Ramayana Movie: ‘ರಾಮಾಯಣ’ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಸಿಕ್ತು ದೃಶ್ಯವೈಭವದ ರಿಪೋರ್ಟ್

Ramayana Movie First Half Review: ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ‘ರಾಮಾಯಣ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಪ್ರತಿ ಪ್ರೇಮ್​ನಲ್ಲೂ ಅದ್ದೂರಿತನ ಕಾಣಿಸುತ್ತಿದೆ. ಪೌರಾಣಿಕ ಪಾತ್ರಗಳಿಗೆ ಯಶ್, ಸಾಯಿ ಪಲ್ಲವಿ, ರಣಬೀರ್ ಕಪೂರ್ ಜೀವ ತುಂಬಿದ್ದಾರೆ. ‘ರಾಮಾಯಣ’ ಚಿತ್ರದ ಫಸ್ಟ್ ಹಾಫ್ ವಿಮರ್ಶೆ ಇಲ್ಲಿದೆ..

Ramayana Movie: ‘ರಾಮಾಯಣ’ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಸಿಕ್ತು ದೃಶ್ಯವೈಭವದ ರಿಪೋರ್ಟ್
Ranbir Kapoor, Sai Pallavi
Image Credit source: Prime Focus Studios
Edited By:

Updated on: Nov 04, 2026 | 9:21 PM

ಪೌರಾಣಿಕ ಕಥೆಗಳು ಎಂದಿಗೂ ಪ್ರಸ್ತುತವಾಗಿರುತ್ತವೆ. ಹಾಗಾಗಿ ಅವುಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವ ಪ್ರಯತ್ನ ಆಗಾಗ ನಡೆಯುತ್ತಲೇ ಇರುತ್ತದೆ. ಈಗ ‘ರಾಮಾಯಣ’ ಕಥೆಯನ್ನು ಆಧರಿಸಿ ನಿರ್ದೇಶಕ ನಿತೇಶ್ ತಿವಾರಿ ಅವರು ಸಿನಿಮಾ ಮಾಡಿದ್ದಾರೆ. ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಬೃಹತ್ ಬಜೆಟ್​ನಲ್ಲಿ ನಿರ್ಮಾಣ ಆಗಿದೆ. ನವೆಂಬರ್ 5ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿರುವ ‘ರಾಮಾಯಣ’ ಚಿತ್ರದ ಪ್ರೀಮಿಯರ್ ಶೋ ನವೆಂಬರ್ 4ರ ಸಂಜೆಯಿಂದಲೇ ಶುರುವಾಗಿದೆ. ಈ ಸಿನಿಮಾದ ಮೊದಲಾರ್ಧದಲ್ಲಿ ಏನೆಲ್ಲ ಇದೆ ಎಂಬುದರ ವಿವರ ಇಲ್ಲಿದೆ ಓದಿ..

  •  ಅಸುರರು ಹಾಗೂ ದೇವತೆಗಳ ನಡುವಿನ ಯುದ್ದದ ದೃಶ್ಯದಿಂದ ಸಿನಿಮಾದ ಕಥೆ ಆರಂಭ ಆಗುತ್ತದೆ. ಶುರುವಿನಲ್ಲೇ ಆ್ಯಕ್ಷನ್ ಇದೆ.
  • ರಾಮನಿಗಿಂತ ಮೊದಲೇ ರಾವಣನ ಪಾತ್ರವನ್ನು ಪರಿಚಯಿಸಲಾಗಿದೆ. ಯಶ್ ಅವರ ಅಭಿಮಾನಿಗಳ ಪಾಲಿಗೆ ಇದು ಸಖತ್ ಸ್ಪೆಷಲ್ ಆಗಿದೆ.
  • ರಾವಣನಾಗಿ ಭರ್ಜರಿ ಆ್ಯಕ್ಷನ್ ದೃಶ್ಯದ ಮೂಲಕ ಯಶ್ ಅವರು ಶುರುವಿನಲ್ಲೇ ತಮ್ಮ ಅಭಿಮಾನಿಗಳಿಗೆ ಮಸ್ತ್ ಮನರಂಜನೆ ನೀಡುತ್ತಾರೆ.
  • ರಾವಣನ ಪಾತ್ರದ ಹಿನ್ನೆಲೆಯನ್ನು ವಿವರಿಸಲು ಹೆಚ್ಚು ಮಹತ್ವ ನೀಡಲಾಗಿದೆ. ಮೊದಲಾರ್ಧದ ಆರಂಭದಲ್ಲಿ ಈ ಪಾತ್ರವೇ‌ ಹೆಚ್ಚು ಆವರಿಸಿಕೊಂಡಿದೆ.
  • ಈ ಸಿನಿಮಾದಲ್ಲಿ ರಾಮನ ಪಾತ್ರದ ಎಂಟ್ರಿಗೆ ಪ್ರೇಕ್ಷಕರು 40 ನಿಮಿಷ ಕಾಯಬೇಕು. ಸೀತೆಯ ಪಾತ್ರದ ಆಗಮನ ಇನ್ನಷ್ಟು ತಡ ಆಗುತ್ತದೆ
  • ತಾಟಕ ಸುಬಾಹು ಸಂಹಾರದ ದೃಶ್ಯವು ಪ್ರೇಕ್ಷಕರಿಗೆ ರೋಚಕ ಅನುಭವ ನೀಡುತ್ತದೆ. ಗ್ರಾಫಿಕ್ಸ್ ಮೂಲಕ ಮೂಡಿದ ದೃಶ್ಯವೈಭವ ಚೆನ್ನಾಗಿದೆ.
  • ರಾವಣನ ಪಾತ್ರದ ರೀತಿ ರಣಬೀರ್ ಕಪೂರ್ ನಿಭಾಯಿಸಿದ ರಾಮನ ಪಾತ್ರದ ಪರಿಚಯಕ್ಕೂ ವಿಶೇಷವಾಗಿ ಗಮನ‌ಹರಿಸಲಾಗಿದೆ.
  • ಸೀತಾ ಸ್ವಯಂವರದ ದೃಶ್ಯಗಳು ಸುಂದರವಾಗಿ ಮೂಡಿಬಂದಿವೆ. ರಾಮ ಹಾಗೂ ಪರಶುರಾಮನ ಮುಖಾಮುಖಿ ದೃಶ್ಯಗಳು ರೋಚಕವಾಗಿವೆ.
  • ಯುದ್ಧದ ದೃಶ್ಯಗಳು ಮಾತ್ರವಲ್ಲದೇ ಭಾವುಕ ಸನ್ನಿವೇಶಗಳನ್ನು ಕೂಡ ನಿರ್ದೇಶಕರು ಉತ್ತಮವಾಗಿ ನಿಭಾಯಿಸಿದ್ದಾರೆ.
  • ತಂದೆಯ ಆಜ್ಞೆ ಪಾಲಿಸಲು ಶ್ರೀರಾಮ ವನವಾಸಕ್ಕೆ ತೆರಳುವ ದೃಶ್ಯದೊಂದಿಗೆ ಮಧ್ಯಂತರ ಬರುತ್ತದೆ. ಮಧ್ಯಂತರದ ನಂತರ ಮತ್ತೆ ರಾವಣನ ಆರ್ಭಟ ಶುರು.

 

Loading...

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us