ಪ್ರೀತಿಯ ನಿರ್ದೇಶಕನಿಗೆ ಮೂರು ವಿಶೇಷ ಗಿಫ್ಟ್ ಕೊಟ್ಟ ರಾಮ್ ಚರಣ್
Ram Charan-Buchibabu Sana: ತೆಲುಗು ನಿರ್ದೇಶಕ ಬುಚ್ಚಿಬಾಬು ಸನಾ ಅವರ ಹುಟ್ಟುಹಬ್ಬಕ್ಕೆ ಸ್ಟಾರ್ ನಟ ರಾಮ್ ಚರಣ್ ಮತ್ತು ಉಪಾಸನಾ ಅವರಿಂದ ವಿಶೇಷ ಉಡುಗೊರೆ ಸಿಕ್ಕಿದೆ. ರಾಮ್ ಚರಣ್ ಅವರು, ತಮ್ಮ ನಿರ್ದೇಶಕನಿಗೆ ಕೈಯಲ್ಲಿ ಬರೆದ ಸಂದೇಶದ ಜೊತೆಗೆ ಮೂರು ವಿಶೇಷ ಉಡುಗೊರೆಗಳನ್ನು ಕಳಿಸಿದ್ದಾರೆ. ಅವೇನೆಂದು ನೀವೇ ನೋಡಿ...

ಗ್ಲೋಬಲ್ ಸ್ಟಾರ್ ರಾಮ್ ಚರಣ್ (Ram Charan) ಅವರು ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಾ ಇರುತ್ತಾರೆ. ಅವರು ಮಾಡುವ ಸಾಮಾಜಿಕ ಕೆಲಸ ಅನೇಕರ ಗಮನ ಸೆಳೆಯುತ್ತದೆ. ಈಗ ಅವರು ‘ಪೆದ್ದಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಇದು ಸ್ಪೋರ್ಟ್ಸ್ ಹಾಗೂ ಆ್ಯಕ್ಷನ್ ಡ್ರಾಮಾ ಸ್ಟೈಲ್ನಲ್ಲಿ ಮೂಡಿ ಬರುತ್ತಿದೆ. ಬುಚಿ ಬಾಬು ಸನಾ (Buchibabu Sana) ಅವರು ಇದನ್ನು ನಿರ್ದೇಶನ ಮಾಡುತ್ತಿದ್ದಾರೆ. ದೊಡ್ಡ ಬಜೆಟ್ನ ಈ ಚಿತ್ರವನ್ನು ವೆಂಕಟ್ ಸತೀಶ್ ಕಿಲಾರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಶೂಟ್ ಆರಂಭ ಆಗಿದ್ದು, ರಾಮ್ ಚರಣ್ ಕಡೆಯಿಂದ ನಿರ್ದೇಶಕನಿಗೆ ಗಿಫ್ಟ್ ಸಿಕ್ಕಿದೆ.
ರಾಮ್ ಚರಣ್ ಅವರು ಆಪ್ತರಿಗೆ ಸದಾ ಒಂದಿಲ್ಲೊಂದು ಉಡುಗೊರೆಯನ್ನು ನೀಡುತ್ತಾ ಇರುತ್ತಾರೆ. ಈಗ ಅವರು ಬುಚಿ ಬಾಬು ಸನಾಗೆ ಉಡುಗೊರೆ ನೀಡಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಬರ್ತ್ಡೇ. ಹೌದು, ರಾಮ್ ಚರಣ್ ತಮ್ಮ ಜನ್ಮದಿನದ ಪ್ರಯುಕ್ತ ಟ್ರಾವೆಲ್ ಕಿಟ್, ಹನುಮಾನ್ ಮಾಸ್ಕ್ ಹಾಗೂ ಹನುಮಾನ್ ಚಾಲಿಸಾನ ಬುಚಿ ಬಾಬು ಸನಾಗೆ ನೀಡಿದ್ದಾರೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಅವರು ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ, ನಟನನ್ನು ಅವರು ಕೊಂಡಾಡಿದ್ದಾರೆ.
ರಾಮ್ ಚರಣ್ ಅವರು ಮಾರ್ಚ್ 27ರಂದು ಬರ್ತ್ಡೇನ ಆಚರಿಸಿಕೊಂಡರು. ಇವರ ಬರ್ತ್ಡೇ ಪ್ರಯುಕ್ತ ‘ಪೆದ್ದಿ’ ಸಿನಿಮಾದ ಟೈಟಲ್ ರಿಲೀಸ್ ಆಗಿದೆ. ಇದು ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ. ಏಪ್ರಿಲ್ 6ರಂದು ಸಿನಿಮಾದ ಶೂಟ್ ಆರಂಭ ಆಗಲಿದೆ. ರಾಮ ನವಮಿ ಪ್ರಯುಕ್ತ ಚಿತ್ರದ ಶೂಟ್ ಆರಂಭ ಆಗಲಿದೆ.
View this post on Instagram
ಬುಚಿ ಬಾಬು ಸನಾ ಅವರು ‘ಉಪ್ಪೇನಾ’ ಸಿನಿಮಾ ಮೂಲಕ ಫೇಮಸ್ ಆದವರು. ಕೃತಿ ಶೆಟ್ಟಿ, ವಿಜಯ್ ಸೇತುಪತಿ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಚಿತ್ರ. ಇದಾದ ಬಳಿಕ ಅವರು ನಿರ್ದೇಶನ ಮಾಡುತ್ತಾ ಇರುವ ಎರಡನೇ ಸಿನಿಮಾ ಇದಾಗಿದೆ. ಈ ಕಾರಣದಿಂದಲೂ ಸಿನಿಮಾ ಬಗ್ಗೆ ನಿರೀಕ್ಷೆ ಇದೆ.
ರಾಮ್ ಚರಣ್ ನಟನೆಯ ‘ಆರ್ಆರ್ಆರ್’ ಹಿಟ್ ಆಯಿತು. ಆ ಬಳಿಕ ಬಂದ ‘ಆಚಾರ್ಯ’ ಹಾಗೂ ‘ಗೇಮ್ ಚೇಂಜರ್’ ಚಿತ್ರಗಳು ಸೋತು ಸುಣ್ಣ ಆಗಿವೆ. ಈಗ ಅವರ ಈ ಚಿತ್ರವಾದರೂ ಹಿಟ್ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ