ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರ ಶೈಲಿಯೇ ಭಿನ್ನ. ಅವರು ಸಿನಿಮಾ ಮಾಡಿದರೆ ಅದರಲ್ಲಿ ಏನಾದರೊಂದು ಕಿರಿಕ್ ಇದ್ದೇ ಇರುತ್ತದೆ. ಸಿನಿಮಾ ಆದರೂ ಸರಿ, ರಿಯಲ್ ಲೈಫ್ ಆದರೂ ಸರಿ.. ಆಗಾಗ ಅವರು ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗ ಅವರು ನಿರ್ದೇಶನ ಮಾಡಿರುವ ‘ಲಡ್ಕಿ’ ಸಿನಿಮಾ (Ladki Movie) ಬಿಡುಗಡೆಗೆ ಸಜ್ಜಾಗಿದೆ. ಕನ್ನಡಕ್ಕೂ ಈ ಚಿತ್ರ ಡಬ್ ಆಗಿದ್ದು, ‘ಹುಡುಗಿ’ ಎಂದು ಹೆಸರು ಇಡಲಾಗಿದೆ. ಈ ಸಿನಿಮಾದಲ್ಲಿ ಪೂಜಾ ಭಾಲೇಕರ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ತುಂಬ ಬೋಲ್ಡ್ ಆಗಿ ಅವರು ನಟಿಸಿದ್ದಾರೆ ಎಂಬುದಕ್ಕೆ ಟ್ರೇಲರ್ ಮತ್ತು ಪೋಸ್ಟರ್ಗಳು ಸಾಕ್ಷಿ ಒದಗಿಸಿವೆ. ಈ ಸಿನಿಮಾ ನೋಡಿದ ಸೆನ್ಸಾರ್ ಮಂಡಳಿಯವರು (Censor Board) ಸುಸ್ತ್ ಆಗಿದ್ದಾರೆ. ಹತ್ತು ಹಲವು ಕಡೆಗಳಲ್ಲಿ ಕತ್ತರಿ ಹಾಕುವಂತೆ ನಿರ್ದೇಶಕರಿಗೆ ಸೆನ್ಸಾರ್ ಮಂಡಳಿ ಸದಸ್ಯರು ಸೂಚನೆ ನೀಡಿದ್ದಾರೆ.
ಮಾರ್ಷಲ್ ಆರ್ಟ್ಸ್ ಕುರಿತಾಗಿ ‘ಲಡ್ಕಿ’ ಸಿನಿಮಾ ಮೂಡಿಬಂದಿದೆ. ಆದರೂ ಇದರಲ್ಲಿ ಸಿಕ್ಕಾಪಟ್ಟೆ ಹಸಿಬಿಸಿ ದೃಶ್ಯಗಳು ಇವೆ ಎನ್ನಲಾಗಿದೆ. ಅದೇ ರೀತಿ, ಸಂಭಾಷಣೆಗಳು ಕೂಡ ತುಂಬಾ ಬೋಲ್ಡ್ ಆಗಿವೆ. ಹಲವು ಸಂಭಾಷಣೆಗಳನ್ನು ಮ್ಯೂಟ್ ಮಾಡಬೇಕು, ನಾಯಕಿಯ ಎದೆಸೀಳನ್ನು ತೀರಾ ಕ್ಲೋಸಪ್ನಲ್ಲಿ ತೋರಿಸಿದ 12 ದೃಶ್ಯಗಳನ್ನು ಡಿಲೀಟ್ ಮಾಡಬೇಕು ಎಂದು ಸೆನ್ಸಾರ್ ಮಂಡಳಿಯವರು ಸೂಚಿಸಿದ್ದಾರೆ ಎಂದು ‘ಬಾಲಿವುಡ್ ಹಂಗಾಮಾ’ ವರದಿ ಮಾಡಿದೆ.
ನಾಯಕಿಯ ಬಟ್ಟೆಯನ್ನು ವಿಲನ್ ಕಿತ್ತೆಸೆಯುವ ದೃಶ್ಯ ಇದೆ. ಇದರಲ್ಲಿನ ಶೇ. 50ರಷ್ಟು ಶಾಟ್ಸ್ ಡಿಲೀಟ್ ಮಾಡಬೇಕು. ನಾಯಕಿಯ ದೇಹದ ಅಂಗಗಳನ್ನು ವಿಲನ್ ಕೆಟ್ಟದಾಗಿ ನೋಡುವ ದೃಶ್ಯಗಳನ್ನೂ ತೆಗೆದುಹಾಕಬೇಕು ಎಂದು ಸೆನ್ಸಾರ್ ಮಂಡಳಿಯವರು ತಿಳಿಸಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲ ತೆಗೆದು ಹಾಕಿದ ಮೇಲೆ ಸಿನಿಮಾದಲ್ಲಿ ಇನ್ನೇನು ಉಳಿಯಲಿದೆ ಎಂದು ಸಿನಿಪ್ರಿಯರು ಕೇಳುತ್ತಿದ್ದಾರೆ.
LADKI has the world’s 1st martial arts fight ever to be shot in a BIKINI ..Here’s a promo ..Check out @PoojaBofficial ‘s intensity pic.twitter.com/JcrOusZWTk
— Ram Gopal Varma (@RGVzoomin) July 14, 2022
‘ಲಡ್ಕಿ’ ಸಿನಿಮಾಗೆ ‘ಎ’ ಪ್ರಮಾಣ ಪತ್ರ ನೀಡಲಾಗಿದೆ. ಜುಲೈ 15ರಂದು ರಿಲೀಸ್ ಆಗುತ್ತಿರುವ ಈ ಸಿನಿಮಾ ಮೇಲೆ ರಾಮ್ ಗೋಪಾಲ್ ವರ್ಮಾ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚೀನಾದಲ್ಲೂ ಈ ಚಿತ್ರ ಬಿಡುಗಡೆ ಆಗುತ್ತಿದೆ ಎಂಬುದು ವಿಶೇಷ. ಹಲವು ವರ್ಷಗಳಿಂದ ಮಾರ್ಷಲ್ ಆರ್ಟ್ಸ್ ಕಲಿತಿರುವ ಪೂಜಾ ಭಾಲೇಕರ್ ಅವರಿಗೆ ಈ ಸಿನಿಮಾದಿಂದ ದೊಡ್ಡ ಮಟ್ಟದ ಜನಪ್ರಿಯತೆ ಸಿಗುತ್ತಿದೆ.
Published On - 2:31 pm, Thu, 14 July 22