‘ದೇವರ’ ವರ್ಸಸ್​ ‘ಗೇಮ್​ ಚೇಂಜರ್​’: ಜೂ. ಎನ್​ಟಿಆರ್​-ರಾಮ್​ ಚರಣ್​ ನಡುವೆ ಪೈಪೋಟಿ

ಹಿಂದಿ ಪ್ರೇಕ್ಷಕರ ವಲಯದಲ್ಲಿ ಜೂನಿಯರ್​ ಎನ್​ಟಿಆರ್​ ಮತ್ತು ರಾಮ್​ ಚರಣ್​ ಅವರಿಗೆ ದೊಡ್ಡ ಫ್ಯಾನ್​​ ಫಾಲೋಯಿಂಗ್​ ಇದೆ. ರಾಮ್​ ಚರಣ್​ ನಟನೆಯ ‘ಗೇಮ್​ ಚೇಂಜರ್​’ ಹಾಗೂ ಜೂನಿಯರ್​ ಎನ್​ಟಿಆರ್​ ಅಭಿನಯದ ‘ದೇವರ’ ಸಿನಿಮಾ ಹಿಂದಿ ವರ್ಷನ್​ನ ವಿತರಣಾ ಹಕ್ಕುಗಳು ಬಹುಕೋಟಿ ರೂಪಾಯಿಗೆ ಮಾರಾಟ ಆಗಿವೆ. ಆ ಬಗ್ಗೆ ಇಂಟರೆಸ್ಟಿಂಗ್​ ವಿಷಯ ಕೇಳಿಬರುತ್ತಿವೆ.

‘ದೇವರ’ ವರ್ಸಸ್​ ‘ಗೇಮ್​ ಚೇಂಜರ್​’: ಜೂ. ಎನ್​ಟಿಆರ್​-ರಾಮ್​ ಚರಣ್​ ನಡುವೆ ಪೈಪೋಟಿ
ಜೂನಿಯರ್​ ಎನ್​ಟಿಆರ್​, ರಾಮ್​ ಚರಣ್​

Updated on: Apr 18, 2024 | 11:01 PM

ದಕ್ಷಿಣ ಭಾರತದ ಸಿನಿಮಾಗಳನ್ನು ದಕ್ಷಿಣದ ಮಂದಿ ಇಷ್ಟಪಡುತ್ತಿದ್ದಾರೆ. ಅದರಲ್ಲೂ ‘ಬಾಹುಬಲಿ’, ‘ಕೆಜಿಎಫ್​ 2’, ‘ಆರ್​ಆರ್​ಆರ್​’ (RRR) ಮುಂತಾದ ಸಿನಿಮಾಗಳು ಹಿಂದಿ ವರ್ಷನ್​ನಲ್ಲಿ ಧೂಳೆಬ್ಬಿಸಿದ ಬಳಿಕ ಸೌತ್​ ಸಿನಿಮಾಗಳಿಗೆ ದಕ್ಷಿಣ ಭಾರತದಲ್ಲಿ ಬೇಡಿಕೆ ಹೆಚ್ಚಿದೆ. ಈಗ ತೆಲುಗಿನ ಎರಡು ಬಹುಬೇಡಿಕೆಯ ಸಿನಿಮಾಗಳಾದ ಗೇಮ್​ ಚೇಂಜರ್​’ (Ram Charan) ಹಾಗೂ ‘ದೇವರ’ (Devara) ಚಿತ್ರಗಾಗಿ ಹಿಂದಿ ಪ್ರೇಕ್ಷಕರು ಕಾದಿದ್ದಾರೆ. ಉತ್ತರ ಭಾರತದಲ್ಲಿ ಈ ಸಿನಿಮಾಗಳ ವಿತರಣೆ ಹಕ್ಕುಗಳು ಬಹುಕೋಟಿ ರೂಪಾಯಿಗೆ ಮಾರಾಟ ಆಗಿರುವ ಬಗ್ಗೆ ಸುದ್ದಿ ಕೇಳಿಬಂದಿದೆ.

ವಿಶೇಷ ಏನೆಂದರೆ, ‘ಆರ್​ಆರ್​ಆರ್​’ ಸಿನಿಮಾದಲ್ಲಿ ರಾಮ್​ ಚರಣ್​ ಮತ್ತು ಜೂನಿಯರ್​ ಎನ್​ಟಿಆರ್​ ಅವರು ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಆ ಸಿನಿಮಾ ಹಿಂದಿ ವರ್ಷನ್​ನಲ್ಲೂ ಮೋಡಿ ಮಾಡಿತ್ತು. ಹಾಗಾಗಿ ರಾಮ್​ ಚರಣ್​ ಮತ್ತು ಜೂನಿಯರ್​ ಎನ್​ಟಿಆರ್​ ಅವರಿಗೆ ಹಿಂದಿ ಪ್ರೇಕ್ಷಕರ ವಲಯದಲ್ಲಿ ಅಭಿಮಾನಿ ಬಳಗ ದೊಡ್ಡದಾಗಿದೆ. ಅವರ ಮುಂಬರುವ ಸಿನಿಮಾಗಳ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ.

ಅಂದು ರಾಮ್​ ಚರಣ್​ ಫೋಟೋ ಲೀಕ್​, ಇಂದು ‘ಗೇಮ್​ ಚೇಂಜರ್​’ ಕಥೆಯೇ ಬಹಿರಂಗ

ವರದಿಗಳ ಪ್ರಕಾರ, ರಾಮ್​ ಚರಣ್​ ನಟನೆಯ ‘ಗೇಮ್​ ಚೇಂಜರ್​’ ಸಿನಿಮಾದ ಉತ್ತರ ಭಾರತದ ವಿತರಣೆ ಹಕ್ಕುಗಳು ಬರೋಬ್ಬರಿ 75 ಕೋಟಿ ರೂಪಾಯಿಗೆ ಮಾರಾಟ ಆಗಿವೆ. ಈ ಸಿನಿಮಾಗೆ ಶಂಕರ್​ ನಿರ್ದೇಶನ ಮಾಡುತ್ತಿದ್ದಾರೆ. ಕಿಯಾರಾ ಅಡ್ವಾಣಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಚುನಾವಣೆ ಕುರಿತ ಕಹಾನಿ ಈ ಸಿನಿಮಾದಲ್ಲಿ ಇರಲಿದೆ. ರಾಮ್​ ಚರಣ್​ ಮತ್ತು ಶಂಕರ್ ಕಾಂಬಿನೇಷನ್​ ಎಂಬ ಕಾರಣದಿಂದ ಹೈಪ್​ ಹೆಚ್ಚಿದೆ.

105 ಕೋಟಿ ರೂಪಾಯಿಗೆ ‘ಗೇಮ್​ ಚೇಂಜರ್​’ ಸಿನಿಮಾದ ಒಟಿಟಿ ಪ್ರಸಾರ ಹಕ್ಕು ಮಾರಾಟ?

‘ದೇವರ’ ಸಿನಿಮಾದ ಹಿಂದಿ ವಿತರಣೆ ಹಕ್ಕುಗಳು 50 ಕೋಟಿ ರೂಪಾಯಿಗೆ ಸೇಲ್​ ಆಗಿವೆ ಎನ್ನಲಾಗಿದೆ. ಅನಿಲ್​ ತಟಾನಿ ಅವರು ಹಕ್ಕುಗಳನ್ನು ಖರೀದಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಜಾನ್ವಿ ಕಪೂರ್​ ನಟಿಸುತ್ತಿದ್ದಾರೆ. ಕೊರಟಾಲ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಜೂನಿಯರ್​ ಎನ್​ಟಿಆರ್​ ಅವರ ಅಭಿಮಾನಿಗಳು ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ಕಾದು ನೋಡಬೇಕು. ಈ ಸಿನಿಮಾದ ಬಳಿಕ ಜೂನಿಯರ್​ ಎನ್​ಟಿಆರ್​ ಅವರು ನೇರವಾಗಿ ಬಾಲಿವುಡ್​ಗೆ ಕಾಲಿಡುತ್ತಾರೆ. ‘ವಾರ್​ 2’ ಸಿನಿಮಾದಲ್ಲಿ ಅವರು ಹೃತಿಕ್​ ರೋಷನ್​ ಜೊತೆ ನಟಿಸುತ್ತಿದ್ದಾರೆ. ಅದರ ಶೂಟಿಂಗ್​ ಈಗಾಗಲೇ ಭರದಿಂದ ಸಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.