AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್​ಗೆ ತಂಗಿಯೆಂದರೆ ಅದೆಷ್ಟು ಪ್ರೀತಿ, ಬಾಲ್ಯದ ಆ ಘಟನೆಯೇ ಸಾಕ್ಷಿ

Yash sister Nandini: ಯಶ್ ಇತ್ತೀಚೆಗೆ ಪಾಲ್ಗೊಂಡಿದ್ದ ‘ಆಪ್ ಕಿ ಅದಾಲತ್’ ಸಂದರ್ಶನದಲ್ಲಿ ಯಶ್ ತಮ್ಮ ತಂಗಿ ನಂದಿನಿ ಅವರ ಬಗ್ಗೆ ಮಾತನಾಡಿದ್ದರು. ನಂದಿನಿ, ಇಡೀ ಪ್ರಪಂಚದಲ್ಲಿ ನನಗೆ ಬಹಳ ಪ್ರಿಯವಾದ ವ್ಯಕ್ತಿ ಎಂದಿದ್ದರು ಯಶ್. ನಂದಿನಿ ಅವರು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಈ ಹಿಂದೆ ಅವರು ಯಶ್ ಬಗ್ಗೆ ಮಾತನಾಡಿದ್ದು ಕೆಲವು ಆಪ್ತ ವಿಷಯಗಳನ್ನು ಹಂಚಿಕೊಂಡಿದ್ದರು. ಮಾಹಿತಿ ಇಲ್ಲಿದೆ...

ಯಶ್​ಗೆ ತಂಗಿಯೆಂದರೆ ಅದೆಷ್ಟು ಪ್ರೀತಿ, ಬಾಲ್ಯದ ಆ ಘಟನೆಯೇ ಸಾಕ್ಷಿ
Yash Nandini
ಮಂಜುನಾಥ ಸಿ.
|

Updated on: Aug 28, 2026 | 10:58 AM

Share

ಮುಖ್ಯಾಂಶಗಳು

  • ಯಶ್​ಗೆ ತಂಗಿ ನಂದಿನಿ ಎಂದರೆ ಬಲು ಪ್ರೀತಿ
  • ನನ್ನ ತಂಗಿ ಪ್ರಪಂಚದಲ್ಲೇ ಅತ್ಯಂತ ಪ್ರೀತಿಯ ವ್ಯಕ್ತಿ ಎಂದಿದ್ದರು ಯಶ್
  • ಯಶ್ ಅದೆಷ್ಟು ಕಾಳಜಿವಹಿಸುತ್ತಾರೆಂಬುದನ್ನು ಹೇಳಿದ್ದರು ತಂಗಿ ನಂದಿನಿ

ಯಶ್ (Yash) ಇಂದು ಲೋಕವೇ ಮೆಚ್ಚಿ ಕೊಂಡಾಡುತ್ತಿರುವ ಪ್ಯಾನ್ ಇಂಡಿಯಾ ಸ್ಟಾರ್. ಯಶ್ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅದರಲ್ಲೂ ಹೆಂಗೆಳೆಯರೇ ಹೆಚ್ಚು. ಇದಕ್ಕೆ ಯಶ್ ಅವರ ವೈಯಕ್ತಿಕ ಜೀವನವೂ ಕಾರಣ. ಯಶ್ ಸ್ಟಾರ್ ಆಗಿರುವ ಜೊತೆಗೆ ಒಬ್ಬ ಅಪ್ಪಟ ‘ಕುಟುಂಬಸ್ಥ’. ಕುಟುಂಬಕ್ಕೆ ಹೆಚ್ಚು ಮೌಲ್ಯ ಕೊಡುವ ನಟ. ಪತ್ನಿ ಮಕ್ಕಳ ಜೊತೆಗೆ ತನ್ನವರನ್ನು ಅಪಾರವಾಗಿ ಹಚ್ಚಿಕೊಂಡಿರುವ ವ್ಯಕ್ತಿ. ವಿಶೇಷವಾಗಿ ಯಶ್​​ಗೆ ತಂಗಿ ನಂದಿನಿ ಎಂದರೆ ಬಹಳ ಪ್ರೀತಿ. ಇತ್ತೀಚೆಗಷ್ಟೆ ಯಶ್, ‘ಆಪ್​​ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾಗಲೂ ಈ ಬಗ್ಗೆ ಮಾತನಾಡಿದ್ದರು. ‘ನಂದಿನಿ, ನನ್ನ ಸಹೋದರಿಯ ಹೆಸರು, ಇಡೀ ವಿಶ್ವದಲ್ಲಿ ನನ್ನ ಅತ್ಯಂತ ಅಚ್ಚುಮೆಚ್ಚಿನ ಜೀವ ಆಕೆ’ ಎಂದು ಯಶ್ ಹೇಳಿದ್ದರು.

ಇಂದು (ಆಗಸ್ಟ್ 28) ರಕ್ಷಾಬಂಧನ. ಸಹೋದರ-ಸಹೋದರಿಯರ ಬಾಂಧವ್ಯವನ್ನು ಸಂಭ್ರಮಿಸುವ ದಿನ. ಯಶ್, ತಮ್ಮ ತಂಗಿ ನಂದಿನಿಯನ್ನು ಅದೆಷ್ಟು ಪ್ರೀತಿಸುತ್ತಾರೆ, ಕಾಪಾಡುತ್ತಾರೆ ಎಂಬುದನ್ನು ಅವರ ಸಹೋದರಿಯೇ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು. ಯಶ್ ಸಹೋದರಿ ನಂದಿನಿ ಮಾಧ್ಯಮಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಿಲ್ಲ. ಕೆಲ ವರ್ಷಗಳ ಹಿಂದೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಚುಟುಕಾಗಿ ಅವರು ಮಾತನಾಡಿದ್ದರು. ಆ ವೇಳೆ ಅಣ್ಣ ಯಶ್ ಬಗ್ಗೆ ಸಾಕಷ್ಟು ವಿಷಯಗಳನ್ನು ಅವರು ಹಂಚಿಕೊಂಡಿದ್ದರು.

ಯಶ್, ನಂದಿನಿ ಅವರನ್ನು ಪ್ರೀತಿಯಿಂದ ಡುಮ್ಮು ಎಂದು ಕರೆಯುತ್ತಾರಂತೆ. ಹಾಗೆ ನಂದಿನಿ ಅವರು ಯಶ್ ಅವರನ್ನು ಭಯ್ಯಾ ಎಂದು ಕರೆಯುತ್ತಾರಂತೆ. ಯಶ್ ಅವರನ್ನು ‘ಭಯ್ಯಾ’ ಎಂದು ಕರೆಯುವುದು ನಂದಿನಿ ಮತ್ತು ಚಿಕ್ಕಣ್ಣ ಇಬ್ಬರೇ ಅಂತೆ. ತಮ್ಮ ಜೀವನದಲ್ಲಿ ಅಣ್ಣನ ಪ್ರಭಾವ ಬಹಳ ಇದೆ ಎಂದಿರುವ ನಂದಿನಿ, ‘ನನ್ನ ಶಿಕ್ಷಣ, ನನ್ನ ಮದುವೆ, ಮದುವೆಯ ಬಳಿಕವೂ ಸಹ ನನ್ನ ಜೀವನದಲ್ಲಿ ಪ್ರಭಾವ ಇದ್ದೇ ಇದೆ. ಬಹಳ ಕಾಳಜಿ ಮಾಡುತ್ತಾನೆ’ ಎಂದಿದ್ದರು ನಂದಿನಿ.

ಇದನ್ನೂ ಓದಿ:ಎರಡನೇ ದಿನವೂ ಅಬ್ಬರಿಸಿದ ‘ಟಾಕ್ಸಿಕ್’; ಭರ್ಜರಿ ಗಳಿಕೆ ಮಾಡಿದ ಯಶ್ ಸಿನಿಮಾ

ಯಶ್, ತಂಗಿಯ ಬಗ್ಗೆ ಅದೆಷ್ಟು ಕಾಳಜಿವಹಿಸುತ್ತಾರೆ ಎಂಬುದಕ್ಕೆ ಉದಾಹರಣೆ ನೀಡಿದ ನಂದಿನಿ ಅವರು, ‘ಬಾಲ್ಯದಲ್ಲಿ ನಾವೆಲ್ಲ ಸಂಬಂಧಿಕರ ಮನೆಗೆ ಊರಿಗೆ ಹೋಗುತ್ತಿದ್ದೆವು. ಆಗ ಮಕ್ಕಳೆಲ್ಲ ನೀರು ತರಲು, ಕೆಲಸ ಮಾಡಲು ಹೋಗುತ್ತಿದ್ದೆವು, ಆಗ ಯಶ್ ನನ್ನನ್ನು ಕಳಿಸುತ್ತಿರಲಿಲ್ಲ, ನನ್ನ ತಂಗಿಗೆ ಏನೂ ಕೆಲಸ ಹೇಳಬೇಡಿ ಎನ್ನುತ್ತಿದ್ದ. ನನ್ನ ಬದಲಿಗೆ ಅವನೇ ಕೆಲಸ ಮಾಡುತ್ತಿದ್ದ. ನನಗೆ ಸ್ವಲ್ಪವೂ ಕಷ್ಟವಾಗಲು ಅವನು ಬಿಡುತ್ತಿರಲಿಲ್ಲ. ಮನೆಯಲ್ಲಿ ಸಹ ನನಗೆ ಕೆಲಸ ಮಾಡಲು ಬಿಡುತ್ತಿರಲಿಲ್ಲ. ಅಮ್ಮ ಬೈತಿದ್ದರು, ಅವಳು ಕೆಲಸ ಮಾಡಲಿ ಅಂತ ಆದರೆ ಯಶ್ ಹಾಗೂ ನನ್ನ ತಂದ ನನಗೆ ಕೆಲಸ ಮಾಡಲು ಬಿಡುತ್ತಿರಲಿಲ್ಲ, ಅವರೇ ಮಾಡಿಬಿಡುತ್ತಿದ್ದರು’ ಎಂದಿದ್ದಾರೆ ನಂದಿನಿ.

‘ನನಗೆ ಏನೇ ಕಷ್ಟ ಬಂದರು ನಾನು ಮೊದಲು ಯಶ್ ಬಳಿಯೇ ಹೇಳುತ್ತಿದ್ದೆ. ಆಗೆಲ್ಲ ಆತ ನನಗೆ ಸಪೋರ್ಟ್ ಮಾಡುತ್ತಿದ್ದ. ಈಗಲೂ ಸಹ ನಾನು ಏನೇ ವಿಷಯವನ್ನು ಮೊದಲು ಅವನ ಜೊತೆಗೇ ಹಂಚಿಕೊಳ್ಳುತ್ತೇನೆ. ಅಪಾರವಾದ ಕಾಳಜಿ ತೋರಿಸುತ್ತಾನೆ. ನೀನು ನನ್ನ ಜೊತೆ ಮಾತು ಬಿಟ್ಟರು ನಾನು ನಿನ್ನ ಜೊತೆ ಮಾತು ಬಿಡಲ್ಲ ಎಂದೆಲ್ಲ ಹೇಳುತ್ತಿದ್ದ’ ಎಂದಿದ್ದರು ನಂದಿನಿ.

ಯಶ್ ಅವರ ಯಾವ ಸಿನಿಮಾ ನಿಮಗಿಷ್ಟ ಎಂಬ ಪ್ರಶ್ನೆಗೆ ಉತ್ತರಿಸಿದ್ದ ನಂದಿನಿ ಅವರು, ‘ನನಗೆ ಅವನ ‘ಕಿರಾತಕ’ ಸಿನಿಮಾ ಬಹಳ ಇಷ್ಟ. ಆ ಸಿನಿಮಾನಲ್ಲಿ ಅವನು ಹೇಗೆ ತಂಗಿಯನ್ನು ಗೋಳು ಹೊಯ್ದುಕೊಳ್ಳುತ್ತಾನೋ ನಿಜ ಜೀವನದಲ್ಲೂ ಹಾಗೆಯೇ ಗೋಳು ಹೊಯ್ದುಕೊಳ್ಳುತ್ತಾನೆ. ಜೊತೆಗೆ ಆ ಸಿನಿಮಾ ಅವನ ಕರಿಯರ್ರಿಗೆ ತಿರುವು ಕೊಟ್ಟ ಸಿನಿಮಾ ಸಹ ಹೌದು ಹಾಗಾಗಿ ನನಗೆ ಆ ಸಿನಿಮಾ ತುಂಬಾ ಇಷ್ಟ’ ಎಂದು ನಂದಿನಿ ಹೇಳಿದ್ದರು.

‘ನನಗೆ ಯಶ್ ಮಾಡುವ ಎಲ್ಲ ಪಾತ್ರಗಳು ಇಷ್ಟ, ಆದರೆ ಅವನು ಪೊಲೀಸ್ ಪಾತ್ರದಲ್ಲಿ ನಟಿಸಬೇಕು ಎಂಬುದು ನನ್ನ ಆಸೆ. ಬಾಲ್ಯದಲ್ಲಿದ್ದಾಗ ಅವನಿಗೆ ಸಾಂಗ್ಲಿಯಾನ ಸಿನಿಮಾ ತುಂಬಾ ಇಷ್ಟವಾಗಿತ್ತು. ಅವನು ಸಹ ಬಾಲ್ಯದಲ್ಲಿ ಪೊಲೀಸ್ ಸಮವಸ್ತ್ರ ಹಾಕಿಕೊಂಡು ಶಾಲಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ. ಹಾಗಾಗಿ ಅವನು ಪೊಲೀಸ್ ಪಾತ್ರದಲ್ಲಿ ನಟಿಸಬೇಕು ಎಂಬುದು ನನ್ನ ಆಸೆ’ ಎಂದಿದ್ದಾರೆ ನಂದಿನಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಮೋಸ ಮಾಡಿ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗಗನ್ ಚಿನ್ನಪ್ಪ
ಮೋಸ ಮಾಡಿ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗಗನ್ ಚಿನ್ನಪ್ಪ
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್​ವೇ ಫ್ಲೈಓವರ್‌‌ನಿಂದ ಕೆಳಗೆ ಬಿದ್ದ ಕಾರು
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್​ವೇ ಫ್ಲೈಓವರ್‌‌ನಿಂದ ಕೆಳಗೆ ಬಿದ್ದ ಕಾರು
ಪ್ರತಿ ಲೀಟರ್‌ ಹಾಲಿನ ದರ ₹8 ಹೆಚ್ಚಳಕ್ಕೆ ಹಾಲು ಒಕ್ಕೂಟಗಳ ಆಗ್ರಹ
ಪ್ರತಿ ಲೀಟರ್‌ ಹಾಲಿನ ದರ ₹8 ಹೆಚ್ಚಳಕ್ಕೆ ಹಾಲು ಒಕ್ಕೂಟಗಳ ಆಗ್ರಹ