‘ರಾಮಾಯಣ’ ಸಿನಿಮಾ ಟ್ರೈಲರ್​ಗೆ ‘ಯು’ ಪ್ರಮಾಣ ಪತ್ರ, ಬಿಡುಗಡೆ ಯಾವಾಗ?

Ramayana movie trailer: ಸಿನಿಮಾದ ಟ್ರೈಲರ್​​​ಗಳಿಗೆ ಹೆಚ್ಚಿನ ಚಿತ್ರತಂಡಗಳು ಸೆನ್ಸಾರ್ ಮಾಡಿಸುವುದಿಲ್ಲ. ಆದರೆ ಯಾವ ಸಿನಿಮಾದ ಟ್ರೈಲರ್​​ ಅನ್ನು ಜಾಹೀರಾತು ರೂಪದಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತದೆಯೋ ಅಂಥಹಾ ಟ್ರೈಲರ್​​ಗಳಿಗೆ ಮಾತ್ರವೇ ಸೆನ್ಸಾರ್ ಪ್ರಮಾಣ ಪತ್ರ ಅವಶ್ಯಕವಾಗಿರುತ್ತದೆ. ಈಗ ‘ರಾಮಾಯಣ’ ಸಿನಿಮಾದ ಟ್ರೈಲರ್​​ನ ಸೆನ್ಸಾರ್ ಮಾಡಿಸಿರುವುದು ಗಮನಿಸಿದರೆ, ಈ ಟ್ರೈಲರ್ ಅನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವುದು ಖಾತ್ರಿ ಆಗಿದೆ.

‘ರಾಮಾಯಣ’ ಸಿನಿಮಾ ಟ್ರೈಲರ್​ಗೆ ‘ಯು’ ಪ್ರಮಾಣ ಪತ್ರ, ಬಿಡುಗಡೆ ಯಾವಾಗ?
Ramayana
Edited By:

Updated on: Jul 30, 2026 | 10:07 AM

ರಣ್​​ಬೀರ್ ಕಪೂರ್ (Ranbir Kapoor), ಯಶ್, ಸಾಯಿ ಪಲ್ಲವಿ ಹಾಗೂ ಇನ್ನೂ ಕೆಲವು ಸ್ಟಾರ್ ನಟ-ನಟಿಯರು ನಟಿಸಿರುವ ‘ರಾಮಾಯಣ’ ಸಿನಿಮಾ ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈ ವರೆಗೆ ನಿರ್ಮಾಣ ಆಗಿರುವ ಭಾರತೀಯ ಸಿನಿಮಾಗಳಲ್ಲಿಯೇ ಅತಿ ಹೆಚ್ಚು ಬಜೆಟ್ನ ಸಿನಿಮಾ ಇದೆನ್ನಲಾಗುತ್ತಿದೆ. ದೊಡ್ಡ ನಟ-ನಟಿಯರು, ದೊಡ್ಡ ಬಜೆಟ್, ಹಾಲಿವುಡ್ ಸಿನಿಮಾಗಳ ನಿರ್ಮಾಪಕ, ತಂತ್ರಜ್ಞರು ಎಲ್ಲರ ಒಟ್ಟುಗೂಡುವಿಕೆಯಿಂದಾಗಿ ಸಿನಿಮಾದ ಗುಣಮಟ್ಟದ ಬಗ್ಗೆ ಭಾರಿ ನಿರೀಕ್ಷೆಗಳಿವೆ. ಈಗಾಗಲೇ ಸಿನಿಮಾದ ಸಣ್ಣ ಟೀಸರ್, ಕೆಲ ಪೋಸ್ಟರ್​​ಗಳು ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದೆ. ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದ್ದು, ಇದಕ್ಕಾಗಿ ಟ್ರೈಲರ್​​ ಅನ್ನು ಸೆನ್ಸಾರ್ ಬೋರ್ಡ್​​ಗೆ ನೀಡಿ ಪ್ರಮಾಣ ಪತ್ರವನ್ನು ಸಹ ಪಡೆದು ಕೊಂಡಿದೆ.

ನಿನ್ನೆಯಷ್ಟೆ ‘ರಾಮಾಯಣ’ ಸಿನಿಮಾದ ಟ್ರೈಲರ್​​ಗೆ ಸೆನ್ಸಾರ್​​ನಲ್ಲಿ ಪ್ರಮಾಣ ಪತ್ರ ನೀಡಲಾಗಿದ್ದು, ಟ್ರೈಲರ್​​​ಗೆ ಯು ಪ್ರಮಾಣ ಪತ್ರವನ್ನು ಸೆನ್ಸಾರ್ ಮಂಡಳಿ ನೀಡಿದೆ. ಸಿನಿಮಾದ ಟ್ರೈಲರ್​​​ಗಳಿಗೆ ಹೆಚ್ಚಿನ ಚಿತ್ರತಂಡಗಳು ಸೆನ್ಸಾರ್ ಮಾಡಿಸುವುದಿಲ್ಲ. ಆದರೆ ಯಾವ ಸಿನಿಮಾದ ಟ್ರೈಲರ್​​ ಅನ್ನು ಜಾಹೀರಾತು ರೂಪದಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತದೆಯೋ ಅಂಥಹಾ ಟ್ರೈಲರ್​​ಗಳಿಗೆ ಮಾತ್ರವೇ ಸೆನ್ಸಾರ್ ಪ್ರಮಾಣ ಪತ್ರ ಅವಶ್ಯಕವಾಗಿರುತ್ತದೆ. ಈಗ ‘ರಾಮಾಯಣ’ ಸಿನಿಮಾದ ಟ್ರೈಲರ್​​ನ ಸೆನ್ಸಾರ್ ಮಾಡಿಸಿರುವುದು ಗಮನಿಸಿದರೆ, ಈ ಟ್ರೈಲರ್ ಅನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವುದು ಖಾತ್ರಿ ಆಗಿದೆ.

ನಿನ್ನೆ ಒಟ್ಟು ಎರಡು ಟ್ರೈಲರ್​ಗಳನ್ನು ಸೆನ್ಸಾರ್ ಮಾಡಿಸಲಾಗಿದೆ. ಎರಡೂ ಟ್ರೈಲರ್‌ನ ಅವಧಿಯು ಸರಿ ಸುಮಾರು 4 ನಿಮಿಷಗಳಾಗಿವೆ. CBFC ವೆಬ್‌ಸೈಟ್‌ನಲ್ಲಿ ‘ರಾಮಾಯಣ’ ಟ್ರೈಲರ್‌ಗೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಳ್ಳಲಾಗಿದೆ. ‘ಟ್ರೈಲರ್ – ರಾಮಾಯಣ 3D’ ಎಂದು ಹೆಸರಿಸಲ್ಪಟ್ಟಿದ್ದು, ಇದರ ಅವಧಿ 4 ನಿಮಿಷ 15 ಸೆಕೆಂಡುಗಳು. ಇನ್ನೊಂದು ‘ಥಿಯೇಟ್ರಿಕಲ್ ಟ್ರೈಲರ್ – ರಾಮಾಯಣ 3D’ ಎಂದು ಹೆಸರಿಸಲ್ಪಟ್ಟಿದ್ದು, ಇದರ ಅವಧಿ 4 ನಿಮಿಷಗಳು.

ಇದನ್ನೂ ಓದಿ:ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಸ್ಟಾರ್ ನಟ ರಣ್​​ಬೀರ್ ಕಪೂರ್: ಸಿನಿಮಾ ಯಾವುದು?

ಕಳೆದ ವರ್ಷ ಜುಲೈ 3 ರಂದು ಮೊದಲ ಸಣ್ಣ ಟೀಸರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಈ ವರ್ಷದ ಆರಂಭದಲ್ಲಿ, ಏಪ್ರಿಲ್ 2 ರಂದು ಹನುಮ ಜಯಂತಿಯಂದು, ರಣಬೀರ್ ಕಪೂರ್ ನಿರ್ವಹಿಸಿರುವ ಶ್ರೀರಾಮನ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ‘ರಾಮ’ ಎಂಬ ಟೀಸರನ್ನು ಬಿಡುಗಡೆ ಮಾಡಲಾಗಿತ್ತು. ಆ ಟೀಸರ್ 2 ನಿಮಿಷ 38 ಸೆಕೆಂಡುಗಳ ಅವಧಿಯನ್ನು ಹೊಂದಿದ್ದು, ಅದಕ್ಕೂ ‘U’ ಪ್ರಮಾಣಪತ್ರ ಸಿಕ್ಕಿತ್ತು.

‘ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ‘ದಂಗಲ್’ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶಿಸುತ್ತಿದ್ದು, ನಮಿತ್ ಮಲ್ಹೋತ್ರಾ ನಿರ್ಮಿಸುತ್ತಿದ್ದಾರೆ. ಸಂಗೀತವನ್ನು ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಝೀಮರ್ ಸಂಯೋಜಿಸಿದ್ದಾರೆ. ಇದು ಎರಡು ಭಾಗಗಳ ಚಿತ್ರವಾಗಿದ್ದು, ಮೊದಲ ಭಾಗವು 2026ರ ದೀಪಾವಳಿಗೆ ಮತ್ತು ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:38 am, Thu, 16 July 26

Loading...
Unable to load recommendations.
Follow Us