
ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಯಶ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್ ಆಗುತ್ತಿದೆ. ಇದರ ನಡುವೆ ಯಶ್ ನಟಿಸಿರುವ ಮತ್ತೊಂದು ಸಿನಿಮಾ ಸಹ ಅಬ್ಬರ ಸೃಷ್ಟಿಸಲು ಅಣಿಯಾಗಿದೆ. ಯಶ್, ರಾವಣನ ಪಾತ್ರದಲ್ಲಿ ನಟಿಸಿರುವ ‘ರಾಮಾಯಣ’ ಸಿನಿಮಾ ಕೆಲವೇ ತಿಂಗಳಲ್ಲಿ ರಿಲೀಸ್ ಆಗಲಿದ್ದು, ಸಿನಿಮಾದ ವಿಶೇಷ ಪ್ರದರ್ಶನವನ್ನು ಇತ್ತೀಚೆಗಷ್ಟೆ ಚೆನ್ನೈನಲ್ಲಿ ಮಾಡಲಾಗಿದೆ. ಈ ವಿಶೇಷ ಪ್ರದರ್ಶನದಲ್ಲಿ ಸಿನಿಮಾದ ದೃಶ್ಯಗಳನ್ನು ವೀಕ್ಷಿಸಿರುವ ಮಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಚೆನ್ನೈನಲ್ಲಿ ಕೆಲ ವಾರಗಳ ಹಿಂದಷ್ಟೆ ಈ ಸಿನಿಮಾದ ವಿಶೇಷ ಶೋ ಕೇವಲ ವಿತರಕರಿಗಾಗಿ ಚಿತ್ರತಂಡ ಆಯೋಜಿಸಿತ್ತು. ಈ ಶೋನಲ್ಲಿ ಆಯ್ದ ಕೆಲವು ದೃಶ್ಯಗಳನ್ನು ಮಾತ್ರವೇ ವಿತರಕರಿಗೆ ತೋರಿಸಿದ್ದು, ವಿಶೇಷ ಶೋ ನೋಡಿದ ವಿತರಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ದೇಶದ ಹಲವು ಪ್ರಮುಖ ವಿತರಕರನ್ನು ಈ ಶೋಗೆ ಆಹ್ವಾನಿಸಲಾಗಿತ್ತಂತೆ. ದೃಶ್ಯಗಳ ಗುಣಮಟ್ಟ ನೋಡಿದ ವಿತರಕರು, ಸಿನಿಮಾವನ್ನು ಹಾಲಿವುಡ್ನ ‘ಲಾರ್ಡ್ ಆಫ್ ದಿ ರಿಂಗ್ಸ್’ ಸಿನಿಮಾಕ್ಕೆ ಹೋಲಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಟ್ರೈಲರ್, ಟೀಸರ್ಗಳಲ್ಲಿ ಇಲ್ಲದ ಕೆಲವು ದೃಶ್ಯಗಳನ್ನು ಈ ವಿಶೇಷ ಶೋನಲ್ಲಿ ಪ್ರದರ್ಶಿಸಲಾಗಿದೆಯಂತೆ. ಈ ಬಗ್ಗೆ ವಿತರಕರೊಬ್ಬರು ನೀಡಿರುವ ಮಾಹಿತಿ ಆಧರಿಸಿ ಸುದ್ದಿ ಪ್ರಕಟಿಸಿರುವ ಎನ್ಡಿಟಿವಿ, ಈ ವಿಶೇಷ ಶೋನಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿತ್ತಂತೆ. ದೇಶದ ಹಲವು ಪ್ರಮುಖ ವಿತರಕರನ್ನು ಆಹ್ವಾನಿಸಲಾಗಿತ್ತಂತೆ. ಈ ಶೋಗೆ ದಿಲ್ ರಾಜು ಸೇರಿದಂತೆ ಅನೇಕ ದಕ್ಷಿಣದ ವಿತರಕರು ಭಾಗಿ ಆಗಿದ್ದರಂತೆ.
ಇದನ್ನೂ ಓದಿ:ಯಶ್ಗೆ ತಂಗಿಯೆಂದರೆ ಅದೆಷ್ಟು ಪ್ರೀತಿ, ಬಾಲ್ಯದ ಆ ಘಟನೆಯೇ ಸಾಕ್ಷಿ
‘ರಾಮಾಯಣ’ ಸಿನಿಮಾದ ಗ್ಲೋಬಲ್ ವಿತರಣೆಗೆ ಸೋನಿ ಜೊತೆಗೆ ನಿರ್ಮಾಪಕರು ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದಾರೆ. ‘ರಾಮಾಯಣ’ ಸಿನಿಮಾ ವಿಶ್ವಮಟ್ಟದಲ್ಲಿ ಭಾರಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಸಿನಿಮಾದ ಹಿಂದಿ ಆವೃತ್ತಿಯನ್ನು ಕರಣ್ ಜೋಹರ್ ವಿತರಣೆ ಮಾಡುವುದು ಬಹುತೇಕ ಖಾತ್ರಿ ಆಗಿದೆ. ಹಿಂದಿ ಭಾಗದ ವಿತರಣೆ ಹಕ್ಕಿಗೆ ಕರಣ್ ಜೋಹರ್ 250 ಕೋಟಿ ರೂಪಾಯಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇದೀಗ ದಕ್ಷಿಣದ ಹಕ್ಕುಗಳಿಗಾಗಿ ಪೈಪೋಟಿ ಜಾರಿಯಲ್ಲಿದೆ.
ತೆಲುಗು ರಾಜ್ಯಗಳಲ್ಲಿ ‘ಟಾಕ್ಸಿಕ್’ ಸಿನಿಮಾ ಅನ್ನು ವಿತರಣೆ ಮಾಡಿರುವ ದಿಲ್ ರಾಜು ಅವರು ‘ರಾಮಾಯಣ’ದ ವಿತರಣೆ ಹಕ್ಕಿಗಾಗಿ ಪ್ರಯತ್ನಿಸುತ್ತಿದ್ದು, 105 ಕೋಟಿ ರೂಪಾಯಿ ಆಫರ್ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
‘ರಾಮಾಯಣ’ ಸಿನಿಮಾವನ್ನು ನಿತೀಷ್ ತಿವಾರಿ ನಿರ್ದೇಶನ ಮಾಡಿದ್ದು, ನಮಿತ್ ಮಲ್ಹೋತ್ರಾ ಮತ್ತು ನಟ ಯಶ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಸಿನಿಮಾನಲ್ಲಿ ರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸಿದ್ದಾರೆ. ಸಿನಿಮಾನಲ್ಲಿ ಹಲವು ಖ್ಯಾತ ತಾರೆಯರು ಇದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತರಾದ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಸಂಗೀತ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ