲಾದ ಬಾಲಿವುಡ್ ತಾರೆಯರೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:

ಸೌತ್​ ಸಿನಿಮಾ ಬಗ್ಗೆ ಹಗುರಾಗಿ ಮಾತಾಡಿದ್ದ ಜಾನ್​ ಅಬ್ರಾಹಂ; ‘ಆರ್​ಆರ್​ಆರ್​’ ಎದುರಲ್ಲಿ ಹೀನಾಯ ಸೋಲು

RRR: ‘ಶ್ರದ್ಧಾ ಕಪೂರ್, ಪರಿಣೀತಿ ಚೋಪ್ರಾ..’; ‘ಆರ್​ಆರ್​ಆರ್​’ ಆಫರ್ ರಿಜೆಕ್ಟ್ ಮಾಡಿದ್ದ 5 ಸ್ಟಾರ್ ನಟಿಯರು ಇವರೇ!

Published On - 1:53 pm, Sun, 3 April 22