AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇರುಮುಡಿ’ಗೆ ತೆಲುಗು ನಟರ ಜೈಕಾರ; ‘ಟಾಕ್ಸಿಕ್’ ವಿಚಾರದಲ್ಲಿ ಕನ್ನಡ ಚಿತ್ರರಂಗದ ಮೌನ ಏತಕ್ಕೆ?

ತೆಲುಗಿನಲ್ಲಿ ರವಿತೇಜ ನಟನೆಯ 'ಇರುಮುಡಿ' ಸಿನಿಮಾಗೆ ರಾಮ್ ಚರಣ್ ಸೇರಿದಂತೆ ಪ್ರಮುಖ ಸ್ಟಾರ್‌ಗಳು ಸಾಥ್ ನೀಡಿದ್ದಾರೆ. ಆದರೆ ಕನ್ನಡದ ಹೆಮ್ಮೆಯ ಯಶ್ ಅವರ 'ಟಾಕ್ಸಿಕ್' ಚಿತ್ರಕ್ಕೆ ಸ್ಯಾಂಡಲ್‌ವುಡ್ ನಟರು ಮೌನ ವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಶಿವರಾಜ್‌ಕುಮಾರ್ ಬೆಂಬಲ ಹೊರತುಪಡಿಸಿ, ಇತರ ನಟರ ಬೆಂಬಲ ಸಿಗದಿರುವುದು ಆಂತರಿಕ ಒಗ್ಗಟ್ಟಿನ ಕೊರತೆಯನ್ನು ಎತ್ತಿ ತೋರಿಸುತ್ತಿದೆ.

‘ಇರುಮುಡಿ’ಗೆ ತೆಲುಗು ನಟರ ಜೈಕಾರ; ‘ಟಾಕ್ಸಿಕ್’ ವಿಚಾರದಲ್ಲಿ ಕನ್ನಡ ಚಿತ್ರರಂಗದ ಮೌನ ಏತಕ್ಕೆ?
ಟಾಕ್ಸಿಕ್ ಸಿನಿಮಾ
ರಾಜೇಶ್ ದುಗ್ಗುಮನೆ
|

Updated on: Aug 28, 2026 | 7:44 AM

Share

ಮುಖ್ಯಾಂಶಗಳು

  • ತೆಲುಗು ನಟರ ಒಗ್ಗಟ್ಟು
  • ‘ಇರುಮುಡಿ’ ಸಿನಿಮಾಗೆ ಸ್ಟಾರ್‌ಗಳ ಸಾಥ್
  • ‘ಟಾಕ್ಸಿಕ್’ ವಿಚಾರದಲ್ಲಿ ಶಿವಣ್ಣ ಬೆಂಬಲ ಬಿಟ್ಟರೆ ಮತ್ಯಾರೂ ಇಲ್ವಾ?

ಟಾಲಿವುಡ್‌ನಲ್ಲಿ ಯಾವುದೇ ಒಬ್ಬ ನಟನ ಸಿನಿಮಾ ತೆರೆಕಂಡರೂ ಅಲ್ಲಿನ ಅಗ್ರ ನಟರು ಹಾಗೂ ತಂತ್ರಜ್ಞರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ, ಶುಭ ಹಾರೈಸಿ ಪರಸ್ಪರ ಬೆಂಬಲವಾಗಿ ನಿಲ್ಲುವುದು ಸಂಪ್ರದಾಯವಾಗಿದೆ. ಇತ್ತೀಚೆಗೆ ರವಿತೇಜ ಅಭಿನಯದ ‘ಇರುಮುಡಿ’ ಚಿತ್ರ ಯಶಸ್ಸು ಕಂಡಾಗ ರಾಮ್ ಚರಣ್ ಸೇರಿದಂತೆ ಪ್ರಮುಖ ಸ್ಟಾರ್‌ಗಳು ಬಹಿರಂಗವಾಗಿ ಬೆಂಬಲ ಸೂಚಿಸಿ ಪ್ರೋತ್ಸಾಹಿಸಿದರು. ಆದರೆ, ಕನ್ನಡದ ನಟ ಯಶ್ ಅವರ ಪ್ಯಾನ್-ವರ್ಲ್ಡ್ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ (Toxic Movie) ವಿಚಾರದಲ್ಲಿ ಸ್ಯಾಂಡಲ್‌ವುಡ್ ನಟರ ಮೌನ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಆಗಮಿಸಿ ಯಶ್ ಅವರಿಗೆ ವಿಶ್ ಮಾಡಿ ಪ್ರೀತಿ ತೋರಿದ್ದು ಬಿಟ್ಟರೆ, ಕನ್ನಡದ ಮತ್ಯಾವ ಪ್ರಮುಖ ನಟರೂ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕನಿಷ್ಠ ಒಂದು ಪೋಸ್ಟ್ ಹಾಕದಿರುವುದು ಅಥವಾ ಸಾರ್ವಜನಿಕವಾಗಿ ಬೆಂಬಲಿಸದಿರುವುದು ಈಗ ಚರ್ಚೆಗೆ ಕಾರಣ ಆಗಿದೆ. ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇರೋದು ಮತ್ತೊಮ್ಮೆ ಸ್ಪಷ್ಟವಾಗಿದೆ.

ಒಗ್ಗಟ್ಟಿನ ಕೊರತೆಯೋ ಅಥವಾ ವೃತ್ತಿಪರ ಅಂತರವೋ?

ಇತರ ಚಿತ್ರರಂಗಗಳಲ್ಲಿ ಒಬ್ಬ ನಟನ ಸಿನಿಮಾ ಗೆದ್ದರೆ ಅದು ಇಡೀ ಇಂಡಸ್ಟ್ರಿಯ ಗೆಲುವು ಎಂದು ಸಂಭ್ರಮಿಸಲಾಗುತ್ತದೆ. ಆದರೆ ಸ್ಯಾಂಡಲ್‌ವುಡ್‌ನಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಕನ್ನಡದ ಬಾವುಟ ಹಾರಿಸುತ್ತಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಸೂಕ್ತ ಬೆಂಬಲ ಸಿಗದಿರುವುದು ಕನ್ನಡ ಚಿತ್ರರಂಗದ ಆಂತರಿಕ ಒಗ್ಗಟ್ಟಿನ ಕೊರತೆಯನ್ನು ಎತ್ತಿ ತೋರಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಎರಡನೇ ದಿನವೂ ಅಬ್ಬರಿಸಿದ ‘ಟಾಕ್ಸಿಕ್’; ಭರ್ಜರಿ ಗಳಿಕೆ ಮಾಡಿದ ಯಶ್ ಸಿನಿಮಾ

ಕನ್ನಡ ಸಿನಿಮಾವೊಂದು ವಿಶ್ವದಾದ್ಯಂತ 190 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆಯುತ್ತಿರುವಾಗ, ನಮ್ಮದೇ ರಂಗದ ನಟ-ನಟಿಯರು ಮೌನ ವಹಿಸಿರುವುದು ಅಭಿಮಾನಿಗಳಲ್ಲಿ ಮತ್ತು ಚಿತ್ರಪ್ರೇಮಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಬೇರೆ ಭಾಷೆಯ ಚಿತ್ರರಂಗದಲ್ಲಿ ಸ್ಟಾರ್ಸ್​ ತಮ್ಮ ಸಿನಿಮಾಗಳ ಜೊತೆ ಇತರ ನಟರ ಪ್ರಮೋಟ್ ಮಾಡಲು ತೋರುವ ಉತ್ಸಾಹ ಮತ್ತು ಪರಸ್ಪರ ಬೆಂಬಲಿಸುವ ಮನೋಭಾವ, ಕನ್ನಡ ಚಿತ್ರರಂಗದಲ್ಲಿ ‘ಟಾಕ್ಸಿಕ್’ ವಿಷಯದಲ್ಲಿ ಕಾಣದಿರುವುದು ದುರದೃಷ್ಟಕರ ಎಂಬ ವಿಮರ್ಶೆ ಸ್ಯಾಂಡಲ್‌ವುಡ್ ಅಂಗಳದಲ್ಲಿ ಜೋರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಇಂದು ಯಜುರುಪಾಕರ್ಮ, ರಕ್ಷಾ ಬಂಧನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯಜುರುಪಾಕರ್ಮ, ರಕ್ಷಾ ಬಂಧನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ನೀರಿನಲ್ಲಿ ಕೊಚ್ಚಿಬಂದ ಸಿಲಿಂಡರ್​​ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನ
ಕರ್ನಾಟಕದಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟ ನಿಷೇಧಕ್ಕೆ ಚಿಂತನೆ
ಕರ್ನಾಟಕದಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟ ನಿಷೇಧಕ್ಕೆ ಚಿಂತನೆ
ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತ ಸೆರೆ
ನೇಪಾಳದ ಪ್ರವಾಹಕ್ಕೆ 332 ಜನ ಸಾವು; ಡ್ರೋನ್ ವಿಡಿಯೋದಲ್ಲಿ ದುರಂತ ಸೆರೆ
ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ
ಮೊದಲ ವಿಕೆಟ್ ಪತನ ಫಿಕ್ಸ್? ರಾಹುಲ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ
40 ಕೋಟಿ ಸಾಲದಿಂದ 19,000 ಕೋಟಿ ಸಾಮ್ರಾಜ್ಯ ಕಟ್ಟಿದ ಸ್ಪೂರ್ತಿದಾಯಕ ಕಥೆ
40 ಕೋಟಿ ಸಾಲದಿಂದ 19,000 ಕೋಟಿ ಸಾಮ್ರಾಜ್ಯ ಕಟ್ಟಿದ ಸ್ಪೂರ್ತಿದಾಯಕ ಕಥೆ
RSS ನೋಂದಣಿ ವಿವಾದ: ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ಅಶೋಕ್​​ ಕೌಂಟರ್​​
RSS ನೋಂದಣಿ ವಿವಾದ: ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ಅಶೋಕ್​​ ಕೌಂಟರ್​​
ನೇಪಾಳದ ಪ್ರವಾಹದಿಂದ ಪಾರಾದ ಕನ್ನಡಗನ ಜೊತೆ ಸಿಎಂ ವಿಡಿಯೋ ಕಾಲ್, ಹೇಳಿದ್ದೇನು
ನೇಪಾಳದ ಪ್ರವಾಹದಿಂದ ಪಾರಾದ ಕನ್ನಡಗನ ಜೊತೆ ಸಿಎಂ ವಿಡಿಯೋ ಕಾಲ್, ಹೇಳಿದ್ದೇನು
ಈದ್ ಮಿಲಾದ್ ಆಚರಣೆ ವೇಳೆ ಗಲಾಟೆ: ಗೃಹ ಸಚಿವ ಖರ್ಗೆ ಖಡಕ್ ಎಚ್ಚರಿಕೆ
ಈದ್ ಮಿಲಾದ್ ಆಚರಣೆ ವೇಳೆ ಗಲಾಟೆ: ಗೃಹ ಸಚಿವ ಖರ್ಗೆ ಖಡಕ್ ಎಚ್ಚರಿಕೆ
4 ವರ್ಷದೊಳಗೆ ಮನೆ ಕಟ್ಟದಿದ್ದರೆ ಸರ್ಕಾರಿ ಸೈಟ್ ವಾಪಸ್
4 ವರ್ಷದೊಳಗೆ ಮನೆ ಕಟ್ಟದಿದ್ದರೆ ಸರ್ಕಾರಿ ಸೈಟ್ ವಾಪಸ್