1 ಕೋಟಿ ರೂಪಾಯಿ ದೇಣಿಗೆ ನೀಡಿ ಭೂಕುಸಿತದ ಸಂತ್ರಸ್ತರಿಗೆ ನೆರವಾದ ಚಿರಂಜೀವಿ, ರಾಮ್​ ಚರಣ್​

| Updated By: ರಾಜೇಶ್ ದುಗ್ಗುಮನೆ

Updated on: Aug 05, 2024 | 6:33 AM

ನಟರಾದ ಚಿರಂಜೀವಿ ಮತ್ತು ರಾಮ್​ ಚರಣ್​ ಅವರು ಸಿನಿಮಾದಿಂದ ಮಾತ್ರವಲ್ಲದೇ ಸಮಾಜಮುಖಿ ಕೆಲಸಗಳಿಂದಲೂ ಜನಮನ ಗೆದ್ದಿದ್ದಾರೆ. ಈಗ ಅವರು ವಯನಾಡಿನಲ್ಲಿ ಭೂಕುಸಿತಕ್ಕೆ ಸಿಲುಕಿದ ಸಂತ್ರಸ್ತರಿಗೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ರಶ್ಮಿಕಾ ಮಂದಣ್ಣ, ಸೂರ್ಯ, ವಿಕ್ರಮ್​, ಮೋಹನ್​ಲಾಲ್​, ಅಲ್ಲು ಅರ್ಜುನ್​ ಮುಂತಾದವರು ಕೂಡ ದೇಣಿಗೆ ನೀಡಿದ್ದಾರೆ.

1 ಕೋಟಿ ರೂಪಾಯಿ ದೇಣಿಗೆ ನೀಡಿ ಭೂಕುಸಿತದ ಸಂತ್ರಸ್ತರಿಗೆ ನೆರವಾದ ಚಿರಂಜೀವಿ, ರಾಮ್​ ಚರಣ್​
ಚಿರಂಜೀವಿ, ರಾಮ್ ಚರಣ್​
Follow us on

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಜುಲೈ 30ರಂದು ಭೀಕರ ಭೂಕುಸಿತ ಉಂಟಾಯಿತು. ಈವರೆಗೂ 300ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿರುವುದು ವರದಿ ಆಗಿದೆ. ಈ ಪ್ರಕೃತಿ ವಿಕೋಪಕ್ಕೆ ಸಿಲುಕಿ 200ಕ್ಕೂ ಹೆಚ್ಚು ಜನರು ನಾಪತ್ತೆ ಆಗಿದ್ದಾರೆ. ಅವರಿಗೆ ಹುಡುಕಾಟ ನಡೆದಿದೆ. ಊರಿಗೆ ಊರೇ ಸ್ಮಶಾನವಾಗಿದ್ದು, ಭೂಕುಸಿತದ ಸಂತ್ರಸ್ತರಿಗೆ ನೆರವಿನ ಅವಶ್ಯಕತೆ ಇದೆ. ‘ಮೆಗಾ ಸ್ಟಾರ್’ ಚಿರಂಜೀವಿ, ರಾಮ್​ ಚರಣ್​ ಅವರು ಜೊತೆಯಾಗಿ 1 ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಚಿರಂಜೀವಿ ಅವರು ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ‘ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಪಕೃತಿಯ ವಿಕೋಪಕ್ಕೆ ನೂರಾರು ಜನರು ಪ್ರಾಣ ಕಳೆದಕೊಂಡಿದ್ದಕ್ಕೆ ತೀವ್ರ ನೋವು ಉಂಟಾಗಿದೆ. ವಯನಾಡು ದುರಂತದ ಸಂತ್ರಸ್ತರಿಗಾಗಿ ನನ್ನ ಮನ ಮಿಡಿಯುತ್ತಿದೆ. ಚರಣ್​ ಮತ್ತು ನಾನು ಜೊತೆಯಾಗಿ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಸಂತ್ರಸ್ತರ ಬೆಂಬಲಕ್ಕೆ ನಿಲ್ಲುತ್ತೇವೆ. ನೋವಿನಲ್ಲಿ ಇರುವ ಎಲ್ಲರಿಗಾಗಿ ನಾನು ಪ್ರಾರ್ಥಿಸುತ್ತೇನೆ’ ಎಂದು ಮೆಗಾ ಸ್ಟಾರ್ ಚಿರಂಜೀವಿ ಅವರು ಬರೆದುಕೊಂಡಿದ್ದಾರೆ.

ಟಾಲಿವುಡ್​, ಕಾಲಿವುಡ್​ ಮುಂತಾದ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ದೇಣಿಗೆ ನೀಡುತ್ತಿದ್ದಾರೆ. ಅಲ್ಲು ಅರ್ಜುನ್​ ಅವರು 25 ಲಕ್ಷ ರೂಪಾಯಿ ನೀಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು 10 ಲಕ್ಷ ರೂಪಾಯಿ ನೀಡಿದ್ದಾರೆ. ಮಲಯಾಳಂ ಚಿತ್ರರಂಗದ ಸೂಪರ್​ ಸ್ಟಾರ್​ ಮೋಹನ್​​ಲಾಲ್​ ಅವರು 3 ಕೋಟಿ ರೂಪಾಯಿ ನೀಡುತ್ತಿದ್ದಾರೆ. ಮಮ್ಮುಟ್ಟಿ ಮತ್ತು ದುಲ್ಖರ್​​ ಸಲ್ಮಾನ್​ ಅವರು ಜೊತೆಯಾಗಿ 35 ಕೋಟಿ ರೂಪಾಯಿ ನೀಡಿದ್ದಾರೆ.

ಇದನ್ನೂ ಓದಿ: ವಯನಾಡ್​ ದುರಂತ: ಸೂರ್ಯ ಫ್ಯಾಮಿಲಿ 50 ಲಕ್ಷ ರೂ. ದೇಣಿಗೆ; ಬೇರೆ ಕಲಾವಿದರು ನೀಡಿದ್ದೆಷ್ಟು?

ಫಹಾದ್​ ಫಾಸಿಲ್​, ನಜ್ರಿಯಾ ನಜೀಮ್​, ಸೂರ್ಯ, ಕಾರ್ತಿ, ಜ್ಯೋತಿಕಾ, ಚಿಯಾನ್​ ವಿಕ್ರಮ್​ ಸೇರಿದಂತೆ ಅನೇಕರು ವಯನಾಡು ಭೂಕುಸಿತದ ಸಂತ್ರಸ್ತರಿಗೆ ದೇಣಿಗೆ ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ‘ವಯನಾಡಿನಲ್ಲಿ ಉಂಟಾದ ಭೂಕುಸಿತದ ಬಗ್ಗೆ ತಿಳಿದು ತುಂಬ ನೋವಾಯಿತು. ಕೇರಳ ರಾಜ್ಯವು ನನಗೆ ಸಾಕಷ್ಟು ಪ್ರೀತಿಯನ್ನು ನೀಡಿದೆ. ಭೂಕುಸಿತದ ಸಂತ್ರಸ್ತರ ಪುನರ್ವಸತಿ ಸಲುವಾಗಿ ಕೇರಳದ ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಕೈಲಾದ ಸಹಾಯವನ್ನು ನಾನು ಮಾಡುತ್ತಿದ್ದೇನೆ’ ಎಂದಿದ್ದಾರೆ ಅಲ್ಲು ಅರ್ಜುನ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:46 pm, Sun, 4 August 24