AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಅಕ್ಕ ಆಗಲು ಒಪ್ಪಿದ್ದೇಕೆ? ನಯನತಾರಾ ಸ್ಪಷ್ಟನೆ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದಲ್ಲಿ ಗಂಗಾ ಪಾತ್ರ ಒಪ್ಪಿಕೊಳ್ಳಲು ಕಾರಣವೇನು ಎಂಬುದನ್ನು ನಟಿ ನಯನತಾರಾ ಬಹಿರಂಗಪಡಿಸಿದ್ದಾರೆ. ಸ್ಕ್ರೀನ್ ಸ್ಪೇಸ್ ಗಿಂತ ಪಾತ್ರದ ತೂಕವೇ ಮುಖ್ಯ ಎಂದು ಹೇಳಿರುವ ನಟಿ, ಸಿನಿಮಾದ ಗಳಿಕೆ ಹಾಗೂ ತಮ್ಮ ಪಾತ್ರದ ಪ್ರಭಾವದ ಕುರಿತು ಮುಕ್ತವಾಗಿ ಹಂಚಿಕೊಂಡಿದ್ದಾರೆ.

‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಅಕ್ಕ ಆಗಲು ಒಪ್ಪಿದ್ದೇಕೆ? ನಯನತಾರಾ ಸ್ಪಷ್ಟನೆ
ನಯನತಾರಾ
ರಾಜೇಶ್ ಹೆಗಡೆ ದುಗ್ಗುಮನೆ
|

Updated on:Aug 28, 2026 | 9:12 AM

Share

ಮುಖ್ಯಾಂಶಗಳು

  • ಸ್ಕ್ರೀನ್ ಸ್ಪೇಸ್ ಮುಖ್ಯವಲ್ಲ ಎಂದ ನಯನತಾರಾ
  • ಕಥೆಯ ಹಾದಿ ಬದಲಾಯಿಸುವ ಗಂಗಾ ಪಾತ್ರ
  • 190 ಕೋಟಿ ಗಳಿಸಿದರೂ ಮಿಶ್ರ ಪ್ರತಿಕ್ರಿಯೆ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ  (Toxic Movie) ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಬಹುನಿರೀಕ್ಷಿತ ಸಿನಿಮಾದಲ್ಲಿ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ತಾವು ‘ಗಂಗಾ’ ಎಂಬ ಶಕ್ತಿಶಾಲಿ ಪಾತ್ರವನ್ನು ಏಕೆ ಒಪ್ಪಿಕೊಂಡೆ ಎಂಬುದನ್ನು ನಯನತಾರಾ ಬಹಿರಂಗಪಡಿಸಿದ್ದಾರೆ. ತಮ್ಮ ಪಾತ್ರದ ಆಯ್ಕೆ ಮತ್ತು ಚಿತ್ರದ ಕಥೆಯ ಮಹತ್ವದ ಕುರಿತು ನಟಿ ಮುಕ್ತವಾಗಿ ಮಾತನಾಡಿದ್ದಾರೆ.

‘ಸಿನಿಮಾ ಆಯ್ಕೆ ಮಾಡುವಾಗ ನಾನು ಯಾವತ್ತೂ ಸ್ಕ್ರೀನ್ ಸ್ಪೇಸ್ ಲೆಕ್ಕ ಹಾಕುವುದಿಲ್ಲ. ಅದು ಸೋಲೋ ಸಿನಿಮಾನಾ ಅಥವಾ ಮಲ್ಟಿಸ್ಟಾರರ್ ಸಿನಿಮಾನಾ ಎಂದು ನೋಡುವುದಿಲ್ಲ. ಕಥೆಯಲ್ಲಿ ನನ್ನ ಪಾತ್ರಕ್ಕೆ ಏನು ಪ್ರಾಮುಖ್ಯತೆ ಇದೆ ಎಂಬುದು ನನಗೆ ಮುಖ್ಯ. ಕಥೆ ಮತ್ತು ಪಾತ್ರ ನನ್ನನ್ನು ರೋಮಾಂಚನಗೊಳಿಸಿದರೆ ತಕ್ಷಣ ಒಪ್ಪಿಕೊಳ್ಳುತ್ತೇನೆ. ಟಾಕ್ಸಿಕ್ ಸಿನಿಮಾದ ಗಂಗಾ ಪಾತ್ರವನ್ನು ನಾನು ಎಂದಿಗೂ ನಿರಾಕರಿಸಲು ಸಾಧ್ಯವಿರಲಿಲ್ಲ’ ಎಂದು ಹೇಳಿದ್ದಾರೆ ಅವರು.

‘ಚಿತ್ರರಂಗ ಎಂಬುದು ಎಲ್ಲರ ಸಹಕಾರದಿಂದ ನಡೆಯುವ ಮಾಧ್ಯಮ. ಪ್ರತಿಯೊಂದು ಪಾತ್ರವನ್ನು ಚೆನ್ನಾಗಿ ಬರೆದಾಗ ಇಡೀ ಸಿನಿಮಾಗೆ ಲಾಭವಾಗುತ್ತದೆ. ಗಂಗಾ ಪಾತ್ರಕ್ಕೆ ತನ್ನದೇ ಆದ ಧ್ವನಿ ಮತ್ತು ಭಾವನಾತ್ಮಕ ಪಯಣವಿದೆ. ಗಂಗಾ ಕೇವಲ ಮತ್ತೊಬ್ಬರ ಪಾತ್ರಕ್ಕೆ ಬೆಂಬಲವಾಗಿ ಇರುವುದಿಲ್ಲ. ಈ ಪಾತ್ರ ಇಡೀ ಕಥೆಯ ಹಾದಿಯನ್ನೇ ಬದಲಾಯಿಸುವ ಶಕ್ತಿ ಹೊಂದಿದೆ’ ಎಂದಿದ್ದಾರೆ. ಸಿನಿಮಾ ನೋಡಿದವರಿಗೆ ಇದು ಹೌದು ಎನಿಸಿದೆ. ಇಡೀ ಕಥೆಯನ್ನೇ ಗಂಗಾ ಪಾತ್ರ ಬದಲಿಸುತ್ತದೆ.

ನಯನತಾರಾ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾರೆ. ಅವರು ಪ್ರತಿ ಸಿನಿಮಾಗೆ ಸುಮಾರು 10 ರಿಂದ 12 ಕೋಟಿ ರೂಪಾಯಿ ಪಡೆಯುತ್ತಾರೆ. ‘ಟಾಕ್ಸಿಕ್’ ಪಡೆದ ಪ್ರೀತಿಗೆ ನಯನತಾರಾ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಇರುಮುಡಿ’ಗೆ ತೆಲುಗು ನಟರ ಜೈಕಾರ; ‘ಟಾಕ್ಸಿಕ್’ ವಿಚಾರದಲ್ಲಿ ಕನ್ನಡ ಚಿತ್ರರಂಗದ ಮೌನ ಏತಕ್ಕೆ?

ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಎರಡು ದಿನಕ್ಕೆ 190 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಆದರೂ ವಿಮರ್ಶಕರಿಂದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಹಿಂಸೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಕೆಲವರು ಚಿತ್ರವನ್ನು ಬೆಂಬಲಿಸಿದ್ದಾರೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಮತ್ತು ರುಕ್ಮಿಣಿ ವಸಂತ್ ಕೂಡ ನಟಿಸಿದ್ದಾರೆ. ನಯನತಾರಾ ಅವರ ಗಂಗಾ ಪಾತ್ರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:02 am, Fri, 28 August 26

Follow Us
ರಾಜೇಶ್ ಹೆಗಡೆ ದುಗ್ಗುಮನೆ
ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ಆಕಾಶವಾಣಿ ಭವನದ ಬಳಿ ರಾಹುಲ್, ಪ್ರಿಯಾಂಕಾರನ್ನು ತಡೆದ ದೆಹಲಿ ಪೊಲೀಸರು
ಆಕಾಶವಾಣಿ ಭವನದ ಬಳಿ ರಾಹುಲ್, ಪ್ರಿಯಾಂಕಾರನ್ನು ತಡೆದ ದೆಹಲಿ ಪೊಲೀಸರು
ರಾಜ್ಯ ಸರ್ಕಾರದ ವಿರುದ್ಧ ಗವರ್ನರ್​​ಗೆ ಬಿಜೆಪಿ-ಜೆಡಿಎಸ್​​ ನಿಯೋಗದಿಂದ ದೂರು
ರಾಜ್ಯ ಸರ್ಕಾರದ ವಿರುದ್ಧ ಗವರ್ನರ್​​ಗೆ ಬಿಜೆಪಿ-ಜೆಡಿಎಸ್​​ ನಿಯೋಗದಿಂದ ದೂರು
ಫ್ಲೈದುಬೈ ವಿಮಾನ ಘಟನೆ: ಇರಾನ್ ವಿರುದ್ಧ ಟ್ರಂಪ್ ಗಂಭೀರ ಆರೋಪ
ಫ್ಲೈದುಬೈ ವಿಮಾನ ಘಟನೆ: ಇರಾನ್ ವಿರುದ್ಧ ಟ್ರಂಪ್ ಗಂಭೀರ ಆರೋಪ
ಕಾರವಾರ ಕ್ರಿಮ್ಸ್ ಹಾಸ್ಟೆಲ್ ಅವ್ಯವಸ್ಥೆ: ವೈದ್ಯಕೀಯ ವಿದ್ಯಾರ್ಥಿಗಳ ಪರದಾಟ!
ಕಾರವಾರ ಕ್ರಿಮ್ಸ್ ಹಾಸ್ಟೆಲ್ ಅವ್ಯವಸ್ಥೆ: ವೈದ್ಯಕೀಯ ವಿದ್ಯಾರ್ಥಿಗಳ ಪರದಾಟ!
ನಕಲಿ ದಾಖಲೆ ಸೃಷ್ಟಿಸಿ ಜೈಲಿನಿಂದ ಬಿಡುಗಡೆ​​ ಪ್ರಕರಣ ಬಯಲಾಗಿದ್ದೇ ರೋಚಕ
ನಕಲಿ ದಾಖಲೆ ಸೃಷ್ಟಿಸಿ ಜೈಲಿನಿಂದ ಬಿಡುಗಡೆ​​ ಪ್ರಕರಣ ಬಯಲಾಗಿದ್ದೇ ರೋಚಕ
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!