Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೊಡ್ಡ ಪರದೆಯಲ್ಲೂ ವೀಕ್ಷಿಸಬಹದು ರಾಮ ಮಂದಿರ ಕಾರ್ಯಕ್ರಮ; 100 ರೂ. ಟಿಕೆಟ್

ಬುಕ್ ಮೈ ಶೋನಲ್ಲಿ ಇನ್ನೂ ಟಿಕೆಟ್​ ಬುಕಿಂಗ್ ಆರಂಭ ಆಗಿಲ್ಲ. ಇದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.  

ದೊಡ್ಡ ಪರದೆಯಲ್ಲೂ ವೀಕ್ಷಿಸಬಹದು ರಾಮ ಮಂದಿರ ಕಾರ್ಯಕ್ರಮ; 100 ರೂ. ಟಿಕೆಟ್
ರಾಮ ಮಂದಿರ
Follow us
ರಾಜೇಶ್ ದುಗ್ಗುಮನೆ
|

Updated on:Jan 20, 2024 | 6:51 AM

ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ (Rama Mandira) ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಕೋಟ್ಯಂತರ ಮಂದಿ ಸಾಕ್ಷಿ ಆಗಲಿದ್ದಾರೆ. ಕೆಲವರು ಅಯೋಧ್ಯೆಗೆ ತೆರಳಲು ಸಿದ್ಧತೆ ಮಾಡಿಕೊಂಡರೆ ಇನ್ನೂ ಕೆಲವರು ಟಿವಿಯಲ್ಲಿ ಇದನ್ನು ವೀಕ್ಷಿಸಲಿದ್ದಾರೆ. ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ಈ ಕಾರ್ಯಕ್ರಮವನ್ನು ನೀವು ದೊಡ್ಡಪರದೆಯಲ್ಲೂ ವೀಕ್ಷಿಸಬಹುದು. ಇದಕ್ಕೆ ಪಿವಿಆರ್​ ಹಾಗೂ ಐನಾಕ್ಸ್ ಅವಕಾಶ ಮಾಡಿಕೊಡುತ್ತಿವೆ.

ಜನವರಿ 22ರಂದು ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ತೆರಳುವ ಅವಕಾಶ ಎಲ್ಲರಿಗೂ ಇರುವುದಿಲ್ಲ. ಹೀಗಾಗಿ, ಪಿವಿಆರ್​ ಹಾಗೂ ಐನಾಕ್ಸ್ ದೇಶದ ಪ್ರಮುಖ 70 ನಗರಗಳಲ್ಲಿ 170ಕ್ಕೂ ಅಧಿಕ ಕೇಂದ್ರಗಳಲ್ಲಿ ಈ ಕಾರ್ಯಕ್ರಮವನ್ನು ಲೈವ್ ಪ್ರಸಾರ ಮಾಡಲಿದೆ. ಬೆಳಿಗ್ಗೆ 11 ಗಂಟೆಯಿಂದ ಆರಂಭ ಆಗಿ, ಮಧ್ಯಾಹ್ನ 3 ಗಂಟೆವರೆಗೆ ಈ ಕಾರ್ಯಕ್ರಮ ವೀಕ್ಷಿಸಬಹುದು. ಇದಕ್ಕೆ ಕೇವಲ 100 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಇದು ಕೇವಲ ಸಿನಿಮಾ ಟಿಕೆಟ್ ದರ ಅಲ್ಲ, ಇದರಲ್ಲಿ ತಂಪು ಪಾನೀಯ ಹಾಗೂ ಪಾಪ್​ಕಾರ್ನ್​ ಕಾಂಬೋದ ಹಣವೂ ಸೇರಿದೆ ಅನ್ನೋದು ವಿಶೇಷ. ಈ ಮೊದಲು ಪಿವಿಆರ್ ವಿಶ್ವಕಪ್ ಕ್ರಿಕೆಟ್​ನ ಲೈವ್ ಪ್ರಸಾರ ಮಾಡಿತ್ತು.

ಇದೊಂದು ಐತಿಹಾಸಿಕ ಕ್ಷಣ. ಹೀಗಾಗಿ ಇದನ್ನು ದೊಡ್ಡ ಪರದೆಯಲ್ಲಿ ನೋಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಪಿವಿಆರ್​ ಐನಾಕ್ಸ್​ನ ಸಹ ಸಿಇಒ ಗೌತಮ್ ದತ್ತ ಹೇಳಿದ್ದಾರೆ. ಬುಕ್ ಮೈ ಶೋನಲ್ಲಿ ಇನ್ನೂ ಟಿಕೆಟ್​ ಬುಕಿಂಗ್ ಆರಂಭ ಆಗಿಲ್ಲ. ಇದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಶ್ರೀರಾಮ ಕರೆ ಕಳಿಸಿದ್ದಾನೆ; ನನ್ನ ಪೂರ್ವಜನ್ಮದ ಪುಣ್ಯ’: ಅಯೋಧ್ಯೆಯ ಆಹ್ವಾನ ಸ್ವೀಕರಿಸಿದ ರಿಷಬ್​ ಶೆಟ್ಟಿ

ರಣಬೀರ್ ಕಪೂರ್, ಅಮಿತಾಭ್ ಬಚ್ಚನ್, ರಿಷಬ್ ಶೆಟ್ಟಿ, ಯಶ್​, ಕಂಗನಾ ರಣಾವತ್, ಆಲಿಯಾ ಭಟ್ ಸೇರಿ ಚಿತ್ರರಂಗದ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್​, ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್​ ಅವರಂಥ ಗಣ್ಯರೂ ಇರಲಿದ್ದಾರೆ. ಜನವರಿ 22ರಂದು ಮಧ್ಯಾಹ್ನ 12:15ರಿಂದ ಕಾರ್ಯಕ್ರಮ ಆರಂಭ ಆಗಿ 12:45ಕ್ಕೆ ಪೂರ್ಣಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:33 am, Sat, 20 January 24