AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆಯ ಶ್ರೀರಾಮ ಮಂದಿರದ ಕುರಿತು ಕನ್ನಡದಲ್ಲಿ ಬರಲಿದೆ ಅದ್ದೂರಿ ಸಿನಿಮಾ

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಆಗಿದ್ದರ ಹಿಂದೆ ನೂರಾರು ವರ್ಷಗಳ ದೀರ್ಘ ಇತಿಹಾಸವಿದೆ. ರಾಮ ಮಂದಿರಕ್ಕಾಗಿ ನಡೆದ ಹೋರಾಟಗಳಿಗೆ ಲೆಕ್ಕವಿಲ್ಲ. ಬಾಬರಿ ಮಸೀದಿ​ ಮತ್ತು ರಾಮ ಮಂದಿರದ ನಡುವಿನ ಜಟಾಪಟಿ ಹಲವು ದಶಕಗಳ ಕಾಲ ನಡೆದು ಬಂದಿತ್ತು. ಆ ಇತಿಹಾಸವನ್ನು ಇಟ್ಟುಕೊಂಡು ಕನ್ನಡದಲ್ಲಿ ಸಿನಿಮಾ ಮಾಡಲಾಗುತ್ತಿದೆ.

ಅಯೋಧ್ಯೆಯ ಶ್ರೀರಾಮ ಮಂದಿರದ ಕುರಿತು ಕನ್ನಡದಲ್ಲಿ ಬರಲಿದೆ ಅದ್ದೂರಿ ಸಿನಿಮಾ
ಶ್ರೀನಿವಾಸ್​ ರಾಜು, ರಾಮ ಮಂದಿರ, ಪ್ರಶಾಂತ್ ಜಿ. ರುದ್ರಪ್ಪ
ಮದನ್​ ಕುಮಾರ್​
|

Updated on: Apr 18, 2024 | 9:32 PM

Share

ದೇಶದೆಲ್ಲೆಡೆ ರಾಮ ನವಮಿಯನ್ನು ಸಂಭ್ರಮದಿಂದ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಕನ್ನಡದಲ್ಲೊಂದು ಹೊಸ ಸಿನಿಮಾ (Kannada Cinema) ಅನೌನ್ಸ್​ ಮಾಡಲಾಗಿದೆ. ಅಯೋಧ್ಯೆಯ ಶ್ರೀರಾಮ ಮಂದಿರ (Ayodhya Ram Mandir) ಕುರಿತು ಈ ಸಿನಿಮಾ ಮೂಡಿಬರಲಿದೆ. ಹಾಗಾಗಿ ಚಿತ್ರತಂಡದವರು ಇದನ್ನು ರಾಮ ಮಂದಿರದ ಬಯೋಪಿಕ್ ಎಂದು ಕರೆಯುತ್ತಿದ್ದಾರೆ. ನಿರ್ದೇಶಕ ಶ್ರೀನಿವಾಸ್​ ರಾಜು (Srinivas Raju) ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಸದ್ಯಕ್ಕೆ ಈ ಸಿನಿಮಾಗೆ ಶೀರ್ಷಿಕೆ ಅಂತಿಮವಾಗಿಲ್ಲ. ‘ಸತ್ಯಂ ಶಿವಂ ಸುಂದರಂ’ ಎನ್ನುವ ಟ್ಯಾಗ್​ಲೈನ್​ ಇದೆ. ‘ಗೋಲ್ಡನ್​ ಸ್ಟಾರ್​’ ಗಣೇಶ್​ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾವನ್ನು ನಿರ್ಮಿಸಿರುವ ಪ್ರಶಾಂತ್ ಜಿ. ರುದ್ರಪ್ಪ ಅವರು ‘ತ್ರಿಶೂಲ್ ಎಂಟರ್ಟೈನ್ಮೆಂಟ್’ ಸಂಸ್ಥೆಯ ಮೂಲಕ ರಾಮ ಮಂದಿರದ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಿದ್ದರ ಹಿಂದೆ ನೂರಾರು ವರ್ಷಗಳ ಇತಿಹಾಸ ಇದೆ. ಅನೇಕ ಹೋರಾಟಗಳ ಕಹಾನಿ ಇದೆ. ಬಾಬರಿ ಮಸೀದಿ​ ವರ್ಸಸ್​ ರಾಮ ಮಂದಿರದ ಜಟಾಪಟಿ ಹಲವಾರು ವರ್ಷಗಳ ಕಾಲ ನಡೆದು ಬಂತು. ಅಂತಿಮವಾಗಿ ಆ ಜಾಗದಲ್ಲಿ ರಾಮ ಮಂದಿರದ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್​ ಅನುಮತಿ ನೀಡಿತು. ಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಆದ ಬಳಿಕ ಈ ವರ್ಷ ಮೊದಲ ಬಾರಿ ರಾಮ ನವಮಿ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡದವರು ಈ ಘೋಷಣೆ ಮಾಡಿದ್ದಾರೆ.

ನಿರ್ದೇಶಕರ ಮಾತು:

‘ಈ ಸಿನಿಮಾದಲ್ಲಿ ಅಂದಾಜು 500 ವರ್ಷಗಳ ಇತಿಹಾಸವನ್ನು ಪರದೆ ಮೇಲೆ ತರಲು ಪ್ರಯತ್ನ ಮಾಡುತ್ತಿದ್ದೇನೆ. ಕನ್ನಡದಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ. ಬಾಬರಿ ಮಸೀದಿಗೂ ಮೊದಲು ರಾಜಾ ವಿಕ್ರಮಾದಿತ್ಯ ಶ್ರೀರಾಮ ಮಂದಿರವನ್ನು ಸ್ಥಾಪಿಸಿದ ಕಾಲದಿಂದ ಈ ಸಿನಿಮಾ ಕಥೆ ಆರಂಭ ಆಗುತ್ತದೆ. ಅದರ ಜೊತೆಗೆ ರಾಮಾಯಣದ ಒಂದಷ್ಟು ಅಂಶಗಳು ಇರಲಿವೆ. ಆದರೆ ಇದು ಸಂಪೂರ್ಣ ರಾಮಾಯಣದ ಕಥೆಯಿರುವ ಸಿನಿಮಾ ಅಲ್ಲ. ರಾಮ, ಸೀತೆ, ಹನುಮಂತ, ದಶರಥ, ವಾಲಿ ಮತ್ತು ವಾಲ್ಮೀಕಿ ಪಾತ್ರಗಳ ಜೊತೆ ತುಳಿಸಿದಾಸರ ಪಾತ್ರ ಸಹ ಇರಲಿವೆ’ ಎಂದು ಶ್ರೀನಿವಾಸ್​ ರಾಜು ಹೇಳಿದ್ದಾರೆ.

ಇದನ್ನೂ ಓದಿ: Ram Navami 2024: ಅಯೋಧ್ಯೆ ರಾಮ ಮಂದಿರದಲ್ಲಿ ಸೂರ್ಯರಶ್ಮಿ ಪ್ರಯೋಗ, ಎಲ್ಲೆಲ್ಲಿ ನಡೆದಿದೆ ಈ ಪ್ರಯೋಗ?

‘ಶ್ರೀರಾಮನ ಆದರ್ಶ ಗುಣಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ. ‘ಸತ್ಯಂ ಶಿವಂ ಸುಂದರಂ’ ಎಂಬ ಟ್ಯಾಗ್ ಲೈನ್ ಈ ಸಿನಿಮಾಗೆ ಇದೆ. 3 ಭಾಗಗಳಲ್ಲಿ ಸಿನಿಮಾ ಬರುತ್ತದೆ. ಟೈಟಲ್​ ಇನ್ನು ನಿಗದಿ ಆಗಿಲ್ಲ. ಈ ಸಿನಿಮಾ ತುಂಬ ಅದ್ದೂರಿಯಾಗಿ ನಿರ್ಮಾಣ ಆಗಲಿದೆ. ಭಾರತೀಯ ಚಿತ್ರರಂಗದ ಹೆಸರಾಂತ ಕಲಾವಿದರು ಮತ್ತು ತಂತ್ರಜ್ಞರು ಈ ಚಿತ್ರದಲ್ಲಿ ಇರಲಿದ್ದಾರೆ’ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ