ರಾಮ್ ಚರಣ್ ಪತ್ನಿಯಿಂದ ಜಾನ್ವಿ ಕಪೂರ್ಗೆ ಸಿಕ್ತು ವಿಶೇಷ ಗಿಫ್ಟ್
Ram Charan-Upasana Konidela: ರಾಮ್ ಚರಣ್ ಮತ್ತು ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ಹೊಸ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಇದೇ ಸಿನಿಮಾನಲ್ಲಿ ಶಿವರಾಜ್ ಕುಮಾರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ನಾಯಕಿ ಜಾನ್ಹವಿ ಕಪೂರ್ಗೆ ರಾಮ್ ಚರಣ್ ಪತ್ನಿ, ಉದ್ಯಮಿ ಉಪಾಸನಾ ಕೋನಿಡೆಲ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಏನು ಆ ಉಡುಗೊರೆ ಇಲ್ಲಿದೆ ನೋಡಿ ಮಾಹಿತಿ...

ರಾಮ್ ಚರಣ್ ನಟನೆಯ ‘ಆರ್ಸಿ 16’ ಚಿತ್ರದ ಶೂಟ್ ಭರದಿಂದ ಸಾಗುತ್ತಿದೆ. ಬುಚಿ ಬಾಬು ಸನಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಾ ಇದ್ದಾರೆ. ಜಾನ್ವಿ ಕಪೂರ್ ಅವರು ಈ ಚಿತ್ರಕ್ಕೆ ನಾಯಕಿ. ಸದ್ಯ ಹೈದರಾಬಾದ್ನಲ್ಲಿ ಚಿತ್ರದ ಶೂಟ್ ಭರದಿಂದ ಸಾಗುತ್ತಿದೆ ಎನ್ನಲಾಗಿದೆ. ರಾಮ್ ಚರಣ್ ಸಿನಿಮಾ ಸೆಟ್ನಲ್ಲಿ ಜಾನ್ವಿ ಕಪೂರ್ ಅವರಿಗೆ ಈಗ ವಿಶೇಷ ಗಿಫ್ಟ್ ಸಿಕ್ಕಿದೆ. ರಾಮ್ ಚರಣ್ ಪತ್ನಿ ಉಪಾಸನಾ ಅವರು ಈ ಉಡುಗೊರೆಯನ್ನು ಕೊಟ್ಟಿದ್ದಾರೆ.
ಸೆಟ್ನ ಬ್ರೇಕ್ ಸಂದರ್ಭದಲ್ಲಿ ಜಾನ್ವಿ ಅವರನ್ನು ಉಪಾಸನಾ ಅವರು ಭೇಟಿ ಆಗಿದ್ದಾರೆ. ಈ ವೇಳೆ ‘ಅತ್ತಮ್ಮಾ ಕಿಚನ್’ ಕಡೆಯಿಂದ ಬಾಕ್ಸ್ ನೀಡಲಾಗಿದೆ. ರಾಮ್ ಚರಣ್ ತಾಯಿ ಸುರೇಖಾ ಕೊನಿಡೆಲಾ ಅವರು ಮಾಡಿರುವ ವಿಶೇಷ ರೆಸಿಪಿ ಇದಾಗಿದೆ. ಈ ಕ್ಲೌಡ್ ಕಿಚನ್ ಕಡೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ಹಂಚಿಕೊಳ್ಳಲಾಗಿದೆ.
ಜಾನ್ವಿ ಕಪೂರ್ ಅವರು ಅನೇಕ ಬ್ರ್ಯಾಂಡ್ಗಳ ಪ್ರಚಾರ ಮಾಡುತ್ತಾ ಇದ್ದಾರೆ. ಈಗ ಅವರು ಈ ಬ್ರ್ಯಾಂಡ್ನ ಪ್ರಚಾರವನ್ನು ಕೂಡ ಮಾಡುತ್ತಾರಾ ಎನ್ನುವ ಕುತೂಹಲ ಮೂಡಿದೆ. ಆ ಬಗ್ಗೆಯೂ ಮುಂದಿನ ದಿನಗಳಲ್ಲು ಮಾತುಕತೆ ನಡೆಯಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಬಯಸುತ್ತಾ ಇದ್ದಾರೆ.
ಇದನ್ನೂ ಓದಿ:ರಾಮ್ ಚರಣ್ ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆ ಎಂಎಸ್ ಧೋನಿ?
‘ಆರ್ಸಿ 16’ ಶೂಟಿಂಗ್ ಭರದಿಂದ ಸಾಗುತ್ತಿದೆ. ಶೀಘ್ರವೇ ತಂಡ ದೆಹಲಿಗೆ ಹಾರಲಿದೆ. ಜಮಾ ಮಸೀದಿಯಲ್ಲಿ ಶೂಟ್ ನಡೆಯಲಿದೆ. ಇದರ ಜೊತೆಗೆ ಸಂಸತ್ತಿನಲ್ಲೂ ಶೂಟಿಂಗ್ ನಡೆಯಲಿದೆ ಎಂದು ಹೇಳಲಾಗುತ್ತಿದೆಯಾದರೂ ಇದರ ಮಾಹಿತಿ ಇನ್ನೂ ರಿವೀಲ್ ಆಗಿಲ್ಲ.
ರಾಮ್ ಚರಣ್ ಅವರು ಸಾಲು ಸಾಲು ಸೋಲು ಕಂಡಿದ್ದಾರೆ. ಅವರ ನಟನೆಯ ‘ಆರ್ಆರ್ಆರ್’ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ರಿಲೀಸ್ ಆದ ‘ಆಚಾರ್ಯ’ ಹೀನಾಯ ಸೋಲು ಕಂಡರೆ, ‘ಗೇಮ್ ಚೇಂಜರ್’ ಕೂಡ ಸಾಧಾರಣ ಎನಿಸಿಕೊಂಡಿತು. ಈಗ ಅವರ ಮುಂದಿನ ಚಿತ್ರ ಗೆಲ್ಲಲೇಬೇಕಿದೆ. ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದೆ. ಈ ಚಿತ್ರಕ್ಕೆ ಎಆರ್ ರೆಹಮಾನ್ ಅವರು ಸಂಗೀತ ಸಂಯೋಜನೆ ಮಾಡುತ್ತಾ ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ